Breaking News

ಬೆಂಗಳೂರಲ್ಲಿ ಮಹಿಳೆಯರಿಗೆ ಉಚಿತ ಮದ್ಯ : ಮಾಲೀಕರ ತಂತ್ರ

Spread the love

ಬೆಂಗಳೂರಲ್ಲಿ ಮಹಿಳೆಯರಿಗೆ ಉಚಿತ ಮದ್ಯ : ಮಾಲೀಕರ ತಂತ್ರ

ಬೆಂಗಳೂರು :
ನಗರದ ಹಲವು ಪಬ್ ಗಳಲ್ಲಿ ಗಳಲ್ಲಿ ಮಹಿಳೆಯರಿಗೆ ಉಚಿತ ಮದ್ಯ ನೀಡಲು ಮಾಲೀಕರು ಮುಂದಾಗಿದ್ದಾರೆ. ಕೋರಮಂಗಲ, ಇಂದಿರಾ ನಗರ, ವೈಟ್ ಫೀಲ್ಡ್, ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪಬ್ ಸಂಖ್ಯೆ ಹೆಚ್ಚಿದೆ. ಇವುಗಳಲ್ಲಿ ಪಾರ್ಟಿ ಆಯೋಜಿಸಲಾಗುತ್ತದೆ. ವಾರದ ಅಂತ್ಯದಲ್ಲಿ ವಿಶೇಷ ಪಾರ್ಟಿ ನಡೆಸಲಾಗುತ್ತದೆ.

ಕೋವಿಡ್ ವೇಳೆ ಪಬ್ ಬಂದ್ ಆಗಿದ್ದರಿಂದ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ನಂತರದ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇದ್ದು ನಿಗದಿಯಷ್ಟು ವಹಿವಾಟು ನಡೆಯುತ್ತಿಲ್ಲ. ಆದ್ದರಿಂದ ಗ್ರಾಹಕರನ್ನು ಸೆಳೆಯಲು ಮಾಲೀಕರು ಇದೀಗ ವಿಶೇಷ ಕೊಡುಗೆ ನೀಡುತ್ತಿದ್ದಾರೆ.

ಪಬ್ ಗಳಲ್ಲಿ ಮದ್ಯ ಮಾರಾಟ ಮತ್ತು ಊಟ ಪೂರೈಕೆಗೆ ಅನುಮತಿ ಇದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಜನ ಪಬ್ ಗಳತ್ತ ಮುಖ ಮಾಡಿದ್ದಾರೆ. ಆದರೆ ಈ ಸಂಖ್ಯೆ ಹೆಚ್ಚುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು ಉದ್ದೇಶದಿಂದ ಮಹಿಳೆಯರಿಗೆ ಉಚಿತ ಮದ್ಯ ನೀಡಲು ಮಾಲೀಕರು ತೀರ್ಮಾನಿಸಿದ್ದಾರೆ. ವಾರಾಂತ್ಯದ ವಿಶೇಷ ಪಾರ್ಟಿಗಳಲ್ಲಿ ಭಾಗವಹಿಸುವ ಮಹಿಳೆಯರಿಗೆ ಉಚಿತ ಮದ್ಯ ಪೂರೈಸಲಾಗುತ್ತದೆ. ಈ ಬಗ್ಗೆ ಜಾಹೀರಾತು ನೀಡಲಾಗಿದೆ. ಮದ್ಯ ನೀಡುವುದರಿಂದ ಗ್ರಾಹಕರ ಸಂಖ್ಯೆ ಹೆಚ್ಚುವ ಭರವಸೆಯನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

four × two =