Breaking News

ನಾವೆಲ್ಲಾ ಶ್ರೇಷ್ಠ ಪರಂಪರೆಯವರಾಗಿದ್ದು, ಗುರುವನ್ನು ದೇವರೆಂದು ನೋಡುತ್ತೇವೆ-ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ!

Spread the love

ನಾವೆಲ್ಲಾ ಶ್ರೇಷ್ಠ ಪರಂಪರೆಯವರಾಗಿದ್ದು, ಗುರುವನ್ನು ದೇವರೆಂದು ನೋಡುತ್ತೇವೆ-ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ!

ಯುವ ಭಾರತ ಸುದ್ದಿ ಗೋಕಾಕ : ನಾವೆಲ್ಲಾ ಶ್ರೇಷ್ಠ ಪರಂಪರೆಯವರಾಗಿದ್ದು, ಗುರುವನ್ನು ದೇವರೆಂದು ನೋಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.ಶುಕ್ರವಾರದಂದು ತಾಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯ ೨೦೦೧-೦೨ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹಿತರ ಅಪೂರ್ವ ಸಂಗಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ತಂದೆ,ತಾಯಿ , ಗುರುಗಳ ಋಣತಿರಿಸಲು ಸಾಧ್ಯವಿಲ್ಲ ಇವರು ನಮ್ಮ ಬದುಕನ್ನು ಕಟ್ಟಿಕೊಟ್ಟ ದೇವರಾಗಿದ್ದಾರೆ. ಗುರುಗಳ ಪರಿಶ್ರಮದ ಫಲವಾಗಿ ನಾವಿಂದು ನೆಮ್ಮದಿಯ ಬದುಕನ್ನು ಬದುಕುತ್ತಿದ್ದೇವೆ ಗುರು ವಂದನೆ ಕಾರ್ಯಕ್ರಮದ ಮೂಲಕ ಗುರು ಪರಂಪರೆಯನ್ನು ಮುಂದುವರೆಸುತ್ತಿರುವದು ಮುಂದಿನ ಪಿಳಿಗೆಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸುಸಂಸ್ಕೃತರಾಗಿ ಸಂಸ್ಕಾರಯುತ ನಾಡನ್ನು ಕಟ್ಟುವಂತೆ ಕರೆ ನೀಡಿದರು.
ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ರ್ಯ್ಯಾಂಗ್ಲರ ಡಿ.ಸಿ.ಪವಟೆ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಯಿತು. ವೇದಿಕೆಯ ಮೇಲೆ ಗ್ರಾಮೀಣ ವಿದ್ಯಾವರ್ಧಕ ಸಂಘದ ಚೆರಮನ್ ಎಂ.ಆರ್.ಕಮತ , ಜಮಖಂಡಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಾಯ್,ವಾಯ್ ಕೊಕ್ಕನವರ, ಶಿಕ್ಷಕರುಗಳಾದ ಎಸ್.ಎಂ ಗುದಗನವರ, ಎಂ.ಎನ್ ಗಾಣಗಿ , ಎಲ್.ಪಿ ಪಾಟೀಲ, ಎಂ.ಪಿ ಕೊಣ್ಣೂರ, ಎಸ್.ಎಚ್.ಹಿರೇಮಠ, ಎಂ.ಎ ಕಡಕೋಳ, ಬಿ.ಎನ್.ನರಗನ್ನವರ, ಎಸ್.ಆರ್.ಕಮತ, ಬಿ.ಎಸ್.ಮಾಠ, ಜಿ.ಎಂ ಕಡಖಬಾಂವಿ, ಒ.ಎನ್.ಲಮಾಣಿ, ಎಂ.ಎಸ್.ಮುರಗೋಡ, ಎ.ಎನ್.ತೋಟಗಿ, ಆರ್.ವ್ಹಿ ದೇಮಶೆಟ್ಟಿ, ಸಿ.ಎಂ ಪಾಠಾಣ, ಕೆ.ಪಿ.ತಹಶೀಲ್ದಾರ್ ಇದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

11 + seven =