ಗೋಕಾಕ: ಪ್ರವಾಹ ಸಮಸ್ಯೆ ಎದುರಾದರೆ ಅದನ್ನು ಎದುರಿಸುವ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೂಳೆಪ್ಪಗೋಳ ಹೇಳಿದರು.
ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಪ್ರವಾಹ ಸಮಸ್ಯೆ ಇನ್ನೂ ಎದುರಾಗಿಲ್ಲ. ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಮತ್ತು ಶಿರೂರು ಡ್ಯಾಂನಿಂದ ನೀರು ಬಿಡುಗಡೆಯಾಗಿದೆ ಹೀಗಾಗಿ ನದಿಗಳು ತುಂಬಿ ಹರಿಯುತ್ತಿವೆ. ಹಿಡಕಲ್ ಜಲಾಶಯ ಇನ್ನೂ ಅರ್ಧದಷ್ಟು ಖಾಲಿಯಿದೆ. ಅದು ಭರ್ತಿಯಾಗುವರೆಗೂ ಪ್ರವಾಹ ಎದುರಾಗುವುದಿಲ್ಲ. ಆದ್ರೂ ತಾಲೂಕಾಡಳಿತದಿಂದ ಎಲ್ಲ ಮುಂಜಾಗೃತಾ ಕಾರ್ಯಗಳನ್ನು ಮಾಡಿದ್ದೇವೆ ಎಂದರು.
ನೋಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದ್ದು ಗಂಜಿ ಕೇಂದ್ರಗಳಿಗಾಘಿ ಕಟ್ಟಡಗಲನ್ನು ಗುರುತಿಸುವಂತೆ ಸೂಚಿಸಲಾಗಿದೆ. ಪ್ರವಾಹ ಎದುರಾಗುವ ಪ್ರತಿ ಗ್ರಾಮಗಳಲ್ಲೂ ಅಧಿಕಾರಿಗಳನ್ನು ನೇ ನೇಮಿಸಲಾಗಿದೆ. ನದಿ ದಡದಲ್ಲಿರುವ ಜನರು 24 ಗಂಟೆ ಜಾಗೃತಿಯಿಂದಿರಲು ಮತ್ತು ಮುಂಜಾಗೃತೆಯಾಗಿ ಎತ್ತರದ ಪ್ರದೇಶಗಳಿಗೆ ತೆರಳಲು ಮನವಿ ಮಾಡಿದರು.
ನದಿಗಳ ಹರಿವು ಮೇಲೆ ನಿಗಾಃ ಇಡಲಾಗಿದ್ದು ಪ್ರವಾಹ ಸ್ಥಿತಿ ಎದುರಾದರೆ ಅದನ್ನು ನಿರ್ವಹಿಸಲು ತಾಲೂಕಾಡಳಿತ ಸಜ್ಜಾಗಿದೆ ಎಂದರು.