Breaking News

ಪೋಲಿಸರ ಭರ್ಜರಿ ಬೇಟೆ.! ಅಂದರ್ ಬಾಹರ್ ಆಟಗಾರರು ಅಂದರ್.!

Spread the love

ಜೂಜಾಟದಲ್ಲಿ ತೋಡಗಿದ್ದ 26ಜನರು ಬಂಧಿಸಿ, 1ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡ ಪೋಲಿಸ್

ಯುವಭಾರತ ಸುದ್ದಿ:ಮಂಗಳವಾರ ರಾತ್ರಿ ಭರ್ಜರಿ ಬೇಟೆಯಾಡಿದ ಗೋಕಾಕ ಪೋಲಿಸರು ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ತೋಡಗಿದ್ದ 26ಜನರು ಬಂಧಿಸಿ, 1ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಎಸ್‌ಪಿ ಲಕ್ಷö್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಪ್ರೋಬೇಷನರಿ ಡಿವೈಎಸ್‌ಪಿ ಡಿ ಎಚ್ ಮುಲ್ಲಾ ಮತ್ತು ಸಿಪಿಐ ಗೋಪಾಲ ರಾಠೋಡ ನೇತ್ರತ್ವದಲ್ಲಿ ದೀಪಾವಳಿ ಕಡೆಯ ಪಾಡ್ಯ ಹಬ್ಬದ ದಿನದಂದು ಏಕಕಾಲಕ್ಕೆ ನಾಲ್ಕು ಕಡೆ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೋಡಗಿದ್ದವರನ್ನು ಬಂಧಿಸಿದ್ದಾರೆ. ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಸುನೀಲ ಸುರೇಶ ಪತ್ತಾರ, ವಿಶ್ವಾಸ ಪ್ರಲ್ಹಾದ ಸುಣಧೋಳಿ, ಸಮೀರ ಪ್ರಲ್ಹಾದ ಸುಣಧೋಳಿ, ಶಿವಪ್ಪ ಗಣಪತಿ ಶಿಂತ್ರಿ, ಮಹೇಶ ಮಠಪತಿ, ಹರೀಶ ಅಶೋಕ ಪಾಟೀಲ, ಪುಶ್ಕರ ಅಭಿನಂದನ ಅಂಗಡಿ, ಮೊಶಿನ್ ಸೈಫುದ್ದಿನ ಮುಧೋಳ, ಮೆಹಬೂಬಸಾಬ ರಾಜೇಸಾಬ ದಳವಾಯಿ, ಮೋಶಿನ ದಸ್ತಗಿರಸಾಬ ಪರೀಟ, ಆಸೀಫ ಅಬ್ದುಲಖಾದೀರ ಶಹಾಪೂರ, ಮೋಶಿನ್ ಸೈಫುದ್ದಿನ ಮುಧೋಳ, ಇಬ್ರಾಹಿಂ ಶೌಕತಸಾಬ ಅತ್ತಾರ, ಮದಾರಸಾಬ ಮೆಹಬೂಬಸಾಬ ಮುಲ್ಲಾ, ಮೋಮಿನ್, ಜ್ಯೋತಿಭಾ ಲಕ್ಷ್ಮಣ ಖನಗಾಂವಿ, ಮದರಸಾಬ ಮೆಹಬೂಬಸಾಬ ಮೊಗಲ್, ಸದ್ದಾಂ ಅಬ್ದುಲ್ ಪಟೇಲ, ಆಕಾಶ ಬಾಬುರಾವ ಮೋಕಾಶಿ, ಸಲೀಂ ಮಲ್ಲಿಕ್, ಮಲ್ಲಿಕ ಅಬ್ದುಲ್ ಪಟೇಲ, ಆಕಾಶ ಮಹಾದೇವ ತಳವಾರ, ಮಹಾಂತೇಶ ವಿಲಾಸ ಕಳ್ಳಿಮನಿ, ವಿಠ್ಠಲ ಕರೇಪ್ಪ ಬಸಳಿಗುಂದಿ, ಆನಂದ ಲಕ್ಷ್ಮಣ ವಾಲಿಕಾರ, ದಸ್ತಗೀರ ನಿಸಾರಸಾಬ ಜಮಾದಾರ, ಬಂಧಿತರು. ನಿಖಿಲ್ ಹೊಸಮನಿ, ಸಲೀಂ ಮಸ್ತಾನಸಾಬ ಮೋಮಿನ್, ಮೆಹಬೂಬ್ ಮಹ್ಮದಿಸಾಕ ದೇಸಾಯಿ, ಮೌಲಾ ನಬಾಬಸಾಬ ಫುಲ್ತಾಂಬೆ ಜೂಜಾಟ ಆಡುತ್ತಿದ್ದ ಸ್ಥಳದಿಂದ ಓಡಿಹೊಗಿದ್ದಾರೆ.
ದಾಳಿಯಲ್ಲಿ ಪೋಲಿಸ್ ಸಿಬ್ಬಂಧಿಗಳಾದ ಎಎಸ್‌ಐ ಆರ್ ಎಚ್ ಮುಲ್ಲಾ, ಕೆ ಆರ್ ಹಕ್ಯಾಗೋಳ, ಪಿ ಎಸ್ ಸಿದ್ನಾಳ, ಕುಮಾರ ಈಳಿಗೇರ, ಮಂಜು ಹುಚ್ಚಗೌಡರ, ನಾಗಪ್ಪ ಬೆಳಗಲಿ, ಮಾರುತಿ ಕೆಂಪನ್ನವರ, ಉದಯ ಪೂಜೇರಿ ಇದ್ದರು.
ಬಂಧನದಲ್ಲಿದ್ದ ವ್ಯಕ್ತಿಗಳ ವಸ್ತುಗಳು ವಾಪಸ್ಸ: ಮಂಗಳವಾರ ಮಧ್ಯ ರಾತ್ರಿ ಪೋಲಿಸ್ ಇಲಾಖೆ ಭರ್ಜರಿ ದಾಳಿ ನಡೆಸಿದ್ದು, ಬಂಧಿಸಿದ ಜೂಜುಕೋರರ ಮೊಬೈಲ್ ಹಾಗೂ ಬೈಕಗಳನ್ನು ಪೋಲಿಸರು ಹೊಂದಾಣಿಕೆಯೊಂದಿಗೆ ಬಿಟ್ಟು ಕಳಿಸಿದ್ದಾರೆಂಬ ಮಾತುಗಳು ನಗರದ ಅಲ್ಲಲ್ಲಿ ಕೇಳಿ ಬರುತ್ತಿವೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

13 − 12 =