Breaking News

ಹೆಸ್ಕಾಂ ಅಕ್ರಮ-ಸಕ್ರಮ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಲ್ಲಿ ಮನವಿ ಮಾಡಿಕೊಂಡ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇದೇ ಸೆಪ್ಟೆಂಬರ್ 25 ರ ಒಳಗೆ ಶುಲ್ಕ ಮತ್ತು ಭದ್ರತಾ ಠೇವಣ ಪಾವತಿಸಿ

Spread the love

 

ಹೆಸ್ಕಾಂ ಅಕ್ರಮ-ಸಕ್ರಮ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಲ್ಲಿ ಮನವಿ ಮಾಡಿಕೊಂಡ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ..!

ಇದೇ ಸೆಪ್ಟೆಂಬರ್ 25 ರ ಒಳಗೆ ಶುಲ್ಕ ಮತ್ತು ಭದ್ರತಾ ಠೇವಣ ಪಾವತಿಸಿ.!

ಸುದ್ದಿ ಮತ್ತು ಜಾಹೀರಾತುಗಾಗಿ ಸಂಪರ್ಕಿಸಿ 9482697576

 

 

ಯುವ ಭಾರತ ಸುದ್ದಿ,  ಗೋಕಾಕ್ : ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ವ್ಯಾಪ್ತಿಯ ರೈತರು ತಮ್ಮ ಪಂಪಸೆಟ್‍ಗಳಿಗೆ ಮೂಲ ಸೌಕರ್ಯಗಳು ಅಗತ್ಯವಿದ್ದಲ್ಲಿ ಶುಲ್ಕ ಮತ್ತು ಭದ್ರತಾ ಠೇವಣ ಯನ್ನು ಹೆಸ್ಕಾಂಗೆ ಪಾವತಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರೈತರಲ್ಲಿ ಕೋರಿದ್ದಾರೆ.

ಅಕ್ರಮ-ಸಕ್ರಮ ಯೋಜನೆಯಡಿ ಆರ್‍ಆರ್ ಸಂಖ್ಯೆಗಳನ್ನು ಪಡೆದು 50 ರೂ. ನೋಂದಣ ಶುಲ್ಕ ಪಾವತಿಸಿದ ರೈತರು ತಮ್ಮ ಅನುಕೂಲದ ಪ್ರಕಾರ ಸರ್ವಿಸ್ ವೈರ್‍ಗಳ ಮೂಲಕ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಪರಿವರ್ತಕಗಳು ಹೆಚ್ಚುವರಿ ಭಾರ ಹೊಂದಿದ್ದು, ಪದೇ ಪದೇ ವಿಫಲವಾಗುತ್ತಿವೆ. ಇದರಿಂದ ರೈತರಿಗೂ ಮತ್ತು ಹೆಸ್ಕಾಂಗೆ ಹಾನಿಯಾಗುತ್ತಿದೆ ಎಂದು ಹೇಳಿದ್ದಾರೆ.

ಈಗಾಗಲೇ ಮೂಡಲಗಿ ತಾಲೂಕಿನಲ್ಲಿ ಈ ಯೋಜನೆಯಡಿ ಸುಮಾರು 7076 ರೈತರು ನೋಂದಣ ಶುಲ್ಕ ಪಾವತಿಸಿದ್ದು, ಗೋಕಾಕ ತಾಲೂಕಿನಲ್ಲಿ 3361 ರೈತರು ನೋಂದಣ ಶುಲ್ಕ ಪಾವತಿಸಿದ್ದಾರೆ. ಪಂಪಸೆಟ್‍ಗಳಿಗೆ ಮೂಲ ಸೌಕರ್ಯಗಳಾದ ಟ್ರಾನ್ಸ್‍ಫಾರ್ಮರ್(ಟಿ.ಸಿ) ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸುವ ಅವಶ್ಯಕತೆ ಇದ್ದವರು ಇದೇ ಸೆಪ್ಟೆಂಬರ್ 25 ರ ಒಳಗೆ ಮೂಲ ಸೌಕರ್ಯಗಳ ಶುಲ್ಕ ರೂ. 10000 ಮತ್ತು ಪ್ರತಿ ಎಚ್‍ಪಿಗೆ 1300 ರೂ.ಗಳಂತೆ ಭದ್ರತಾ ಠೇವಣ ಯನ್ನು ಪಾವತಿಸಿದರೆ ಅಂತಹವರಿಗೆ ಶೀಘ್ರದಲ್ಲಿಯೇ ಅನುಕೂಲ ಮಾಡಿಕೊಡಲಾಗುವುದು. ಅಕ್ರಮ-ಸಕ್ರಮ ಯೋಜನೆಯ ಸದ್ಬಳಕೆಯಿಂದ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸುವುದಿಲ್ಲ. ಇದರಿಂದ ರೈತರು ಗುಣಮಟ್ಟದ ವಿದ್ಯುತ್‍ನ್ನು ಪಡೆಯುತ್ತಾರೆಂದು ಅವರು ಹೇಳಿದ್ದಾರೆ.

ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಹೆಸ್ಕಾಂ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರವೇ ಪಾವತಿಸಬೇಕು. ರೈತರಿಗೆ ಮೂಲ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಿಕೊಡುವಂತೆ ಈಗಾಗಲೇ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಘಟಪ್ರಭಾ ಮತ್ತು ಗೋಕಾಕ ಉಪವಿಭಾಗಗಳ ಸುಮಾರು 10437 ಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. 2018 ರ ಡಿಸೆಂಬರ್ 31 ರೊಳಗೆ 50 ರೂ. ಪಾವತಿಸಿದ ರೈತರಿಗೆ ಮಾತ್ರ ಈ ಅಕ್ರಮ-ಸಕ್ರಮ ಯೋಜನೆಯು ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.

ವಿದ್ಯುತ್ ವಿತರಣಾ ಕೇಂದ್ರಗಳು ಮೇಲ್ದರ್ಜೆಗೆ : ಗೋಸಬಾಳ ಗ್ರಾಮದಲ್ಲಿ ಈಗಾಗಲೇ 110 ಕೆವ್ಹಿ ಸಾಮಥ್ರ್ಯದ ವಿದ್ಯುತ್ ಉಪಕೇಂದ್ರದ ಟೆಂಡರ್ ಕರೆಯಲಾಗಿದ್ದು, ಕಾಮಗಾರಿಯು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಈ ಉಪಕೇಂದ್ರದಿಂದ ಸುತ್ತಮುತ್ತಲಿನ ಗೋಸಬಾಳ, ಬೆಟಗೇರಿ, ಬಿಲಕುಂದಿ, ತಪಸಿ, ಕೆಮ್ಮನಕೋಲ, ನಿಂಗಾಪೂರ, ಕೌಜಲಗಿ, ಕಳ್ಳಿಗುದ್ದಿ, ರಡ್ಡೇರಹಟ್ಟಿ, ಮುಂತಾದ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಹಳ್ಳೂರ, ತಿಗಡಿ, ಅರಳಿಮಟ್ಟಿ ಗ್ರಾಮಗಳ 33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಗಳನ್ನು 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಗಳನ್ನಾಗಿ ಉನ್ನತಿಕರೀಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ಈ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ನಿಗಮಕ್ಕೆ ಅಗತ್ಯವಿರುವ ಜಮೀನನ್ನು ಸಹ ನೀಡಲಾಗಿದೆ. ತುಕ್ಕಾನಟ್ಟಿ ಗ್ರಾಮಕ್ಕೆ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮಂಜೂರಾತಿ ದೊರೆತಿದ್ದು, ಈ ಎಲ್ಲ ಕಾರ್ಯಗಳಿಂದ ಮುಂಬರುವ ದಿನಗಳಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಆಗಲಿದೆ ಎಂದು ಶಾಸಕ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

 


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

four × five =