Breaking News

ತಾಪಂನಲ್ಲಿಯೇ ಅಧಿಕಾರ ಸ್ವೀಕರಿಸಿರುವ ಪಿಡಿಒ ಗ್ರಾಪಂಗೆ ಸುಳಿಯಲೇ ಇಲ್ಲ..!!

Spread the love

ತಾಪಂನಲ್ಲಿಯೇ ಅಧಿಕಾರ ಸ್ವೀಕರಿಸಿರುವ ಪಿಡಿಒ ಗ್ರಾಪಂಗೆ ಸುಳಿಯಲೇ ಇಲ್ಲ..!!

ಯುವ ಭಾರತ ಸುದ್ದಿ, ಬೆಳಗಾವಿ: ಸಸ್ಪೆಂಡ್ ಆಗಿ ಮನೆಯಲ್ಲಿಯೇ ಕುಳಿತುಕೊಂಡಿದ್ದ ಭ್ರಷ್ಟ ಪಿಡಿಒ ಶ್ರೀದೇವಿ ಹಿರೇಮಠ ಎಲ್ಲಿಲ್ಲದ ಕಸರತ್ತು ನಡೆಸಿ ಅಧಿಕಾರದ ಗದ್ದುಗೆ ಏರಿದ್ದು, ತಾಲೂಕು ಪಂಚಾಯತ್‌ನಲ್ಲಿಯೇ ಸುಳೇಭಾವಿಯ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಗ್ರಾಪಂಗೆ ಬುಧವಾರದವರೆಗೂ ಸುಳಿಯಲೇ ಇಲ್ಲ.

ಸುಳೇಭಾವಿ ಊರಿಗೆ ನಿಯೋಜನೆಗೊಂಡಿರುವ ಆದೇಶ ಪ್ರತಿ ಪಡೆದು ಖುಷಿ ಖುಷಿಯಾಗಿದ್ದ ಹಿರೇಮಠಗೆ ಈಗ ಎಲ್ಲಿಲ್ಲದ ತಲೆನೋವಾಗಿದೆ. ಸುಳೇಭಾವಿ ಗ್ರಾಮ ಪಂಚಾಯತ್‌ಗೆ ಒಂದು ವೇಳೆ ಹಿರೇಮಠ ಬಂದರೆ, ಇವರಿಂದ ಅನ್ಯಾಯಕ್ಕೊಳಗಾದ ಕುಟುಂಬಸ್ಥರು ಮುತ್ತಿಗೆ ಹಾಕಲು ತಿರ್ಮಾನ ಮಾಡಿದ್ದಾರೆ.

ಅಮಾನತುಗೊಂಡರೂ ಕೆ.ಕೆ. ಕೊಪ್ಪ ಮತ್ತು ಸುಳೇಭಾವಿ ಅಂತಹ ಎರಡು ದೊಡ್ಡದಾದ ಗ್ರಾಮ ಪಂಚಾಯತ್‌ಗಳಿಗೆ ಜವಾಬ್ದಾರಿ ಪಡೆದಿರುವ ಹಿರೇಮಠ ಅವರ ಸಾಹಸ ಮೆಚ್ಚಲೆಬೇಕಾಗಿದೆ. ಮುಂದೆ ಆಗಬಹುದಾದ ಹಗರಣಗಳಿಗೆ ಮೇಲಿನ ಅಧಿಕಾರಿಗಲೇ ಜವಾಬ್ದಾರಿ ಆಗುತ್ತಾರೆ ಎನ್ನುವುದು ಎನ್ನುವುದು ಎಲ್ಲಾ ಕಡೆಗಳಲ್ಲೂ ಹರಿದಾಡುತ್ತಿದೆ.

ಮಂಗಳವಾರ ರಾತ್ರಿಯಿಂದ ಬಿತ್ತರವಾಗುತ್ತಿರುವ ಭ್ರಷ್ಟ ಅಧಿಕಾರಿ ಬಗೆಗಿನ ಸರಣಿ ವರದಿಗಳಿಗೆ ಜಿಲ್ಲೆಯ ವಿವಿಧ ಕಡೆಗಳಿಂದ

 

ಉತ್ತಮ ಸ್ಪಂದನೆ ಸಿಕ್ಕಿದೆ. ‘ಯುವಭಾರತ’ ಮಾಧ್ಯಮಕ್ಕೆ ಅನೇಕರು ಕರೆ ಮಾಡಿ ಭ್ರಷ್ಟ ಅಧಿಕಾರಿಯ ಕರ್ಮಕಾಂಡ ತಿಳಿಸುತ್ತಿದ್ದಾರೆ.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

one × 3 =