Breaking News

ಗೋಕಾಕ : ರೋಟರಿ ಸಂಸ್ಥೆಯಿಂದ ಸರಕಾರಿ ಶಾಲೆಗೆ ಗ್ರೀನ್ ಬೋರ್ಡ್ ವಿತರಣೆ

Spread the love

ಗೋಕಾಕ : ರೋಟರಿ ಸಂಸ್ಥೆಯಿಂದ ಸರಕಾರಿ ಶಾಲೆಗೆ ಗ್ರೀನ್ ಬೋರ್ಡ್ ವಿತರಣೆ

ಯುವ ಭಾರತ ಸುದ್ದಿ ಗೋಕಾಕ :
ರೋಟರಿ ಸಂಸ್ಥೆ ಶೈಕ್ಷಣಿಕ , ಆರೋಗ್ಯ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಜಗತ್ತಿನಾದ್ಯಂತ ತೊಡಗಿಸಿಕೊಂಡಿದೆ ಎಂದು ರೋಟರಿ ಸದಸ್ಯ ಸತೀಶ ಬೆಳಗಾವಿ ಹೇಳಿದರು.
ಗುರುವಾರದಂದು ನಗರದ ಜಿ.ಆರ್.ಬಿ.ಸಿ.ಕಾಲನಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥಾಪನ ದಿನಾಚರಣೆಯ ನಿಮಿತ್ತ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಸರಕಾರಿ ಶಾಲೆಗಳಿಗೆ ಯೂರೋಪಿನ್ಸ ರವರ ಸಹಯೋಗದೊಂದಿಗೆ ೫೯ ಗ್ರೀನ್ ಬೋರ್ಡಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು , ಸಂಘಸAಸ್ಥೆಗಳು ಹಾಗೂ ಸರಕಾರದ ಸೌಲಭ್ಯಗಳ ಸದುಪಯೋಗದಿಂದ ಪ್ರತಿಭಾವಂತರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿರೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ್ ನಾಡಗೌಡ, ರೋಟರಿ ಸೇವಾ ಸಂಘದ ಕಾರ್ಯದರ್ಶಿ ಸೋಮಶೇಖರ್ ಮಗದುಮ್ಮ, ಮುಖ್ಯೋಪಾಧ್ಯಾಯ ಎಸ್.ಎ.ಮುತಾಲಿಕದೇಸಾಯಿ ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

6 + 3 =