Breaking News

ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ : ಕೆಲಸಗಾರನ ಬಂಧನ, 36.81 ಲಕ್ಷ ಮೌಲ್ಯದ 643 ಗ್ರಾಂ ಚಿನ್ನಾಭರಣ ವಶ

Spread the love

ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ : ಕೆಲಸಗಾರನ ಬಂಧನ, 36.81 ಲಕ್ಷ ಮೌಲ್ಯದ 643 ಗ್ರಾಂ ಚಿನ್ನಾಭರಣ ವಶ

ಯುವ ಭಾರತ ಸುದ್ದಿ ಬೆಳಗಾವಿ :
ಕಳೆದ ಡಿಸೆಂಬರನಲ್ಲಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಚಿನ್ನಾಭರಣ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣ ವನ್ನು ಬೇಧಿಸಿರುವ ಹುಕ್ಕೇರಿ ಪೊಲೀಸರು
ಬಂಧಿತನಿಂದ 36.81 ಲಕ್ಷ ಮೌಲ್ಯದ ಅರ್ಧ ಕೆಜಿ ಕಿಂತಲೂ ಹೆಚ್ಚಿನ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹುಕ್ಕೇರಿಯ ಚಿನ್ನಾಭರಣ ಅಂಗಡಿ ಯೊಂದರಲ್ಲಿ 643 ಗ್ರಾಂ. ಬಂಗಾರದ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗೋಕಾಕ ಉಪವಿಭಾಗದ ಡಿಎಸ್ ಪಿ ದೂದಪೀರ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಹುಕ್ಕೇರಿ ಪೊಲೀಸ್ ಇನ್ಸಪೆಕ್ಟರ ಮತ್ತು ಅವರ ತಂಡದ ಸಿಬ್ಬಂದಿಗಳು ದಿ. 2-01-2023ರಂದು
ಕಳ್ಳತನವಾದ ಚಿನ್ನಾಭರಣ ಅಂಗಡಿಯಲ್ಲಿ ಸೆಲ್ಸಮನ್ ಎಂದು ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿ ಅದೇ ದಿನ ಬಂಧಿತನಿಂದ 121 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು.

ಅದರಂತೆ ಫೆ. ದಿ. 23 ರಂದು ಕಳ್ಳತನವಾಗಿದ್ದ ಉಳಿದ 522 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಎಮ್.
ಎಮ್ ತಹಶೀಲ್ದಾರ, ಎಎಸ್ ಐ ಎ.ಎಸ್.ಸನದಿ, ಹಾಗೂ ಸಿಬ್ಬಂದಿಗಳಾದ ಸಿ.ಡಿ. ಪಾಟೀಲ, ಲಕ್ಷ್ಮಣ ಎಸ್. ಕೋಚರಿ,
ಮಂಜುನಾಥ ಕಬ್ಬೂರ, ಗಜಾನನ ಕಾಂಬಳೆ, ಸದ್ದಾಂ ರಾಮದುರ್ಗ, ಅಜೀತ ನಾಯಕ, ಕು. ಸಾವಿತ್ರಿ ಅಂತರಗಟ್ಟಿ ಈ ಸಿಬ್ಬಂಧಿಗಳ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಶ್ಲಾಘಿಸಿ, ನಗದು ಬಹುಮಾನವನ್ನು ಘೋಷಿಸಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 × 4 =