ಗೋಕಾಕ : ರಾಷ್ಟ್ರೀಯ ಮತದಾರರ ದಿನ ಉದ್ಘಾಟನೆ
ಯುವ ಭಾರತ ಸುದ್ದಿ ಗೋಕಾಕ :
ನಮ್ಮ ದೇಶದ ಮತದರರನ್ನು ಸಬಲೀಕರಣ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿದಾರರನ್ನಾಗಿ ಮಾಡುವುದು. ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುತ ನಾಗರಿಕರಾಗಲು ಅವರಿಗೆ ಸಹಕರಿಸುವುದು ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದು ತಾ.ಪಂ ಅಧಿಕಾರಿ ಮುರಳೀಧರ ದೇಶಪಾಂಡೆ ಹೇಳಿದರು.
ಬುಧವಾರದಂದು ತಾಲೂಕಾಡಳಿತ,ತಾಪಂ, ನಗರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಆಶ್ರಯದಲ್ಲಿ ಹಮ್ಮಿಕೊಂಡ 13 ನೇ ರಾಷ್ಟ್ರೀಯ ಮತದಾರರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಮತದಾರರು ಮಾಡುವ ಆಯ್ಕೆಯೇ ಅಂತಿಮ ನಿರ್ಧಾರವಾಗಿದ್ದು, ಮತದಾನ ನಮ್ಮ ಹಕ್ಕಾಗಿದ್ದು, ಇದರಿಂದ ನಾವು ವಂಚಿತವಾಗಬಾರದು. ಮತದಾರರಿಗೆ ಅನುಕೂಲವಾಗವ ಸಲುವಾಗಿ ಸರಕಾರ ವರ್ಷದಲ್ಲಿ ನಾಲ್ಕು ಬಾರಿ ಮತದಾರರ ಪಟ್ಟಿಯನ್ನು ಪರಿಷ್ಕೃತ ಮಾಡುತ್ತಿದ್ದಾರೆ. ಮತದಾರರು ಇದರ ಲಾಭ ಪಡೆದುಕೊಳ್ಳಬೇಕು. ಯುವ ಮತದಾರರು ಜವಾಬ್ದಾರಿಯಿಂದ ಮತದಾನ ಮಾಡಬೇಕು. ದೇಶದ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ವಿದ್ಯಾರ್ಥಿಗಳು ಇದನ್ನು ಅರಿತು ಮತದಾನ ಮಾಡಬೇಕು ಎಂದು ಹೇಳಿದರು.
ಉತ್ತಮ ಕಾರ್ಯನಿರ್ವಹಿಸಿದ ಬಿ.ಎಲ್.ಓ ಗಳನ್ನು ಸತ್ಕರಿಸಲಾಯಿತು. ನೂತನವಾಗಿ ಮತದಾನದ ಹಕ್ಕು ಪಡೆದ ಯುವಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಪೌರಾಯುಕ್ತ ಶಿವಾನಂದ ಹಿರೇಮಠ, ಪ್ರಾಚಾರ್ಯ ಡಾ.ಆಶಾಲತಾ ತೇರದಾಳ, ರಾಜಶ್ರೀ ಬಿರಾದಾರ, ಆರ್.ಎಚ್.ಮುಲ್ಲಾ, ಎಂ.ಬಿ.ಪಾಟೀಲ, ನ್ಯಾಯವಾದಿ ಪ್ರೇಮಾ ಚಿಕ್ಕೋಡಿ, ಡಾ.ಆರ್.ಎಸ್.ಬಳಿಗಾರ, ಉಪಸ್ಥಿತರಿದ್ದರು.
ಡಾ. ಎಸ್.ಬಿ.ಹೊಸಮನಿ ನಿರೂಪಿಸಿದರು, ಅಭಯ ಆರ್. ಸ್ವಾಗತಿಸಿದರು, ಎ.ವ್ಹಿ.ಪಾಟೀಲ ವಂದಿಸಿದರು