ಗೋಕಾಕ : ವೀರರಾಣಿ ಚನ್ನಮ್ಮನಾಟಕ ಉದ್ಘಾಟನೆ
ಯುವ ಭಾರತ ಸುದ್ದಿ ಗೋಕಾಕ : ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಪ್ರಥಮ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚನ್ನಮ್ಮನವರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು .
ರವಿವಾರದಂದು ಸಾಯಂಕಾಲ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇಲ್ಲಿನ ಶ್ರೀ ಸಿದ್ದೇಶ್ವರ ಸಾಮರಸ್ಯ ವೇದಿಕೆ ಹಾಗೂ ಧಾರವಾಡದ ರಂಗಾಯಣ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ‍್ಯದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರ ಚನ್ನಮ್ಮಳ ಇತಿಹಾಸ ಸಾರುವ ನಾಟಕವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ‍್ಯಕ್ಕೆ ಹಲವಾರು ರಾಜ, ಮಹಾರಾಜರು ತಮ್ಮ ಜೀವವನ್ನು ಕೊಟ್ಟಿದ್ದಾರೆ ಆದರೆ ಬೆಳಗಾವಿ ಜಿಲ್ಲೆಯಿಂದ ಸ್ವಾತಂತ್ರ‍್ಯ ದೊರಕಿಸುವ ನಿಟ್ಟಿನಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಳು ಪ್ರಥಮರಾಗಿ ಹೋರಾಟ ಮಾಡಿದ್ದಾರೆ. ಬಹಳಷ್ಟು ಜನರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದಿದೆ.
ಈ ಇತಿಹಾಸವನ್ನು ತಿಳಿದುಕೊಳ್ಳಬೇಕಾದ ನಾವುಗಳು ಟಿವಿ, ಮೊಬೈಲ್ ನಲ್ಲಿ ಸಿಲುಕಿ ಭಾರತ ಸ್ವಾತಂತ್ರ‍್ಯ ಹೋರಾಟವನ್ನು ಮರೆತ್ತಿದ್ದೇವೆ. ಟಿ.ವಿ ಮೊಬೈಲಗಳಲ್ಲಿ ಇತಿಹಾಸ ತಿಳಿದುಕೊಳ್ಳಬೇಕಾದ ನಾವುಗಳು ಅದರಲ್ಲಿ ಬೇರೆಯದ್ದನ್ನೇ ನೊಡುತ್ತಿದ್ದೇವೆ. ಸೂರ್ಯ ಮುಳುಗದ ಸಾಮ್ರಾಜ್ಯದ ಕಟ್ಟಿದ ಬ್ರಿಟಿಷ್ರನ್ನು ರ ದೇಶ ಬಿಟ್ಟು ಒಡಿಸುವಲ್ಲಿ ಪ್ರಥಮವಾಗಿ ಹೋರಾಡಿದ ವೀರ ಮಹಿಳೆ ರಾಣಿ ಚನ್ನಮ್ಮ ಆದರೆ ಇಂದು ಝಾನ್ಸಿ ರಾಣಿ ಅವಳನ್ನು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ಎಂದು ಬಣ್ಣಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಕನ್ನಡ ಭಾಷೆ ತಲುಪದಿರುವ ಕಾರಣ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರನ್ನು ಮೊದಲ ಹೋರಾಟಗಾರ್ತಿ ಎಂದು ಬನ್ನಿಸಿದುಂಟು ಇದು ಯಾರಿಗೂ ತಿಳಿದಿಲ್ಲ ಆದರೆ ಯುವ ಜನತೆಗೆ ಇದ್ದ ಇತಿಹಾಸವನ್ನು ಇದ್ದಹಾಗೆ ತಿಳಿಸುವ ಮಹತ್ತರ ಕಾರ್ಯವನ್ನು ಮಾಡುವ ಉದ್ದೇಶದಿಂದ ಸಾಮರಸ್ಯ ವೇದಿಕೆ ವತಿಯಿಂದ ರಂಗಾಯಣದ ಕಲಾವಿದರ ಸಹಕಾರದಿಂದ ಈ ಐತಿಹಾಸಿಕ ನಾಟಕವನ್ನು ಆಯೋಜಿಸಲಾಗಿದ್ದು ಎಲ್ಲರೂ ವೀರರಾಣಿ ಚನ್ನಮ್ಮಳ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ, ವೈದ್ಯರಾದ ಮಹಾಂತೇಶ ಕಡಾಡಿ, ರಮೇಶ್ ಪಟ್ಟಗುಂಡಿ, ಚಂದ್ರಶೇಖರ ಕೊಣ್ಣುರ. ಮಲ್ಲಿಕಾರ್ಜುನ ಚುನಮರಿ, ನಾಟಕದ ಪ್ರಧಾನ ನಿರ್ದೇಶಕ ರಮೇಶ್ ಪರವಿನಾಯ್ಕರ್, ಸೋಮಶೇಖರ್ ಮಗದುಮ್, ಅಶೋಕ ಪೂಜಾರಿ, ಸಿದ್ದಲಿಂಗ ದಳವಾಯಿ, ಪ್ರಭು ಚವ್ಹಾಣ, ಬಸವರಾಜ್ ಹುಳ್ಳೇರ, ನಿಂಗಪ್ಪ ಪೀರೋಜಿ, ಆರ್.ಎಂ ಪಾಟೀಲ, ಶಂಕರ ಗಿಡನ್ನವರ, ಚಿತೇಂದ್ರ ಮಾಂಗಳೇಕರ, ಪ್ರಕಾಶ ಮಾದರ, ಮಲ್ಲಿಕಾರ್ಜುನ ಚೌಕಾಶಿ, ಸತೀಶ ನಾಡಗೌಡ, ಓಂಕಾರ ರಾಠೋಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.