ಗೋಕಾಕ : ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆ ಯಶಸ್ವಿ
ಯುವ ಭಾರತ ಸುದ್ದಿ ಗೋಕಾಕ :
ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ಗುರುವಾರ ಬಿಜೆಪಿ ಶಕ್ತಿಕೇಂದ್ರದ ಪ್ರಮುಖರ ಹಾಗೂ ಶಕ್ತಿಕೇಂದ್ರದ ಅಲ್ಪಾವಧಿ ವಿಸ್ತಾರಕರ ಸಭೆ ನಡೆಯಿತು.
ಸಂಚಾಲಕ ಗುರುಪಾದ ಕಳ್ಳಿ,ಸಹ ಸಂಚಾಲಕ ಯಲ್ಲೇಶ ಕೊಲ್ಕಾರ ಸಭೆ ನಡೆಸಿಕೊಟ್ಟರು.
ಗೋಕಾಕ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಪ್ರಧಾನಕಾರ್ಯದರ್ಶಿ ಜಯಾನಂದ ಹುಣಚ್ಯಾಳಿ, ಸ್ಥಳೀಯ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಶಕ್ತಿಕೇಂದ್ರದ ಪ್ರಮುಖರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜ. 21 ರಿಂದ 29 ರವರೆಗೆ ನಡೆಯುವ ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜ. 21 ರಂದು ವಿಜಯಪುರಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಯಾತ್ರೆಗೆ ಚಾಲನೆ ನೀಡಲಿದ್ದಾರೆ. ಆದಕಾರಣ ಪ್ರತಿ ಬೂತ್ ನಲ್ಲಿ ಏಕ ಕಾಲಕ್ಕೆ ಕರಪತ್ರ ಹಂಚುವುದು,ಮನೆ ಮನೆಗೆ ಸ್ಟೀಕರ್ ಹಚ್ಟುವ ಕಾರ್ಯಕ್ರಮ ನಡೆಯಲಿದೆ. ಇದನ್ನು ಅತ್ಯಂತ ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ಮಾಡುವಂತೆ ಸೂಚಿಸಲಾಯಿತು.
ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ.