Breaking News

ಜಾರಕಿಹೊಳಿಯನ್ನ ವಿಶ್ವನಾಥನನ್ನ ಯಾರು ತುಳಿಯಲು ಸಾಧ್ಯವಿಲ್ಲ-ಎಚ್ ವಿಶ್ವನಾಥ.!

Spread the love

ಜಾರಕಿಹೊಳಿಯನ್ನ ವಿಶ್ವನಾಥನನ್ನ ಯಾರು ತುಳಿಯಲು ಸಾಧ್ಯವಿಲ್ಲ-ಎಚ್ ವಿಶ್ವನಾಥ.!


ಗೋಕಾಕ: ಮೈತ್ರಿ ಸರಕಾರದ ಪತನ ಮಾಡಿ, ಬಿಜೆಪಿ ಸರಕಾರ ರಚನೆ ಮಾಡಲು ತ್ಯಾಗ ಮಾಡಿದ ಶಾಸಕರನ್ನು ರಾಜ್ಯ ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ. ಜಾರಕಿಹೊಳಿಯನ್ನ ವಿಶ್ವನಾಥನ್ನ ಯಾರು ತುಳಿಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ ಹೇಳಿದರು.
ರವಿವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ನೇಹಿತ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಸರಕಾರ ರಚನೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದವರು. ನನಗೆ ಮತ್ತು ರಮೇಶ ಜಾರಕಿಹೊಳಿ ಅವರು ಸೇರಿ ಇನ್ನು ಕೆಲವು ಸ್ನೇಹಿತ ಶಾಸಕರಿಗೆ ಸಚಿವ ಸ್ಥಾನ ತಪ್ಪಿಸಲು ರಾಜ್ಯ ಬಿಜೆಪಿ ನಾಯಕರೆ ಷಡ್ಯಂತ್ರ ರೂಪಿಸಿದ್ದರು. ಅಧಿಕಾರ ನೀಡಿದ್ದ ನಮ್ಮನ್ನು ಹಿಂದುಳಿದ ವರ್ಗದವರು ಎಂದು ತುಳಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ವಿರುದ್ಧ ಹಳ್ಳಿಹಕ್ಕಿ ವಿಶ್ವನಾಥ ಗುಡುಗಿದರು.
ನಾನು ವಿಧಾನ ಪರಿಷತ್ ಚುನಾವಣೆಗೆ ಸ್ಫರ್ಧಿಸಲು ಯಡಿಯೂರಪ್ಪ ಸಹಕರಿಸಲಿಲ್ಲ. ವಿಧಾನ ಪರಿಷತಗೆ ನಾಮಿನೇಟ ಮಾಡಿದರು. ಆದರೆ ಅದರಿಂದ ಸಚಿವನಾಗಲು ಸಾಧ್ಯವಿಲ್ಲ. ಹೀಗಾಗಿ ಸಚಿವ ಸ್ಥಾನದಿಂದ ವಂಚಿತನಾದೆ. ರಾಜ್ಯ ಬಿಜೆಪಿ ನಾಯಕರು ಹಿಂದುಳಿದ ವರ್ಗಗಳ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಲೆ ಬಂದಿದ್ದಾರೆ. ಹೈ ಕಮಾಂಡ ಈ ಬಗ್ಗೆ ಪರಿಶೀಲಿಸಿ ಅಂತವರಿAದ ಬಿಜೆಪಿ ಪಕ್ಷಕ್ಕಾಗುತ್ತಿರುವ ಹಿನ್ನಡೆಯನ್ನು ತಪ್ಪಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಬಗ್ಗೆ ಪ್ರಚಾರಪಡಿಸಬೇಕಾದ ರಾಜ್ಯ ನಾಯಕರು ಮತಾಂಧರಾಗುತ್ತಿದ್ದಾರೆ ಎಂದರು.
ಬಿಜೆಪಿ ಅಷ್ಟೇಅಲ್ಲದೇ ಕಾಂಗ್ರೇಸ್ ಪಕ್ಷದಲ್ಲೂ ಸಹ ಮಾಜಿ ಸಿಎಮ್ ಹಾಗೂ ಅಹಿಂದ ನಾಯಕ ಸಿದ್ಧರಾಮಯ್ಯ ಅವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಬಲಿಷ್ಠ ಕುರುಬರ ಸಮುದಾಯದ ನಾಯಕರನ್ನು ಕಡೆಗಣಿಸುತ್ತಿರುವ ಪಕ್ಷಗಳಿಗೆ ಮುಂಬರುವ ದಿನಗಳಲ್ಲಿ ಜನರು ತಕ್ಕ ಪಾಠಕಲಿಸಲಿದ್ದಾರೆ. ಕಾಂಗ್ರೇಸ್ ಹಾಗೂ ಬಿಜೆಪಿ ನಾಯಕರುಗಳು ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಅವರ ದಿನದ ದುಡಿಮೆಯ ಬಂಡವಾಳ ಅಂತವರ ವ್ಯಾಪಾರ ಬಹಿಷ್ಕರಿಸುವದು ತಪ್ಪು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೋಮುಸೌಹಾರ್ದತೆ ಕದಡುವ ಕೆಲಸವಾಗಬಾರದು ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತಿಚೇಗೆ ಕುಂದಗೋಳದಲ್ಲಿ ಕುರಿಗಾಹಿ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಕುರುಬ ಸಮುದಾಯದ ಯುವಕನ್ನು ಬಸವನಬಾಗೇವಾಡಿಯಲ್ಲಿ ಗ್ರಾಮ ಗೌಡನು ಥಳಿಸಿರುವ ಘಟನೆ ಖಂಡಿಸಿದ ಎಚ್ ವಿಶ್ವನಾಥರವರು ನಮ್ಮ ದೇಶದಲ್ಲಿ ಹಿಂದುಳಿದ ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸರಕಾರಗಳು ಮುಂದಾಗಬೇಕೆAದರು. ಇಂತಹ ಘಟನೆ ಮರುಕಳಿಸದಂತೆ ಸರಕಾರ ಎಚ್ಚರವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಎನ್ ಹರೀಶ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಮ್ ಎಲ್ ತೋಳಿನವರ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

thirteen − 4 =