Breaking News

ಮಾರುತೇಶ್ವರ, ಈಶ್ವರ ದೇವಾಲಯ ಉದ್ಘಾಟನೆ

Spread the love

ಮಾರುತೇಶ್ವರ, ಈಶ್ವರ ದೇವಾಲಯ ಉದ್ಘಾಟನೆ

ಯುವ ಭಾರತ ಸುದ್ದಿ ಹಂಗರಗಿ :
ಬಸವಾದಿ ಶರಣರ ನಿಜವಾದ ತತ್ವಗಳನ್ನು ಬದುಕಿನಲ್ಲಿ ನಾವು ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಅಪ್ಪುಗೌಡ ಪಾಟೀಲ ಅಭಿಪ್ರಾಯಪಟ್ಟರು
ಹಂಗರಗಿ ಗ್ರಾಮದಲ್ಲಿ ಪುನರ ನಿರ್ಮಾಣಗೊಂಡ ಮಾರುತೇಶ್ವರ ದೇವಾಲಯ ಹಾಗೂ ಈಶ್ವರ ದೇವಾಲಯ ಉದ್ಘಾಟನಾ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಪ್ರತಿಯೊಬ್ಬರು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಬದುಕುವದು ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ಹೇಳಿದರು
ಮಹಿಳೆಯರು ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ತಯಾರು ಮಾಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು ಯುವ ಜನಾಂಗ ದಾರಿ ತಪ್ಪದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ ಬಸವಣ್ಣನವರು ಜಾತಿ ಭೇದ ಲಿಂಗ ಭೇದ ವರ್ಣಭೇದ ಇಲ್ಲದ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿದರು ಮಹಿಳೆಯರಲ್ಲಿ ಸಮಾಜ ಬದಲಾವಣೆ ಮಾಡುವ ಶಕ್ತಿ ಇದೆ ಎಂದು ಹೇಳಿದರು ಜಾತಿ ಧರ್ಮ ಬೇರವಿಲ್ಲದೆ ಎಲ್ಲರೂ ಒಂದಾಗಿ ಹೋಗುವುದೇ ಬಸವಣ್ಣನವರ ಆಶಯವಾಗಿತ್ತು ಎಂದು ಹೇಳಿದರು
ಸಾನಿಧ್ಯ ವಹಿಸಿದ್ದ ಹುಣಶ್ಯಾಳ ಹಿರೇಮಠದ ಆನಂದ ದೇವರು ಮಾತನಾಡಿ ನಮ್ಮ ಧರ್ಮ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು ಹಂಗರಗಿ ಗ್ರಾಮದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು
ಪ್ರವಚನಕಾರರಾದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ ಎಲ್ಲರ ಸಹಕಾರ ಕಾರ್ಯಕ್ರಮಗಳು ನಡೆಯಲು ಕಾರಣವಾಗುತ್ತದೆ ಎಂದು ಹೇಳಿದರು
ವೇದಿಕೆಯ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಣುಕಾ ಮಸೂತಿ ಸಿಸಿ ಮುಕಾರ್ತಿಹಾಳ ಡಾ ಸಿದ್ದು ಬಶೆಟ್ಟಿ ಸಂಗನಗೌಡ ಹನುಮಂತ ಗೊಡಬಿ ರಾಮನಗೌಡ ಬಿರಾದಾರ್ ಮಲ್ಲನಗೌಡ ಬಿರಾದಾರ ಮಹಾಂತೇಶ್ ಬಿರಾದಾರ ಗ್ರಾಮ ಪಂಚಾಯತ್ ಸದಸ್ಯರಾದ ನಿವೇದಿತಾ ಪತ್ತಾರ ಮಾಂತೇಶ್ ಇಂಗಳೇಶ್ವರ ಎಲ್ಲವ್ವ ಚಲವಾದಿ ಗೂಳಪ್ಪ ಜನ್ನಾ ದಾದಾ ಗೌಡ ಪಾಟೀಲ್ ಶಿವಾನಂದ ಬಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
ಶಿಕ್ಷಕರಾದ ಎಸ್ಐ ಮನಗೂಳಿ ಸ್ವಾಗತಿಸಿದರು ಸಿದ್ದು ಬಶೆಟ್ಟಿ ಸ್ವಾಗತ ಗೀತೆ ಹಾಡಿದರು ಸಿಆರ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕ ಎಚ್ ಪಿ ಬಾರಿಕಾಯಿ ನಿರೂಪಿಸಿದರು


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

10 + 2 =