ಇಂಡಿ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳ ಪದಗ್ರಹಣ
ಯುವ ಭಾರತ ಸುದ್ದಿ ಇಂಡಿ :ಪಕ್ಷಕ್ಕೆ ಮಾತನಾಡುವವರಿಗಿಂತ ಸಂಘಟನೆ ಮಾಡುವವರು ಮುಖ್ಯ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೊ ರಾಯಚೂರು ಕಾರ್ಯಕ್ರಮಕ್ಕೆ,ಧಾವಣಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನದ ಕಾರ್ಯಕ್ರಮಕ್ಕೆ ಹಾಗೂ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ತಾಲೂಕಿಗಿಂತ ಹೆಚ್ಚಿನ ಕಾರ್ಯಕರ್ತರು ಇಂಡಿಯಿಂದ ಹೋಗಲಾಗಿತ್ತು,ಜ.೧೬ ರಂದು ನಡೆಯುವ ನಾ ನಾಯಕಿ ಕಾರ್ಯಕ್ರಮಕ್ಕೂ ಇಂಡಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹೋಗಿ ಪಕ್ಷದ ಸಂಘಟನೆಗೆ ಬಲ ತುಂಬಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂಡಿ,ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳ ಪದಗ್ರಹಣ ಹಾಗೂ ನಾ ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರುಷ ಪ್ರಧಾನವಾದ ಇಂದಿನ ಸಮಾಜದಲ್ಲಿ ಮಹಿಳೆಯರು ಮನೆಯ ಜವಾಬ್ದಾರಿಯ ನಿರ್ವಹಣೆಯ ಜೊತೆಗೆ ಪಕ್ಷದ ಸಂಘಟನೆ ಮಾಡುತ್ತಿರುವುದು ಸಂತಸದ ಸಂಗತಿ,ಜಿಲ್ಲೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಹಾಗೂ ಇಂಡಿಯಲ್ಲಿ ಇಂಡಿ ಮಹಿಳಾ ಬ್ಲಾಕ್ ಅಧ್ಯಕ್ಷೆ ನಿರ್ಮಲಾ ತಳಕೇರಿ ಅವರ ನೇತ್ರತ್ವದಲ್ಲಿ ಪಕ್ಷದ ಸಂಘಟನೆ ಮಾಡುತ್ತಿದ್ದು,ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಕ್ಷಕ್ಕೆ ಬರುತ್ತಿರುವುದು ಇರ್ವರ ಶ್ರಮವಾಗಿದೆ.ಹೀಗಾಗಿ ಪಕ್ಷದ ವತಿಯಿಂದ ಇರ್ವರನ್ನು ಅಭಿನಂದಿಸುತ್ತೇನೆ.ತಮ್ಮ ಸಂಘಟನೆಯ ಜೊತೆಗೆ ಪಕ್ಷ ತಮ್ಮ ಹಿಂದೆ ಸದಾ ಇರುತ್ತದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ತಾಲೂಕಿನ ಜಿಪ,ತಾಪಂ ಕ್ಷೇತ್ರಗಳಲ್ಲಿ ಶೇ.೩೩ ರಷ್ಟು ಮಹಿಳೆಯರಿಗೆ ಅಧ್ಯಕ್ಷತೆ ನೀಡಲಾಗುತ್ತದೆ.ನುಡಿದಂತೆ ಎಲ್ಲವು ಮಾಡಿ ತೊರಿಸಿದ್ದೇನೆ. ಇದು ಸಹ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪ್ರೀಯಾಂಕಾ ಗಾಂಧಿ (ವಾದ್ರಾ),ರಾಷ್ಟ್ರಮಟ್ಟದ ನಾಯಕರ ನೇತ್ರತ್ವದಲ್ಲಿ ಜ.೧೬ ರಂದು ನಡೆಯುವ ಪಕ್ಷದಿಂದ ಹಮ್ಮಿಕೊಂಡ ನಾ ನಾಯಕಿ ಕಾರ್ಯಕ್ರಮ ಇದು ನಾರಿಯರ ಬಲ.
ಸಾಮಾನ್ಯ ಮಹಿಳೆ ರಾಷ್ಟ್ರ ಮಟ್ಟದ ನಾಯಕಿಯಾಗಲು ಅವಕಾಶ ನೀಡಿದ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ.೪೦ ವರ್ಷ ರಾಜಕಾರಣದಲ್ಲಿ ನಾನು ಎಂದಿಗೂ ಮಹಿಳೆಯರ ಸಂಘಟನೆಗೆ ಹೆಚ್ಚು ಒತ್ತು ನೀಡಿರಲ್ಲಿಲ್ಲ .ಇಂದು ನಿರ್ಮಲಾ ತಳಕೇರಿ ಹಾಗೂ ವಿದ್ಯಾರಾಣಿ ತುಂಗಳ ಇವರ ಪರಿಶ್ರಮಕ್ಕೆ ಸಂಘಟನಾ ಶಕ್ತಿಯ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.ಮಹಿಳೆಯರ ಪ್ರತಿಯೋಂದು ಕ್ಷೇತ್ರದಲ್ಲಿ ಮುಂದೆ ಬರಲು ಸಂವಿಧಾನಾತ್ಮಕ ಅವಕಾಶವಿದ್ದು,ಮಹಿಳೆಯರಿಗೆ ಸಂವಿಧಾನಬದ್ದವಾಗಿ ಅವಕಾಶ ನೀಡಿದ್ದು,ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಮಾತನಾಡುವವರ ಸಾಕಷ್ಟು ಜನರಿದ್ದಾರೆ ಕೃತಿಯಲ್ಲಿ ಯಾರು ಇದ್ದಾರೆ ಅಂತಹವರಿಗೆ ಗೌರವಿಸುವ ಕೆಲಸ ನಡೇಯಬೇಕು ಎಂದು ಹೇಳಿದರು.
ಜಿಲ್ಲಾ ಮಹಿಳಾ ಅಧ್ಯಕ್ಷೆ ವಿದ್ಯಾರಾಣಿ ತುಂಗಳ,ಇಂಡಿ ಬ್ಲಾಕ್ ಅಧ್ಯಕ್ಷೆ ನಿರ್ಮಲಾ ತಳಕೇರಿ ಮಾತನಾಡಿ ಮಹಿಳೆಯರಿಗೆ ಮಾತೃ ಸ್ಥಾನದಿಂದ ಗೌರವಿಸುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ದಿ. ಇಂದಿರಾಗಾಂಧಿಯವರು ಬಡವರ ದೀನದುರ್ಬಲರ ತಾಯಿಯಾಗಿದ್ದರು.ಅಂತವರ ಪ್ರೇರಣೆಯಲ್ಲಿ ಪಕ್ಷದಲ್ಲಿ ಇದ್ದಿರುವುದು ನಮ್ಮ ಪುಣ್ಯ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜಾವೀದ ಮೋಮಿನ, ಭೀಮಣ್ಣಾ ಕೌಲಗಿ, ಮಲ್ಲು ಮಡ್ಡಿಮನಿ,ಪ್ರಶಾಂತ ಕಾಳೆ, ನಾಗೇಶ ತಳಕೇರಿ,ಇಲಿಯಾಸ ಬೊರಾಮಣಿ,ಅವಿನಾಶ ಬಗಲಿ ವೇದಿಕೆಯಲ್ಲಿದ್ದರು.
ಮಹೇಶ ಹೊನ್ನಬಿಂದಗಿ,ಸAತೋಷ ಪರಸೆನವರ,ಗಂಗಾಧರ ನಾಟಿಕಾರ,ನಾಗೇಶ ತಳಕೇರಿ,ಹುಚ್ಚಪ್ಪ ತಳವಾರ,ಪ್ರಭಾವತಿ ಬಿರಾದಾರ, ಸುಗಂದಾ ಬರಾದಾರ, ರಾಜೇಶ್ರೀ ಹಿರೇಮಠ, ಶಾರವ್ವ ನಾಯಕೋಡಿ, ಜಗದೇವಿ ಕಾಂಬಳೆ, ಚಂದ್ರಭಾಗ ಸಂಗೋಗಿ, ಪ್ರೇಮಾ ಸಿಂಗೆ, ನಿಜಲಿಂಗವ್ವ ಕಡೇಮನಿ, ಚಂದ್ರಭಾಗಾ ಹೋಸಮನಿ, ಶೋಭಾ ಚವ್ಹಾಣ, ಮೋಪಿನ ಪಟೇಲ್ ,ಸುಜಾತಾ ಮಾದರ, ಪ್ರಮೀಲಾ ಶಿವಶರಣ, ರಾಧಾ ಕಾಂಬಳೆ, ಶಾಂತಲಾ ಬಿಜಾಪೂರ, ಜನಾಬಾಯಿ ಹರಿಜನ, ಅನುಸುಯಾ ಸೊಂಪೂರ, ಖೈನೂನ ತಾಸೇವಾಲೆ, ನಾಗರತ್ನ ಕಾಂಬಳೆ, ರೇಣುಕಾ ಮಂಚದ, ರೂಪಾ ದೋತ್ರೆ, ಜಿನಾಬಾಯಿ ಹರಿಜನ, ಸರೋಬಾಯಿ ಹುಲಿಮನಿ, ಭಾರತಿ ಕಟ್ಟಿಮನಿ, ಬಸಲಿಂಗವ್ವ ಮಾಶ್ಯಾಳ, ಲತಾ ಗಜಾಕೋಶ, ಶಿವಮ್ಮ ಹರಿಜನ, ನೀಲ್ಲಮ್ಮಾ ಹೊಸಮನಿ, ಇಂದುಮತಿ ಹಳ್ಳದಮನಿ ,ಜಯಶ್ರಿ ದೊಡಮನಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.