Breaking News

ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು : ಪರಿಶೀಲಿಸಿದ ರಮೇಶ ಜಿಗಜಿಣಗಿ

Spread the love

ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು : ಪರಿಶೀಲಿಸಿದ ರಮೇಶ ಜಿಗಜಿಣಗಿ

ಯುವ ಭಾರತ ಸುದ್ದಿ ಇಂಡಿ: ನಾನು ಪ್ರಚಾರ ಪ್ರೀಯನಲ್ಲ,ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲ ಕಡೆಗಳಲ್ಲಿ ಪೊಟೊ ಹಾಕಿಕೊಂಡು ಜನರ ಕಣ್ಣಲ್ಲಿ ಇರುವುದಕ್ಕಿಂತ,ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನತೆಯ ಹೃದಯದಲ್ಲಿ ಇರಬೇಕು ಎಂಬ ಭಾವನೆ ನನ್ನದ್ದು,ನನಗೆ ಅಭಿವೃದ್ದಿ ಮುಖ್ಯ.ಪ್ರಚಾರ ಮುಖ್ಯವಲ್ಲ,ಕೆಲವರು ಸ್ವಲ್ಪೆ ಕೆಲಸ ಮಾಡಿದ್ದರೂ ದೊಡ್ದ ಪ್ರಮಾಣದಲ್ಲಿ ಪೊಟೊ ಹಾಕಿಸಿಕೊಳ್ಳುತ್ತಾರೆ.ಆದರೆ ಆ ಜಾಯಮಾನ ನನ್ನ ರಾಜಕೀಯದಲ್ಲಿಯೇ ಬಂದಿರುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಬುಧವಾರ ಹಿರೇರೂಗಿ ಗ್ರಾಮದ ಬಳಿ ಹಾದು ಹೋಗಿರುವ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಯುತ್ತಿರುವುದನ್ನು ಪರಿಶೀಲಿಸಿ ಮಾತನಾಡಿದರು.
ನೀರಾವರಿಗೆ ಆದ್ಯತೆ ನೀಡಿದ್ದು ಬಿಜೆಪಿ ಪಕ್ಷ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಲ ಅವರ ಪ್ರಾಮಾಣಿಕ ಪ್ರಯತ್ನ,ಸಹಕಾರದಿಂದ ಇಂದು ಇಂಡಿ ತಾಲೂಕಿನ ಕೆರೆಗಳು,ಕಾಲುವೆಗಳಿಗೆ ನೀರು ಹರಿಯುತ್ತಿದೆ.ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎಂಬ ಬೇಡಿಕೆ ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂಬುದು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ರೈತರ ಬೇಡಿಕೆ ಈಡೇರಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.
ಇಂಡಿ ತಾಲೂಕಿನ ಜನತೆಯ ಋಣ ನನ್ನ ಮೇಲಿದೆ.೪೫ ವರ್ಷಗಳಿಂದ ನನಗೆ ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ.ಜಿಲ್ಲೆಯ ಜನರ ಆಶೀರ್ವಾದ ನನ್ನ ಮೇಲಿದೆ ಎಂದು ಹೇಳಿದ ಅವರು,ನ್ಯಾಯ,ನೀತಿ,ನಿಷ್ಠೆಯಿಂದ ರಾಜಕಾರಣ ಮಾಡಿ,ಜನತೆ ನನ್ನ ಮೇಲೆ ಇಟ್ಟ ಪ್ರೀತಿಗೆ ಚ್ಯುತಿ ಬರದಂತೆ ನೋಡಿಕೊಂಡಿದ್ದೇನೆ.ನನಗೆ ರಾಜಕಾರಣಕ್ಕಿಂತ ಜನತೆಯ ಹಿತ ಮುಖ್ಯ,ನಾನು ಮಾಡಿದ ಅಭಿವೃದ್ದ ಕಾರ್ಯಗಳು ಜನರು ಮೆಚ್ಚಿದರೆ ಸಾಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ದಿಶಾ ಸಮಿತಿ ಸದಸ್ಯ ಭೀಮರಾಯಗೌಡ ಮದರಖಂಡಿ,ವಿಜಕುಮಾರ ಮಾನೆ,ದೇವೆಂದ್ರ ಕುಂಬಾರ,ಮಲ್ಲು ವಾಲಿಕಾರ,ದತ್ತಾ ಬಂಡೆನವರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

19 + seventeen =