ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನಿಸದ ಕಾರಣ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ.!
ಗೋಕಾಕ ತಾಲೂಕ ೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಹಿಂದೆ ಹಿರಿಯ ಸಾಹಿತಿ ಹಾಗೂ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಮಹಾಲಿಂಗ ಮಂಗಿ ಹಾಗೂ ಸಂಗಡಿಗರು, ಕನ್ನಡ ಹೋರಾಟಗಾರರಾದ ಕೆಂಪಣ್ಣ ಚೌಕಾಶಿ, ರೇಹಮಾನ ಮೋಕಾಶಿ, ಅಯೂಬ ಪೀರಜಾದೆ, ಪ್ರಶಾಂತ ಅರಳಿಕಟ್ಟಿ ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ ಮತ್ತು ಸ್ವಾಗತ ಸಮಿತಿ ವಿರುದ್ಧ ಹರಿಹಾಯ್ದಿದ್ದರು. ಈಗ ಶಿಕ್ಷಣ ಇಲಾಖೆಯ ನಿವೃತ್ತ ನೌಕರರು ಅಪಸ್ವರ ಎತ್ತಿದ್ದಾರೆ. ಆದರೆ ಪರಿಷತ್ ಅಧ್ಯಕ್ಷ ಮಹಾಂತೇಶ ತಾಂವಶಿ ಮಾತ್ರ ಗಪ್ ಚುಪ್.
ಯುವ ಭಾರತ ಸುದ್ದಿ, ಗೋಕಾಕ್: ಕನ್ನಡ ಸಾಹಿತ್ಯ ಪರಿಷತನ ಅಜೀವ ಸದಸ್ಯತ್ವವನ್ನು ಹೊಂದಿರುವ ಶಿಕ್ಷಣ ಇಲಾಖೆಯ ನಿವೃತ್ತ ನೌಕರರನ್ನು ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನಿಸದ ಹಿನ್ನಲೆ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವದಾಗಿ ನಿವೃತ್ತ ಶಿಕ್ಷಣ ಇಲಾಖೆಯ ನೌಕರ ಮಹಾದೇವ ಕಮತ ಹೇಳಿದರು.
ಅವರು, ನಗರದಲ್ಲಿ ಶುಕ್ರವಾರದಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸಾಹಿತ್ಯ ಸಮ್ಮೇಳನ ಎಂದರೆ ನುಡಿ ಜಾತ್ರೆ ಈ ಜಾತ್ರೆಯೂ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಕಂಪನ್ನು ಪಸರಿಸಲು ಅನುಕೂಲವಾಗಬೇಕು ಆದರೆ ೫ನೇ ಗೋಕಾಕ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳ ವ್ಯಾಪಾರಿಕರಣವಾಗಿದ್ದು, ಡೊಂಗಿ ಹಾಗೂ ಚಿಲ್ಲರೆ ಚುಟುಕು ಸಾಹಿತಿಗಳನ್ನೊಳಗೊಂಡು ಸಮ್ಮೇಳನ ನಡೆಸುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತನ ಸಂಘಟನೆಯನ್ನು ೧೯೮೨ ರಿಂದ ೧೯೯೪ರ ವರೆಗೆ ಬೆಳಗಾವಿ ಜಿಲ್ಲೆಯಾಧ್ಯಂತ ಸಂಚರಿಸಿ, ನಮ್ಮ ಶಿಕ್ಷಣ ಇಲಾಖೆಯ ಸಾಹಿತ್ಯಾಸಕ್ತ ಶಿಕ್ಷಕರಿಂದ ೮೦೦ಕ್ಕೂ ಅಜೀವ ಸದಸ್ಯತ್ವ ಪಡೆಯಲು ಪ್ರೇರೆಪಿಸಿ, ಕನ್ನಡ ಸಾಹಿತ್ಯ ಪರಿಷತ ಸಂಘಟನೆಗೆ ಶ್ರಮಿಸಿದ್ದೆವೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯರು ಮೋಹನ ಕೊಣ್ಣೂರ ಮಾತನಾಡಿ, ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯದ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಢಿಸಲು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಬೇಕಿದೆ. ಅದರಲ್ಲೂ ಕನ್ನಡದ ಈ ಹಬ್ಬಕ್ಕೆ ಶಾಲಾ ಶಿಕ್ಷಕರೆ ಮೆರಗು ತರುತ್ತಾರೆ ಎಂದು ಅಭಿಪ್ರಾಯಿಸಿದರು.
ಗೋಕಾಕ ತಾಲೂಕ ೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಹಿಂದೆ ಹಿರಿಯ ಸಾಹಿತಿ ಹಾಗೂ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಮಹಾಲಿಂಗ ಮಂಗಿ ಹಾಗೂ ಸಂಗಡಿಗರು, ಕನ್ನಡ ಹೋರಾಟಗಾರರಾದ ಕೆಂಪಣ್ಣ ಚೌಕಾಶಿ, ರೇಹಮಾನ ಮೋಕಾಶಿ, ಅಯೂಬ ಪೀರಜಾದೆ, ಪ್ರಶಾಂತ ಅರಳಿಕಟ್ಟಿ ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ ಮತ್ತು ಸ್ವಾಗತ ಸಮಿತಿ ವಿರುದ್ಧ ಹರಿಹಾಯ್ದಿದ್ದರು. ಈಗ ಶಿಕ್ಷಣ ಇಲಾಖೆಯ ನಿವೃತ್ತ ನೌಕರರು ಅಪಸ್ವರ ಎತ್ತಿದ್ದಾರೆ. ಆದರೆ ಪರಿಷತ್ ಅಧ್ಯಕ್ಷ ಮಹಾಂತೇಶ ತಾಂವಶಿ ಮಾತ್ರ ಗಪ್ ಚುಪ್.
ಹಾಲಿ ಮುಖ್ಯಧ್ಯಾಪಕ ಅಶೋಕ ತೋಟಗಿ, ನಿವೃತ್ತ ಶಿಕ್ಷಣ ಇಲಾಖೆ ವ್ಯವಸ್ಥಾಪಕ ಪಿ ಎಫ್ ಕೊಪ್ಪದ, ನಿವೃತ್ತ ಶಿಕ್ಷಣ ಇಲಾಖೆ ಸಹಾಯಕ ವ್ಯವಸ್ಥಾಪಕ ನಾಗಪ್ಪ ಆಲತಗಿ ಇದ್ದರು.