Breaking News

ಅಡುಗೆ ಮನೆ ಔಷಧಿಗಳ ಆಗರ: ಹೆಬ್ಬಾಳೆ

Spread the love

ಅಡುಗೆ ಮನೆ ಔಷಧಿಗಳ ಆಗರ: ಹೆಬ್ಬಾಳೆ

ಯುವ ಭಾರತ ಸುದ್ದಿ ಮಮದಾಪೂರ :
ಗೋಕಾಕ ತಾಲೂಕಿನ ಶ್ರೀ ಬೀರಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 26ನೇ ಮಾಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋಕಾಕದ ಆದರ್ಶ ಶಿಕ್ಷಣ ಸಂಸ್ಥೆ ಶ್ರೀ ಶಂಕರಲಿಂಗ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ಎಸ್ ಹೆಬ್ಬಾಳೆ ತಾವು ಪಾಕ ಪ್ರಾವಿಣ್ಯತೆ ಹೊಂದಿದವರಾಗಿದ್ದು ಸೇರಿದ ವಿದ್ಯಾರ್ಥಿಗಳಿಗೆ ಕುತೂಹಲಕಾರಿ ಅನೇಕ ಮಜ್ಜಿಗೆ ಆಂಬರ, ಜುಣಕ ತಯಾರಿಕೆ ಕೌಶಲ್ಯ, ಓಗ್ಗರಣೆ ಕೊಡುವ ಪದ್ಧತಿ ಹೀಗೆ ವೈವಿಧ್ಯತೆ ಆಹಾರ ತಯಾರಿಕೆ ಹಾಗೂ ಅದರಲ್ಲಿನ ಔಷಧಿಯ ಬಗ್ಗೆ ಅರಿವು ಮೂಡಿಸಿದರು. ನಮ್ಮ ಜಿಲ್ಲೆಯಲ್ಲಿ ದೊರೆಯುವ ರುಚಿಕರ ಊಟಾ ನಮ್ಮ ದೇಶದ ಯಾವ ಮೂಲೆಯಲ್ಲಿಯೂ ಸಿಗಲಾರದು. “ಅಡುಗೆ ಮನೆ ಆರೋಗ್ಯದ ತವರು ಮನೆ” ಅಲ್ಲಿನ ಪ್ರತಿಯೊಂದು ಸಾಂಬಾರ ಪದಾರ್ಥಗಳನ್ನು ಆರೋಗ್ಯಕ್ಕೆ ಸದ್ಭಳಕೆ ಮಾಡುವ ಜಾಣ್ಮೆಯನ್ನು ಹೊಂದುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡ ಗ್ರಾಮದ ಹಿರಿಯರು, ಗಣ್ಯ ವ್ಯಾಪಾರಸ್ಥರು ಆದ ಸದಾಶಿವ ಸೊಂಡೂರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಇಂದಿನ ಯುವ ಪೀಳಿಗೆ ಗೋಬಿ-ಮಂಚೂರಿ, ನೋಡ್ಯೂಲ್ಸ್, ಪಾನಿಪುರಿ, ಬೇಲ್ ಪುರಿ ಹೀಗೆ ಮುಂತಾದವುಗಳತ್ತ ಮಾರು ಹೋಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನೆನಪಿಸುತ್ತ ತಮ್ಮ ನೊಂದ ಮಾತುಗಳಲ್ಲಿ ನೋವು ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ನಾಟಕ ಗುರೂಜಿ ಮಾಳಪ್ಪ ಸುಣಧೋಳಿ ಉಪಸ್ಥಿತರಿದ್ದರು.
ಆರಂಭದಲ್ಲಿ ಸಿಂಧು ಚಳಕೊಪ್ಪ ಮತ್ತು ವಿದ್ಯಾ ಪಾಟೀಲ ವಿಜ್ಞಾನ ಗೀತೆಯನ್ನು ಹಾಡಿದರು. ಅನಿಲ ಸುಣಧೋಳಿ ಸರ್ವರನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯ ಚಿಂತಕರ ಚಾವಡಿ ಸಂಚಾಲಕ ರ. ವೀ ದೇಮಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಗೌರವ ಸಮರ್ಪಿಸಿ ವಂದಿಸಿದರು. ಆಕಾಶ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮಾಳಪ್ಪ ಪಡಿಮನಿ ಶ್ರೀ ಜಗಜ್ಯೋತಿ ಬಸವಣ್ಣನವರ ವಚನವನ್ನು ವಾಚಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

twenty − 12 =