Breaking News

ಶರಣ ಸಂಸ್ಕೃತಿ ಉತ್ಸವ ಬುಧವಾರ

Spread the love

ಶರಣ ಸಂಸ್ಕೃತಿ ಉತ್ಸವ ಬುಧವಾರ

ಯುವ ಭಾರತ ಸುದ್ದಿ ಗೋಕಾಕ :
ಮಾರ್ಚ ೧ ರಿಂದ ೪ ವರೆಗೆ ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ೧೮ನೇ ಶರಣ ಸಂಸ್ಕೃತಿ ಉತ್ಸವ ಜರುಗಲಿದ್ದು,ಒಂದು ಜಾತಿಗೆ ಸಿಮೀತವಾಗದೆ ಇಡಿ ಮನುಕೂಲಕ್ಕೆ ಸಿಮೀತವಾದ ಈ ಶರಣ ಸಂಸ್ಕೃತಿ ಉತ್ಸವದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೋಳಿಸವಂತೆ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಜಯಾನಂದ ಮುನವಳ್ಳಿ ಮನವಿ ಮಾಡಿದರು.

ಸೋಮವಾರದಂದು ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಶರಣ ಸಂಸ್ಕೃತಿ ಉತ್ಸವವು ಗೋಕಾಕ , ಮೂಡಲಗಿ ತಾಲೂಕಿನ ಉತ್ಸವವಾಗಿ ಆಚರಣೆಯಾಗುತ್ತಾ ಇಂದು ರಾಜ್ಯ, ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.ಈ ಅರ್ಥಪೂರ್ಣವಾದ ಧರ್ಮ ಜಾಗೃತಿಯ ಈ ಉತ್ಸವವನ್ನು ಎಲ್ಲರೂ ಸೇರಿ ಇನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.
ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಬೈರುಗೋಳ ಮಾತನಾಡಿ ದಿನಾಂಕ ೧ ರಂದು ಮುಂಜಾನೆ ೮ ಘಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ಅರಿವು- ಅಕ್ಷರ – ಆರೋಗ್ಯ ಕಾಲ್ನಡಿಗೆಯ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಜರುಗುವುದು. ೮:೩೦ ಕ್ಕೆ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಷಟಸ್ಛಲ ಧ್ವಜಾರೋಹಣವನ್ನು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ನೆರವೇರಿಸುವರು. ದಿವ್ಯ ಸಾನ್ನಿಧ್ಯವನ್ನು ಶಿಗ್ಗಾಂವಿಯ ಶ್ರೀ ಸಂಗನ ಬಸವ ಸ್ವಾಮೀಗಳು ಹಾಗೂ ನಗರದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು ವಹಿಸುವರು. ಮುಖ್ಯ ಅತಿಥಿಗಳಾಗಿ ಮುಖಂಡರಾದ ಅಶೋಕ ಪೂಜಾರಿ ಹಾಗೂ ಚಂದ್ರಶೇಖರ್ ಕೊಣ್ಣೂರ ಆಗಮಿಸುವರು.
ಸಂಜೆ ೬ ಘಂಟೆಗೆ ಬಸವತತ್ವ ಸಮಾವೇಶವನ್ನು ಶಾಸಕ ರಮೇಶ್ ಜಾರಕಿಹೊಳಿ ಉದ್ಘಾಟಿಸುವರು, ದಿವ್ಯ ಸಾನ್ನಿಧ್ಯವನ್ನು ಗದಗನ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದು, ಸಾನಿಧ್ಯವನ್ನು ಚಿಂಚಣಿಯ ಶ್ರೀ ಅಲ್ಲಮಪ್ರಭು ಸ್ವಾಮಿಗಳು, ಬೆಳಗಾವಿಯ ಡಾ.ಅಲಮಪ್ರಭು ಸ್ವಾಮಿಗಳು, ಘೋಡಗೇರಿಯ ಶ್ರೀ ಕಾಶಿನಾಥ್ ಸ್ವಾಮಿಗಳು, ಚಿಕ್ಕೋಡಿಯ ಸಂಪಾದನ ಸ್ವಾಮಿಗಳು, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮಿಗಳು, ಬಟಕುರ್ಕಿಯ ಬಸವಲಿಂಗ ಸ್ವಾಮಿಗಳು, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಗಳು ವಹಿಸಲಿದ್ದು, ಹಂದಿಗುAದದ ಶ್ರೀ ಶಿವಾನಂದ ಸ್ವಾಮಿಗಳು, ಶೇಗುಣಶಿಯ ಶ್ರೀ ಪ್ರಭು ಮಹಾಂತ ಸ್ವಾಮಿಗಳು, ಅಥಣಿಯ ಶ್ರೀ ಶಿವಬಸವ ಸ್ವಾಮಿಗಳು ಈ ಪೂಜ್ಯರಿಗೆ ಅಭಿನಂದನಾ ಸನ್ಮಾನ ಜರುಗುವದು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಮಾದರ, ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ನಗರ ಘಟಕ ಅಧ್ಯಕ್ಷ ಪ್ರಶಾಂತ್ ಕರುಬೇಟ ಆಗಮಿಸಲಿದ್ದಾರೆ.
ದಿನಾಂಕ ೨ ರಂದು ಸಾಯಂಕಾಲ ೬ ಘಂಟೆಗೆ ಜರುಗುವ ವೈದ್ಯ ಸಮಾವೇಶವನ್ನು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸುವರು. ದಿವ್ಯ ಸಾನ್ನಿಧ್ಯವನ್ನು ಜಮಖಂಡಿಯ ಡಾ.ಅಭಿನವ ಕುಮಾರ್ ಚನ್ನಬಸವ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಖ್ಯಾತ ಹೃದಯ ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಕರವೇ ರಾಜ್ಯಾಧ್ಯಕ್ಷ ಟ.ಎ ನಾರಾಯಣಗೌಡ ಆಗಮಿಸಲಿದ್ದು, ಅತಿಥಿಗಳಾಗಿ ಗೋವಾ ಕ.ಸಾ.ಪ ಅಧ್ಯಕ್ಷ ಸಿದ್ದಣ್ಣ ಮೇಟಿ, ಗೋಕಾಕನ ಡಾ.ಬಶೀರ್ ಅಹ್ಮದ್ ಮತ್ತೆ, ಡಾ.ಅಶ್ವಿನ ಮಾಸುರಕರ , ಬೆಳಗಾವಿಯ ಡಾ.ಶಶಿಕಾಂತ ಕುಲಗೋಡ, ಡಾ.ಸುರೇಶ್ ಪಟ್ಟೇದ, ಚಿಕ್ಕೋಡಿ ಡಾ.ದಯಾನಂದ ನೂಲಿ, ಮುಧೋಳನ ಡಾ.ಶಿವಾನಂದ ಕುಬಸದ ಪಾಲ್ಗೋಳಲ್ಲಿದ್ದಾರೆ. ಇದೆ ಸಂದರ್ಭದಲ್ಲಿ ಕರವೇ ಪಯಣ ಗ್ರಂಥ ಬಿಡುಗಡೆ ಮಾಡಲಾಗುವುದು..
ದಿನಾಂಕ ೩ ರಂದು ಸಂಜೆ ೬ ಘಂಟೆಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಮಹಿಳಾ ಸಮಾವೇಶವನ್ನು ಉಡುಪಿಯ ಡಾ.ವೀಣಾ ಬನ್ನಂಜೆ ಉದ್ಘಾಟಿಸಿಲಿದ್ದು, ದಿವ್ಯ ಸಾನ್ನಿಧ್ಯವನ್ನು ಧಾರವಾಡದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು. ಕಾಯಕಶ್ರೀ ಪ್ರಶಸ್ತಿಯನ್ನು ಮಹಾರಾಷ್ಟ್ರದ ಸಮಾಜಿಕ ಕಾರ್ಯಕರ್ತೆ ಪದ್ಮಶ್ರೀ ಡಾ.ಕಲ್ಪಾನಾ ಸರೋಜ ಅವರಿಗೆ ನೀಡಿ ಗೌರವಿಸಲಾಗುವುದು.
ಮುಖ್ಯ ಅತಿಥಿಗಳಾಗಿ ರಾಮದುರ್ಗ ಹಾಗೂ ರಾಯಬಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಾಜೇಶ್ವರಿ ಈರನಟ್ಟಿ, ಸುನೀತಾ ನಿಂಬರಗಿ, ಗೋಟೆಯ ಸರಕಾರಿ ಆಯ್ಯುರ್ಯವೇಧ ಚಿಕಿತ್ಸಾಲಯದವೈದ್ಯಾಧಿಕಾರಿ ಡಾ.ದೀಪಾಮಾಲಾ ಪಾಟೀಲ, ಗೋಕಾಕನ ಡಾ.ಮಂಗಲಾ ಕಮತ, ಗೋಕಾಕ ಉಪಕಾರಾಗೃಹದ ಅಧೀಕ್ಷಕಿ ಶ್ರೀಮತಿ ಲಕ್ಷ್ಮಿ ಹಿರೇಮಠ, ಬೆಳಗಾವಿಯ ಆಶ್ರಯ ಪೌಂಡೇಶನ್ ನ ನಾಗರತ್ನ ರಾಮಗೌಡ, ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ನೀತಾರಾವ್ ಆಗಮಿಸಲಿದ್ದಾರೆ.
ದಿನಾಂಕ ೪ರಂದು ಮುಂಜಾನೆ ೬ ಘಂಟೆಯಿAದ ಶ್ರೀಮಠದಲ್ಲಿ ಅಭಿಷೇಕ ,ಬಿಲ್ವಾರ್ಚನೆ, ಉಡಿ ತುಂಬುವ ಕಾರ್ಯಕ್ರಮಗಳು ಜರುಗುವವು. ೯:೩೦ ಕ್ಕೆ ವಚನ ತಾಡೋಲೇ ಪ್ರತಿಗಳ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರ ಕಂಭಮೇಳ, ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಜರುಗುವುದು. ಸಾಯಂಕಾಲ ೬ ಘಂಟೆಗೆ ಯುವ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಸಾನಿಧ್ಯವನ್ನು ಬೆಂಗಳೂರಿನ ಇರ್ಮಡಿ ನಿಜಗುಣ ಸ್ವಾಮಿಗಳು, ಕೋಳೆಗಾಲದ ಶ್ರೀಕಂಠ ಸ್ವಾಮಿಗಳು ವಹಿಸುವರು. ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಉದ್ಘಾಟಿಸುವರು. ವಿಜಯಪುರದ ಬಸವರಾಜ ಕವಲಗಿ, ಹುಬ್ಬಳ್ಳಿಯ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಬಸವಣ್ಣ ಬಾಗೇವಾಡಿಯ ಡಾ.ಅಮರೇಶ ಮೀಣಜಗಿ, ಧಾವಣಗೆರೆಯ ತೇಜಸ್ವಿ ಕಟ್ಟಿಮನಿ, ಸಾನಿಕೋಪ್ಪದ ದಿಗ್ಗಜಯ ಸಿದ್ನಾಳ, ಕಲ್ಲೋಳಿಯ ಸತೀಶ್ ಕಡಾಡಿ ಪಾಲ್ಗೋಳಲ್ಲಿದ್ದಾರೆ. ಪ್ರತಿ ದಿನ ಈ ಕಾರ್ಯಕ್ರಮಗಳ ನೇತೃತ್ವವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣ ,ಶರಣೆಯರಿಗೆ ಗೌರವ ಸನ್ಮಾನ ಮಾಡಲಾಗುವುದು. ಧಾರವಾಡದ ವಚನ ನೃತ್ಯರಂಗ, ಹುಬ್ಬಳ್ಳಿಯ ವೀರಭಾರತಿ ಸಂಸ್ಥೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೋಳಿಸಬೇಕು ಎಂದು ಬೈರುಗೋಳ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಡಾ.ಸಿ.ಕೆ ನಾವಲಗಿ , ಸದಾಶಿವ ಗುದಗಗೋಳ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one × three =