Breaking News

ಗೋಕಾಕ ಕಿಂಗ್ ಮೇಕರ್ ಲಖನ್‌ ಜಾರಕಿಹೊಳಿಯ ಶಕ್ತಿ ಪ್ರದರ್ಶನ ನಾಳೆ.!

Spread the love

ಗೋಕಾಕ ಕಿಂಗ್ ಮೇಕರ್ ಲಖನ್‌ ಜಾರಕಿಹೊಳಿಯ ಶಕ್ತಿ ಪ್ರದರ್ಶನ ನಾಳೆ.!

 

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಎರತೊಡಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಶಕ್ತಿಪ್ರದರ್ಶನ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಮಂಗಳವಾರ 23ರಂದು ಅಪಾರ ಸಂಖ್ಯೆಯಲ್ಲಿ ಗೋಕಾಕನ ಕಿಂಗ್ ಮೇಕರ್ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಗೋಕಾಕ, ಅರಭಾಂವಿ, ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ, ಚಿಕ್ಕೋಡಿ, ಖಾನಪುರ, ಯಮಕನಮರಡಿ, ಬೈಲಹೊಂಗಲ, ರಾಮದುರ್ಗ ಕ್ಷೇತ್ರ ಸೇರಿ ಎಲ್ಲ ಕಡೆಗಳಿಂದಲೂ ಸಾಹುಕಾರ ಬೆಂಬಲಿಗರು ನಾಮಪತ್ರ ಸಲ್ಲಿಸಲು ಬರಲಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಗ್ರಾಮ‌ ಪಂಚಾಯತ್ ಸದಸ್ಯರು ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಾಹನಗಳು ಬರಲಿವೆ.‌ ಗ್ರಾಮ ಪಂಚಾಯತ್, ಪುರಸಭೆ, ನಗರಸಭೆ ಸದಸ್ಯರು ಆಗಮಿಸಲಿದ್ದಾರೆ.

ವಿಧಾನ ಪರಿಷತ್ ಚುನಾವಣೆ ರಂಗೇರಿದ್ದು, ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲು ಜನಸಾಗರವೇ ಹರಿದು ಬರಲಿದೆ. ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಲಖನ್ ಅವರದ್ದಾಗಿದೆ.


Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

eleven + 19 =