ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವಂತೆ ರೈಟ್ಸ್ ಲಿ,ನ ನಿರ್ದೇಶಕ ಲಕ್ಷö್ಮಣ ತಪಸಿ ಸಲಹೆ.!
ಗೋಕಾಕ: ನೆಮ್ಮದಿಯ ಜೀವನಕ್ಕೆ ಆರೋಗ್ಯ ಅತಿ ಮುಖ್ಯವಾಗಿದ್ದು, ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವಂತೆ ರೈಟ್ಸ್ ಲಿ,ನ ನಿರ್ದೇಶಕ ಲಕ್ಷö್ಮಣ ತಪಸಿ ಹೇಳಿದರು.
ಅವರು, ಶನಿವಾರದಂದು ನಗರದ ವಿದ್ಯಾನಿಕೇತನ ಶಾಲಾ ಸಭಾ ಭವನದಲ್ಲಿ ರೈಟ್ಸ್ ಲಿ,ನ ಸಹಕಾರದೊಂದಿಗೆ ಬೆಳಗಾವಿಯ ಆಶ್ರಯ ಫೌಂಡೇಶನನವರು ಆಯೋಜಿಸಿದ್ದ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಭಿರವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜನರ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಕಾರ್ಯ ಮಹತ್ವದ್ದಾಗಿದ್ದು, ಅವರು ದೇವರಾಗಿದ್ದಾರೆ. ಅವರ ಸೇವೆ ಜನತೆಗೆ ಅತಿ ಅವಶ್ಯವಾಗಿದೆ. ಜನತೆ ಇಂತಹ ಶಿಭಿರಗಳ ಸದುಪಯೋಗ ಪಡೆದು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ. ಸಮಾಜ ಮುಖಿ ಕಾರ್ಯಗಳಿಗೆ ರೈಟ್ಸ್ ಸಂಸ್ಥೆ ತನ್ನದೆಯಾದ ಕೊಡುಗೆ ನೀಡುತ್ತಿದೆ. ಇಂತಹ ಸಂಸ್ಥೆಗಳ ಸಹಕಾರದಿಂದ ಆಶ್ರಯ ಫೌಂಡೇಶನನವರು ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವದು ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆಶ್ರಯ ಫೌಂಡೇಶನನ ನಾಗರತ್ನ ಎಸ್, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಮನಸಾಕ್ಷಿ ಫೌಂಡೇಶನನ ಮಲ್ಲಿಕಾರ್ಜುನ ಕರಜಗಿಮಠ ಹಾಗೂ ವೈದ್ಯರ ತಂಡ ಇದ್ದರು.