ದಿ.೨೫ರಿಂದ ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿಯ ಕಾರ್ತಿಕೋತ್ಸವ.!
ಗೋಕಾಕ: ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿಯ ಕಾರ್ತಿಕೋತ್ಸವವು ಇದೆ ದಿ.೨೫, ೨೬ ಹಾಗೂ ೨೭ರ ವರೆಗೆ ನಗರದಲ್ಲಿ ಜರುಗುವದು.
ದಿ.೨೫ರಂದು ಮುಂಜಾನೆ ೫ಗಂಟೆಗೆ ಶ್ರೀ ಲಕ್ಷಿö್ಮÃದೇವಿಗೆ ಅಭಿಷೇಕ, ೧೦ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿಯಿಂದ ಸುಮಂಗಲಿಯರೊAದಿಗೆ ಆರತಿ ಹಾಗೂ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಲಕ್ಷಿö್ಮÃ ದೇವಿಯ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯುವದು. ಸಂಜೆ ೬ಗಂಟೆಗೆ ಕಾರ್ತಿಕೋತ್ಸವವನ್ನು ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ, ಡಾ. ಸಿದ್ದಣ್ಣ ಕಮತ, ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ ಆಗಮಿಸುವರು. ಸಂಜೆ ೭ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ದಿ.೨೬ರಂದು ಮುಂಜಾನೆ ೧೦ಗಂಟೆಯಿAದ ಸಂಜೆ ೪ಗಂಟೆಗಳ ವರೆಗೆ ವಿವಿಧ ಸ್ಫರ್ಧೆಗಳು, ೫ಗಂಟೆಗೆ ಆಹಾರ ಮೇಳ ಜರುಗುವದು. ಸಂಜೆ ೬ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಲೀಲಾ ಪಾಟೀಲ ವಹಿಸಲಿದ್ದು, ಅತಿಥಿಗಳಾಗಿ ಜಯಾ ಕಮತ, ಭಾರತಿ ಮದಭಾಂವಿ, ಶಕುಂತಲಾ ದಂಡಗಿ ಆಗಮಿಸುವರು. ರಾತ್ರಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ದಿ.೨೭ರಂದು ಮಧ್ಯಾಹ್ನ ೧೨.೩೦ಕ್ಕೆ ಮಹಾ ಪ್ರಸಾದ ಜರುಗಿ, ಸಂಜೆ ೬ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ವಹಿಸಲಿದ್ದು, ಅತಿಥಿಗಳಾಗಿ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಕಾರ್ಮಿಕ ಅಂಬಿರಾವ ಪಾಟೀಲ, ಯುವನಾಯಕ ಸರ್ವೋತ್ತಮ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪೌರಾಯುಕ್ತ ಶಿವಾನಂದ ಹಿರೇಮಠ, ಡಾ.ಬಸವರಾಜ ಚೌಗಲಾ, ಮಲ್ಲಪ್ಪ ಹಿತ್ತಲಮನಿ, ವೀರುಪಾಕ್ಷಿ ಮಿರ್ಜಿ ಆಗಮಿಸುವರು. ರಾತ್ರಿ ೮ಗಂಟೆಗೆ “ಚನ್ನಪ್ಪ ಚನ್ನಗೌಡ” ನಾಟಕ ಜರುಗಲಿದ್ದು, ಭಕ್ತಾಧಿಕಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿ ಸೇವಾಸಮಿತಿ ಅಧ್ಯಕ್ಷ ದೊಡ್ಡಪ್ಪ ರಾಹುತ ಪ್ರಕಟನೆಯಲ್ಲಿ ಕೋರಿದ್ದಾರೆ.