Breaking News

ಗಡಿ ಭಾಗದಲ್ಲಿ ಸಾಹಿತಿಕ, ಸಂಸ್ಕೃತಿಕ ವೈಭವ ಸದಾ ನಡೆಯಲಿ!

Spread the love

ಗಡಿ ಭಾಗದಲ್ಲಿ ಸಾಹಿತಿಕ, ಸಂಸ್ಕೃತಿಕ ವೈಭವ ಸದಾ ನಡೆಯಲಿ!

ಯುವ ಭಾರತ ಸುದ್ದಿ ಇಂಡಿ  ಗಡಿ ಅಭಿವೃದ್ಧಿ ಬೋರ್ಡ್‌ನಿಂದ ಹೇಳಿಕೊಳ್ಳುವಷ್ಟು ಕೆಲಸಗಳು ಆಗಿಲ್ಲ. ಆದ್ಯತೆಯ ಮೇರೆಗೆ ಸರ್ಕಾರಗಳು ಕೆಲಸ ಮಾಡಬೇಕು. ಗಡಿ ಭಾಗದಲ್ಲಿ ಸಾಹಿತಿಕ, ಸಂಸ್ಕೃತಿಕ ವೈಭವ ಸದಾ ನಡೆಯಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವಿಜಯಪುರ ತಾಲೂಕು ಶಾಖೆ ಇಂಡಿ, ಚೌಡಿಹಾಳ ಗ್ರಾಮದ ಗುರುಬಸವ ಶಿಕ್ಷಣ ಸಂಕುಲಗಳ ಹಾಗೂ ದಾನಿ ಈರನಗೌಡ ದಾ.ಬಗಲಿ ಜಂಟಿ ಸಹಯೋಗದಲ್ಲಿ ಉಪನ್ಯಾಸ ಹಾಗೂ ಸಾಹಿತಿ ದಿ.ದಾನಪ್ಪ ಬಗಲಿ ಕುರಿತು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಎರಡು ರಾಜ್ಯಗಳ ಮಧ್ಯ ತಗಾದೆ ನಡೆದಿರುವುದು ವಿಪರ್ಯಾಸ. ಅಖಂಡ ಪರಿಕಲ್ಪನೆ ಇದ್ದಾಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಈ ದೇಶ ಭಾಷೆಗಳ ಆಧಾರದ ಮೇಲೆ ರಚನೆಯಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜೊತೆ ಅವಿನಾಭಾವ ಸಂಬಂಧವಿದೆ. ಲಿಂಬೆ ನಾಡಿನಲ್ಲಿ ಅತ್ಯಂತ ಸಣ್ಣ ಚೌವುಡಿಹಾಳ ಗ್ರಾಮದಲ್ಲಿ ತಾಯಿ ಲಲಿತಾ ದಶವಂತ ಬಣ್ಣದ ಬದುಕಿನಲ್ಲಿ ನಿರಂತರ ಸಾಗಿ ನಾಟಕ ಅಭಿನಯದ ಮೂಲಕ ತಮ್ಮ ಅಪಾರ ಸೇವೆಯನ್ನು ಪರಿಗಣಿಸಿದ ಸರ್ಕಾರ ರಾಜ್ಯೋತ್ಸವ ನೀಡಿ ಗೌರವಿಸಿರುವುದರಿಂದ ಇಡೀ ಜಿಲ್ಲೆ, ತಾಲೂಕು ಗ್ರಾಮಕ್ಕೆ ಸಂದಗೌರವ. ಗಡಿ ಭಾಗದಲ್ಲಿ ದಿ.ದಾನಪ್ಪ ಬಗಲಿ ಸಾಹಿತ್ಯಕ್ಷೇತ್ರದಲ್ಲಿ ಸಾಕಷ್ಟು ತೊಡಗಿ ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದರು. ಅವರ ಸೌಜನ್ಯಗುಣ, ಸರಳ ನಡೆ, ನುಡಿ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕಾಮಣ್ಣ ದಶವಂತ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಈ ಭಾಗದ ಬಡಜನರ ಸಾಂಸ್ಕೃತಿಕ, ಸಾಹಿತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಲಲಿತಾ ದಶವಂತ ವಯಸ್ಸು ಕ್ಷೀಣಿಸುತ್ತ ಬಂದಿದೆ. ಸರ್ಕಾರ ಇಂತಹವರಿಗೆ ಸಹಾಯ ಸಹಕಾರ ಮಾಡಲಿ. ಬರುವ ಅಧಿವೇಶನದಲ್ಲಿ ಧ್ವನಿ ಎತ್ತಲಿ ಎಂದು ಮನವಿ ಮಾಡಿದರು.
ಮಂಜುನಾಥ ಜುನಗೊಂಡ ಬದುಕು ಕಲಿಸಿದ ರಸಖುಷಿ ಮಾತು ಮತಿಸಿದ ಮಹಾಕವಿ ವಿಷಯ ಮೇಲೆ ಉಪನ್ಯಾಸ ನೀಡಿದರು. ಗುರುಬಸವ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎ.ಎಸ್.ಪಾಟೀಲ, ಸಾ.ಸಂ ವೇದಿಕೆ ಅಧ್ಯಕ್ಷ ಡಾ.ಕಾಂತು ಇಂಡಿ ಮಾತನಾಡಿದರು. ಸದಾನಂದ ಬಡಿಗೇರ, ಪತ್ರಕರ್ತರಾದ ಉಮೇಶ ಬಳಬಟ್ಟಿ, ರಾಜು ಕುಲಕರ್ಣಿ, ಜಾವೀದ್ ಮೋಮಿನ್, ಹಚ್ಚಪ್ಪ ತಳವಾರ, ಎಸ್.ಎಸ್.ಕೆಂಗನಾಳ, ಬಿ.ಎಸ್.ಖ್ಯಾದಿ, ಸನ್ಮಾನಿತರು ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಲಲಿತಾಬಾಯಿ ದಶವಂತ, ಎಂ.ಪಿ.ಬಿರಾದಾರ, ಜಿ.ಜಿ.ಬರಡೋಲ, ಎಚ್.ಎಂ.ಬಿರಾದಾರ, ಶರಣಬಸಪ್ಪ ಕಾಬಳೆ ಇದ್ದರು.
ಉಪನ್ಯಾಸಕ ಎಸ್.ಎಂ.ಬಿರಾದಾರ ನಿರೂಪಿಸಿ, ಶಿಕ್ಷಕ ಜಿ.ಜಿ.ಬರಡೋಲ ಸ್ವಾಗತಿಸಿ, ಎಸ್.ಎಸ್.ಕೆಂಗನಾಳ ವಂದಿಸಿದರು.

 

“ಈ ದೇಶ ಭಾಷೆಗಳ ಆಧಾರದ ಮೇಲೆ ರಚನೆಯಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜೊತೆ ಅವಿನಾಭಾವ ಸಂಬಂಧವಿದೆ. ಲಿಂಬೆ ನಾಡಿನಲ್ಲಿ ಅತ್ಯಂತ ಸಣ್ಣ ಚೌವುಡಿಹಾಳ ಗ್ರಾಮದಲ್ಲಿ ತಾಯಿ ಲಲಿತಾ ದಶವಂತ ಬಣ್ಣದ ಬದುಕಿನಲ್ಲಿ ನಿರಂತರ ಸಾಗಿ ನಾಟಕ ಅಭಿನಯದ ಮೂಲಕ ತಮ್ಮ ಅಪಾರ ಸೇವೆಯನ್ನು ಪರಿಗಣಿಸಿದ ಸರ್ಕಾರ ರಾಜ್ಯೋತ್ಸವ ನೀಡಿ ಗೌರವಿಸಿರುವುದರಿಂದ ಇಡೀ ಜಿಲ್ಲೆ, ತಾಲೂಕು ಗ್ರಾಮಕ್ಕೆ ಸಂದ ಗೌರವ”.
ಯಶವಂತರಾಯಗೌಡ ಪಾಟೀಲ, ಶಾಸಕರು


Spread the love

About Yuva Bharatha

Check Also

ವಿಜಯಪುರದಲ್ಲಿ ಜನವರಿ ಮೊದಲ ವಾರದಲ್ಲಿ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ!

Spread the loveವಿಜಯಪುರದಲ್ಲಿ ಜನವರಿ ಮೊದಲ ವಾರದಲ್ಲಿ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ! ಯುವ ಭಾರತ ಸುದ್ದಿ ಬೆಂಗಳೂರು : …

Leave a Reply

Your email address will not be published. Required fields are marked *

18 + 13 =