ಪ್ರವಾಹದಿಂದ ಮುಳಗಡೆಯಾಗಿದ್ದ ಲೋಳಸೂರ ಸೇತುವೆ ಸಂಚಾರಕ್ಕೆ ಮುಕ್ತ.!
ಪ್ರವಾಹದಿಂದ ಮುಳಗಡೆಯಾಗಿದ್ದ ಲೋಳಸೂರ ಸೇತುವೆ ಸಂಚಾರಕ್ಕೆ ಮುಕ್ತ.!
ಯುವ ಭಾರತ ಸುುದ್ದಿ ಗೋಕಾಕ್: ಮಾಹಾರಾಜ್ಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣದಲ್ಲಿ ಭಾರಿ ಕಡಿತವಾಗಿರುವದರಿಂದ ಘಟಪ್ರಭಾ ನದಿಯ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಮಹಾಮಳೆಯಿಂದಾಗಿ ಘಟಪ್ರಭೆ ರಭಸಕ್ಕೆ ಸೋಮವಾರದಿಂದ ಸಂಚಾರಕ್ಕೆ ಬಂದ್ ಆಗಿದ್ದ ಲೋಳಸುರ ಸೇತುವೆ ಈಗ ಮುಕ್ತವಾಗಿದ್ದು ಕಡಿಮೆ ದ್ವೀಚಕ್ರ, ಹಾಗೂ ನಾಲ್ಕು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಗುರುವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ಜೊತೆಗೆ ಸೇತುವೆಯನ್ನು ಪರಿಕ್ಷೀಸಿದ ಸ್ಥಳೀಯ ಲೋಕೋಪಯೋಗಿ ಒಳನಾಡು ಬಂದರು ಜಲಸಾರಿಗೆ ಇಲಾಖೆ ಅಧಿಕಾರಿಗಳು, ಸೇತುವೆ ಮೇಲೆ ರಸ್ತೆಗೆ ಹಾಕಿದ್ದ ಸುಮಾರು ೨೦ ಮೀಟರ್ ಟಾರು ಕಳಚಿಕೊಂಡು ಹೋಗಿದ್ದು, ಅದನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸೇತುವೆ ಸುರಕ್ಷತಾ ತಪಾಸಣೆಗಾಗಿ ಅಧಿಕಾರಿಗಳ ತಂಡ ಆಗಮಿಸಲಿದ್ದು, ಇನ್ನೆರಡು ದಿನಗಳಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರದ ಬಗ್ಗೆ ಕ್ರಮಕೈಗೊಳ್ಳುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸುವರ್ಣ ಹೊಸ್ತಿಲಿನಲ್ಲಿರುವ ಈ ಲೋಸೂರ ಸೇತುವೆ ಕಳೆದ ಪ್ರವಾಹದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದರು ಈ ಭಾರಿ ಅಂತಹ ಹಾನಿಯಾಗಿಲ್ಲ ಈ ಸೇತುವೆ ಗೋಕಾಕ ನಗರಕ್ಕೆ ಹಾಗೂ ಮಹಾರಾಷ್ಟ್ರ ಮತ್ತು ವಿಜಯಪುರಕ್ಕೆ ಸಂಪರ್ಕ ರಸ್ತೆ ಕಲ್ಪಿಸುವ ಲೋಳಸುರ ಸೇತುವೆ ಬಂದ್ ಆಗಿದ್ದರಿಂದ ನಿತ್ಯ ಸಂಚರಿಸುವ ಜನರು ಪರದಾಡುವಂತಾಗಿತ್ತು. ಸದ್ಯ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಪ್ರಯಾಣಿಕರು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.