Breaking News

ಬೆಳಗಾವಿ ಬಸವ ಕಾಲನಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ

Spread the love

ಬೆಳಗಾವಿ ಬಸವ ಕಾಲನಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ಮಹಾನಗರದ ಬಸವ ಕಾಲನಿ ಬಸವಣ್ಣ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ದಿನಾಂಕ : ಶನಿವಾರ ೧೮-೨-೨೦೨೩ ಮತ್ತು ರವಿವಾರ ೧೯-೨-೨೦೨೩ ರಂದು ಜರುಗುವುದು. ದಿನಾಂಕ ೧೮ ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ವಿಜಯ ಶಾಸ್ತಿçಗಳು ಹಾಗೂ ಶ್ರೀ ಶಂಕರಯ್ಯಾ ಸೀಮಿಮಠ ಇವರಿಂದ ಮಹಾರುದ್ರಾಭಿಷೇಕ ಜರುಗುವುದು, ಪ್ರವೀಣ ಪಾನಶೆಟ್ಟಿ ದಂಪತಿಗಳು ಈ ಕಾರ್ಯಕ್ರಮ ನೆರವೇರಿಸಿಕೊಡುವರು. ಸಾಯಂಕಾಲ ೫ ಗಂಟೆಗೆ ಬಸವ ಕಾಲನಿ ಮಹಿಳೆಯರಿಂದ ಲಲಿತ ಸಹಸ್ರನಾಮಾವಳಿ ಪಠಣ ಜರುಗುವುದು. ಸಾಯಂಕಾಲ ೬ ಗಂಟೆಗೆ ಶ್ರೀ ರಾಮಚಂದ್ರ ಏಡಕೆ ಅವರಿಂದ ಉಪನ್ಯಾಸ ಕಾರ್ಯಕ್ರಮ ಜರುಗುವುದು. ನಂತರ ಗುರುಕಾರುಣ್ಯ ನಾಟ್ಯಾಲಯದ ಪ್ರತೀಕ್ಷಾ ಹಿರೇಮಠ ಮತ್ತು ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವವು. ಸಾವಿತ್ರಿ ಕಗ್ಗಣಗಿಮಠ ಅವರ ನೇತೃತ್ವದಲ್ಲಿ ಬಸವ ಕಾಲನಿ ಮಹಿಳೆಯರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯುವುದು. ರಾತ್ರಿ ೧೦ ಗಂಟೆಗೆ ಶ್ರೀ ಬಸವೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗುವುದು.
ರವಿವಾರ ದಿ: ೧೯-೨-೨೦೨೩ರಂದು ಬೆಳಿಗ್ಗೆ ಶ್ರೀ ಸುರೇಶ ಬಡೆಪ್ಪನವರ ಅವರಿಂದ ರುದ್ರಾಭಿಷೇಕ ಆಗುವುದು. ನಂತರ ೮-೩೦ಕ್ಕೆ ಬಸವಣ್ಣನವರ ಭಾವಚಿತ್ರದೊಂದಿಗೆ ಬಸವ ಕಾಲನಿಯಲ್ಲಿ ಪಲ್ಲಕ್ಕಿ ಉತ್ಸವ ಜರುಗುವುದು. ೧೧ ಗಂಟೆಗೆ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳವರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗುವುದು. ಶಾಸಕರಾದ ಅನಿಲ ಬೆನಕೆ, ಸತೀಶ ಜಾರಕಿಹೊಳಿ, ಶ್ರೀಮತಿ ಲಕ್ಷಿö್ಮ ಹೆಬ್ಬಾಳಕರ್ ಸಂಸದರಾದ ಶ್ರೀಮತಿ ಮಂಗಲಾ ಅಂಗಡಿ, ಡಾ. ರವಿ ಪಾಟೀಲ, ಕಿರಣ ಜಾಧವ, ಮುರುಘೇಂದ್ರಗೌಡ ಪಾಟೀಲ, ಶ್ರೀಮತಿ ರೂಪಾ ಸಂತೋಷ ಚಿಕ್ಕಲದಿನ್ನಿ, ಶ್ರೀಮತಿ ರೇಖಾ ಮೋಹನ ಹೂಗಾರ, ಶಿವಾನಂದ ಡಂಬಳ, ಯಲ್ಲೋಜಿ ಪಾಟೀಲ ಅವರು ಅತಿಥಿಗಳಾಗಿ ಆಗಮಿಸುವರು. ಮಧ್ಯಾಹ್ನ ೧ ಗಂಟೆಗೆ ಮಹಾಪ್ರಸಾದ ಜರುಗುವುದು. ಮೇಲಿನ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪುನೀತರಾಗಬೇಕೆಂದು ಬಸವಣ್ಣ ದೇವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ.ಆಯ್. ಗಾಣಿಗೇರ ಕೋರಿದ್ದಾರೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

7 + 12 =