ಅಂಕಲಗಿ ಶ್ರೀಗಳ ನಿಧನಕ್ಕೆ ಶಾಸಕ ರಮೇಶ ಜಾರಕಿಹೊಳಿ ತೀವ್ರ ಶೋಕ

ಯುವ ಭಾರತ ಸುದ್ದಿ ಗೋಕಾಕ : ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಪೀಠಾಧಿಪತಿಯಾಗಿದ್ದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಗಳ ನಿಧನಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅಂಕಲಗಿ ಮಠ ಪುರಾತನ ಇತಿಹಾಸ ಹೊಂದಿದೆ. ಮಠದ ಭವ್ಯ ಪರಂಪರೆ ಹಾಗೂ ಇತಿಹಾಸ ಎತ್ತಿ ಹಿಡಿಯಲು ಶ್ರೀಗಳು ವಹಿಸಿದ್ದ ಪಾತ್ರ ಅನುಪಮವಾಗಿದೆ. ನಾಡಿನಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಸ್ವಾಮೀಜಿ ಅವರ ನಡೆ ನುಡಿ ಆದರ್ಶಗಳು ಅನುಕರಣೀಯ ಎಂದು ಅವರು ಕಂಬನಿ ಮಿಡಿದಿದ್ದಾರೆ.
YuvaBharataha Latest Kannada News