ಮೂಡಲಗಿ: ಸಜ್ಜನರ ರಕ್ಷಣೆ ಮಾಡಲು ಅಪರಾಧಿಗಳನ್ನು ಶಿಕ್ಷಿಸಲು ಪೋಲಿಸ್ ಇಲಾಖೆ ಇರುವುದು ಸಾಮಾನ್ಯ ವಿಷಯವಾಗಿದೆ.
ಆದರೆ ಕೆಲವೊಂದು ಪೊಲೀಸರು ಅಪರಾಧಿಗಳಿಗೆ ರಕ್ಷಣೆ ಕೊಟ್ಟು ಸಜ್ಜನರಿಗೆ ರಕ್ಷಣೆ ನೀಡಲು ವಿಫಲರಾದ ಇಂದಿನ ದಿನಗಳಲ್ಲಿ ಸಾಮಾನ್ಯರೊಂದಿಗೆ ಮಂಗಗಳಿಗೂ ರಕ್ಷಣೆ ನೀಡಿರುವ ಒಬ್ಬ ಪೋಲಿಸ್ ದಕ್ಷ ಅಧಿಕಾರಿ ಮೂಡಲಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಮ್ಮೆಯ ವಿಷಯವಾಗಿದೆ.
ಮಂಗನಿಂದ ಮಾನವ ರೂಪ ತಾಳಿದ್ದಾನೆ. ಎಂಬುದನ್ನು ಅರಿತುಕೊಂಡ ಪಿಎಸ್ಐ ಮಲ್ಲಿಕಾರ್ಜುನ್ ಸಿಂಧೂರ್ ಅವರು ಇತ್ತೀಚಿಗೆ ಬಂದ ನೆರೆಹಾವಳಿ ಪಟಗುಂದಿ ಹತ್ತಿರ ನದಿಯಲ್ಲಿ ತುದಿಯವರೆಗೆ ಮುಳುಗಿದ ಗಿಡದ ಮೇಲೆ ಮೇಲೆ 3 ನಾಲ್ಕು ದಿನಗಳಿಂದ ಸಂಕಷ್ಟದಲ್ಲಿರುವ ಮಂಗಗಳಿಗೆ ಬೋಟ್ ಮೂಲಕ ತೆರಳಿ ಮಂಗಗಳು ಕುಳಿತಲ್ಲಿಗೆ ಹೋಗಿ *ಅನ್ನ, ಆಹಾರ, ಬ್ರೆಡ್ ಬಿಸ್ಕೆಟ್* ಮುಂತಾದವುಗಳನ್ನು ಬುಟ್ಟಿಯಲ್ಲಿಟ್ಟು ಸಂಕಷ್ಟದಲ್ಲಿದ್ದ ಮಂಗಗಳಿಗೆ ರಕ್ಷಣೆ ಮಾಡಿದ್ದಾರೆ.
ಸಹಾಯ ನೀಡಿದ ಮಲ್ಲಿಕಾರ್ಜುನ್ ಸಿಂಧೂರವರ ಮತ್ತೊಂದು ಸಾಹಸಕ್ಕೆ ನಮ್ಮದು ಮತ್ತೊಂದು ಸೆಲ್ಯೂಟ್
ಈ ಸಾಹಸವನ್ನು ಜನತೆ ಮೆಚ್ಚಿಕೊಂಡು ಪಿಎಸ್ಐ ಅವರ ಪ್ರಾಣಿ ದಯಾ ಕರುಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.