Breaking News

ಸೈಕಲ್ ಸವಾರಿ ಪಿಎಸ್ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್

Spread the love

ಮೂಡಲಗಿ : ಎಷ್ಟೋ ಮಂದಿ ದೊಡ್ಡ ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು, ಮರಿ, ಕಿರಿ ರಾಜಕಾರಣಿಗಳು ತಮ್ಮ ವಾಹನ(ಕಾರ, ಜೀಪ್, ಇತ್ಯಾದಿ)ಗಳು ಸುಸ್ಥಿತಿಯಲ್ಲಿ ಇಲ್ಲದಾಗ ಅಥವಾ ಚಾಲಕರು ಇಲ್ಲದಿದ್ದಾಗ ಅಂದಿನ ಕರ್ತವ್ಯದ ಸಂಚಾರವನ್ನೆ ರದ್ದುಗೊಳಿಸಿದ ಅಥವಾ ಮುಂದೂಡುವ ಇಂತಹ ಸಮಯದಲ್ಲಿ ಇಲ್ಲೊಬ್ಬರು ನಿಷ್ಟಾವಂತ ಪೋಲಿಸ್ ಅಧಿಕಾರಿ ಪ್ರತಿನಿತ್ಯ ಮುಂಜಾನೆ ಸೈಕಲ್ ಸವಾರಿ ಮಾಡುತ್ತಾ ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ.

ಒಮ್ಮೊಮ್ಮೆ ಠಾಣೆ ವ್ಯಾಪ್ತಿಯ 30-40 ಕಿಲೋಮೀಟರ್ ಸೈಕಲ್ ಸವಾರಿಯ ವಿಕ್ಷಣೆಯ (ಪೆಟ್ರೋಲಿಂಗ)ಉದಾಹರಣೆಗಳಿವೆ ಎಂದರೆ ನೀವು ನಂಬದೆ ಇರಬಹುದು…

ಹೌದು ಅವರೆ ಮೂಡಲಗಿ ಪೋಲಿಸ್ ಠಾಣೆಯ ಪಿ.ಎಸ್.ಐ ಮಲ್ಲಿಕಾರ್ಜುನ ಸಿಂಧೂರ ಎಂದು ಹೇಳಬೇಕಾಗುತ್ತದೆ.

ಮಲ್ಲಿಕಾರ್ಜುನ ಸಿಂದೂರ ಅವರು ಆರಕ್ಷಕರಿಗೆ ರಕ್ಷಣೆಯ ಸಹಾಯ ಹಸ್ತ ಚಾಚುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.ಆದರೆ ಜನರ ದೃಷ್ಟಿಯಲ್ಲಿ ಅವರು ಮೂಡಲಗಿ ಪೊಲೀಸ್ ಠಾಣೆಯ ಸಿಂಗಂ ಎಂದು ಜನರ ಮನಸಲ್ಲಿ ಉಳಿದಿದ್ದಾರೆ.

ಕಳೆದ ಹತ್ತು ತಿಂಗಳಿ0ದ ಸಾಮಾನ್ಯ ಜನತೆ ಕರೆಗೆ ಓಗೋಟ್ಟು ಸ್ಪಂದಿಸುತ್ತಿರುವರು ಪಿ.ಎಸ್.ಐ ಅವರು ಕೊರೋನಾ ಲಾಕ್‌ಡೌನ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಶ್ರದ್ಧತೆಯಿಂದ ನಿರ್ವಹಿಸಿದ್ದಾರೆ ಠಾಣೆಯಲ್ಲಿ ಇದ್ದಾಗಾಗಲಿ ಅಥವಾ ಸಂಚಾರದಲ್ಲಿದ್ದಾಗ ಯಾವುದೇ ವ್ಯಕ್ತಿ ಫೋನ್ ಮಾಡಿದರು ಅಥವಾ ಭೇಟಿಯಾದಾಗ ನಮಸ್ಕಾರ ಹೇಳಿದರೆ ಪ್ರತಿಯಾಗಿ ಸ್ಫಂದಿಸಿ ನಮಸ್ಕಾರ ಹೇಳುವ ದೊಡ್ಡ ಗುಣ. ದರ್ಪದ ಪೋಲಿಸ್ ಇಲಾಖೆಯಲ್ಲಿರುವವರು ಅಪರೂಪ ಆದರೆ ಇದಕ್ಕೆ ಮಲ್ಲಿಕಾರ್ಜುನ ಸಿಂದೂರ ಅಪವಾದವಾಗಿದ್ದಾರೆ.

ಮೂಡಲಗಿಯಲ್ಲಿ ಯಾರೂ ಮಾಡದೇ ಇರುವ ಟ್ರಾಫಿಕ್ ಜಾಮ್ ಕೂಡಾ ಈ ದಕ್ಷ ಅಧಿಕಾರಿ ಟ್ರಾಫಿಕ್ ಜಾಮ್ ಆಗದಂತೆ ಬೈಕ್ ಮೇಲೆ ಪಟ್ಟಣದ ತುಂಬೆಲ್ಲ ಸವಾರಿ ಮಾಡಿ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಆರೋಪಿಗಳನ್ನು ಮೊದಲು ಸಹನೆಯಿಂದ ಮಾತನಾಡಿಸಿ ನಂತರ ಬಾಯಿ ಬಿಡದೇ ಇದ್ದಾಗ ನಂತರ ಪೋಲಿಸ್ ಭಾಷೆಯಿಂದ ಅಪರಾಧ ಪತ್ತೆ ಮಾಡುತ್ತಾರೆ. ಶೇ.90ರಷ್ಟು ಖಾಸಗಿ,ಸಾರ್ವಜನಿಕ ಸಭೆ ಸಮಾರಂಭಗಳಿಗೆ ಆವ್ಹಾನಿಸುವ ಅಭಿಮಾನಿಗಳನ್ನು ಹೊಂದಿರುವ ಇವರ ಜನಪ್ರೀಯತೆ ಎಷ್ಟು ಎಂಬುವುದು ತಿಳಿಯಿತ್ತದೆ.

ಮೂಡಲಗಿ ಪಟ್ಟಣದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಎಂದರೆ ಸಾಕು ಆರೋಪಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ ಅಷ್ಟು ಖಡಕ್ ಅಧಿಕಾರಿ ಸಿಂಧೂರ್ ಸಾಹೇಬರು.

ರೈತರು ಕಷ್ಟಗಳು ಎಂದು ಠಾಣೆಗೆ ಬಂದರೆ ಸ್ವಂತ ಮಗನಂತೆ ಅವರ ಕಷ್ಟಗಳನ್ನು ಕೇಳಿ ಸರಿಪಡಿಸುವ ಕೆಲಸವನ್ನು ಮಾಡುತ್ತಿರುವ ದಕ್ಷ ಅಧಿಕಾರಿಗೆ ಇವರಾಗಿದ್ದಾರೆ.

ಇವರ ಸೈಕಲ್ ಸವಾರಿ ಗಮನಿಸಿದರೆ ಹಳೆಯ ಚೂರಿ ಚಿಕ್ಕಣ್ಣ ಸಿನೇಮಾದ ಹಾಡು ‘ಸೈಕಲ್ ಮೇಲೆ ಬಂದ ನಮ್ಮ ಹೀರೋ’ ಹಾಡು ನೆನಪಾಗುತ್ತದೆ.

ಪ್ರತಿ ದಿನ ಬೆಳಗಿನ ಜಾವ 40 ಕಿ.ಮೀ ಸೈಕಲ್ ಮೇಲೆ ಹಳ್ಳಿಗಳ ವಿಜಿಟ್ ಮಾಡುತ್ತಿರುವ ಇಂತಹ ಜನಪ್ರೀಯ ಅಧಿಕಾರಿಯ ಸೇವೆ ನಮ್ಮ ಭಾಗದಲ್ಲಿ ಇನ್ನೂ ಹೆಚ್ಚು ಬೇಕಾಗಿದೆ.ಆದರೆ ಸರಕಾರವು ಉತ್ತಮ ಸೇವೆ ಸಲ್ಲಿಸಿದ ಸಿಂಧೂರ ಅವರಿಗೆ ಮುಂಬಡ್ತಿ ಕೊಡುತ್ತಿರುವುದರಿಂದ ದಕ್ಷ ಅಧಿಕಾರಿಗೆ ಸರಕಾರ ನೀಡುತ್ತಿರುವ ಮಾನ್ಯತೆಯಿಂದ ನಮಗೆಲ್ಲ ಹೆಮ್ಮೆ ಒಂದು ಕಡೆಯಾದರೆ ಇಂತಹ ಅಧಿಕಾರಿಯ ಸೇವೆಯಿಂದ ಶೀಘ್ರ ವಂಚಿತರಾಗುತ್ತಿದ್ದೇವೆ ಎಂಬ ದು:ಖ ಇನ್ನೊಂದು ಕಡೆಯಾಗಿದೆ.

ಕಳೆದ ದಿನಗಳ ಹಿಂದೆ ತಮ್ಮ ಸಿಬ್ಬಂದಿಗೆ ಕೋರೊನ ಬಂದು  ಗುಣಮುಖವಾಗಿ  ಕೋವಿಡಿ ಕೇಂದ್ರದಿಂದ ಸ್ವಾಗತ ಮಾಡಿಕೊಂಡ ಬರುವ ಸಂದರ್ಭದಲ್ಲಿ  ಸ್ವತ ತಾವೇ ತಮ್ಮ ಸರಕಾರಿ ವಾಹನವನ್ನು   ತಾವೇ ಚಾಲಕರಾಗಿ ಸಿಬ್ಬಂದಿಎನ್ನು ತಮ್ಮ ಆರಕ್ಷಕ ಠಾಣೆಗೆ ಕರೆದುಕೊಂಡು ಬಂದು ತಮ್ಮ ಸಿಬ್ಬಂದಿಗಳ ಜೋತೆಗೆ ಗುಲಾಬಿ ಹೂವು ಕೊಡುವುದರ ಮೂಲಕ ಸಿಬ್ಬಂದಿ ಎನ್ನು ಸ್ವಗಾತ ಮಾಡಿ ಕೊಂಡರು.

ಈ ಸಂದರ್ಭದಲ್ಲಿ ಒಬ್ಬ ಅಧಿಕಾರಿ ಎಷ್ಟು ದಿವಸ ಇಲ್ಲಿ ಇದ್ದ ಎನ್ನುವುದಕ್ಕಿಂತ ಹೇಗೆ ಸೇವೆ ಸಲ್ಲಿಸಿದ ಎಂಬುದು ಮುಖ್ಯವಾಗುತ್ತದೆ.ಇಲಿಯಂತೆ ನೂರು ವರ್ಷ ಬದುವುದಕ್ಕಿಂತ ಹುಲಿಯಂತೆ ಮೂರೆ ದಿವಸ ಬದುಕಬೇಕು ಎಂಬ0ತೆ ಮಲ್ಲಿಕಾರ್ಜುನ ಸಿಂಧೂರ, ಸಿಂಧೂರ ಲಕ್ಷ್ಮಣನಂತೆ ಹುಲಿಯಾಗಿ ಈ ಭಾಗದ ಸಾಮಾನ್ಯ ಜನರ ಹೃದಯದಲ್ಲಿ ನೆಲೆಸಿದ್ದಾರೆ.


Spread the love

About Yuva Bharatha

Check Also

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *

3 × two =