Breaking News

ಇತಿಹಾಸವನ್ನು ಸೃಷ್ಟಿಸಿರುವ ಮಹಾನ ಚೇತನಗಳ ಹೆಸರನ್ನು ಪಠ್ಯಕ್ರಮದಲ್ಲಿ ಹಿಂಪಡೆದದನ್ನು ಮರುಪರಿಶೀಲಿಸಿ.

Spread the love

ಗೋಕಾಕ: ‘ಏಸು ಕ್ರಿಸ್ತ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ ಅವರಿಗೆ ಸಂಬAಧಿಸಿದ ಪಠ್ಯವನ್ನು ಕೈ ಬಿಟ್ಟಿರುವುದನ್ನು ಪುನರ ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಹಲವಾರು ವರ್ಷಗಳಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸರಕಾರ ವಿಶ್ವಪ್ರೇಮ ಸಾರಿದ ಜೀಸಸ್‌ರಂಥ ದಿವ್ಯಚೇತನಗಳನ್ನು, ಸ್ವಾತಂತ್ರ‍್ಯಕ್ಕಾಗಿ ಮಡಿದ ಟಿಪ್ಪು ಸುಲ್ತಾನ್, ರಾಯಣ್ಣನಂಥ ವೀರ ಸೇನಾನಿಗಳ ಸಾಧನೆ ಮತ್ತು ನಡೆದುಬಂದ ದಾರಿಯನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಅವರನ್ನು ಸ್ಮರಿಸುವ ಹಾಗೂ ಅವರಿಂದ ಪ್ರೇರಣೆ ಪಡೆದು ಯುವ ಪಿಳಿಗೆ ಸಮಾಜ ಸುದಾರಣೆಯತ್ತ ಸಾಗಲಿ ಎಂಬ ಮಹತ್ತರ ಉದ್ದೇಶ ಹೊಂದಿತ್ತು. ಆದರೆ ಪ್ರಸ್ತುತ ಬಿಜೆಪಿ ಸರಕಾರ ಜೀಸಸ್‌ರಂಥ ದಿವ್ಯಚೇತನವನ್ನು, ಸ್ವಾತಂತ್ರ‍್ಯಕ್ಕಾಗಿ ಮಡಿದ ಟಿಪ್ಪು ಸುಲ್ತಾನ್, ರಾಯಣ್ಣನಂಥ ವೀರ ಸೇನಾನಿಗಳನ್ನು ಪಠ್ಯಕ್ರಮದಿಂದ ಕೈಬಿಟ್ಟು ಭವಿಷ್ಯದ ಭಾರತದ ಮಕ್ಕಳಿಗೆ ಏನನ್ನು ಕಲಿಸಲು ಹೊರಟಿದೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಟಿಪ್ಪು ಸುಲ್ತಾನ್ ಕುರಿತು ೬, ೭ ಮತ್ತು ೧೦ನೇ ತರಗತಿಯಲ್ಲಿರುವ ಪಠ್ಯಗಳ ಪೈಕಿ ೭ನೇ ತರಗತಿಯ ಪಠ್ಯದಲ್ಲಿ ಹೆಚ್ಚು ವಿವರಗಳಿವೆ. ಅದನ್ನು ಉಳಿಸಿಕೊಳ್ಳುವ ಬದಲು ೬ನೇ ತರಗತಿಯ ಪಠ್ಯದಲ್ಲಿನ ನಾಲ್ಕಾರು ವಾಕ್ಯಗಳನ್ನು ಬಳಸಿಕೊಳ್ಳಲಾಗಿದೆ.
ಟಿಪ್ಪು ಕುರಿತ ಒಂದು ಪಾಠ ಕಡಿತವಾಗಿದ್ದರೆ ಬಸವೇಶ್ವರ, ರಾಮಾನುಜಾಚಾರ್ಯ, ಶಂಕರಾಚಾರ್ಯ, ಮಧ್ವಾಚಾರ್ಯರ ಒಂದು ಪಠ್ಯ ಭಾಗಕ್ಕೆ ಕತ್ತರಿ ಹಾಕಲಾಗಿದೆ. ಸಂವಿಧಾನಾತ್ಮಕ ಸಂಗತಿಗಳ ಜತೆಗೆ ತುಳುನಾಡು, ಹೈದಾರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಂತಹ ಪ್ರಾದೇಶಿಕ ಮಹತ್ವದ ವಿಷಯಗಳನ್ನು ಕಡಿತಗೊಳಿಸಿರುವುದು ವಿವೇಚನಾ ರಹಿತ ಕ್ರಮವಾಗಿದೆ. ಎಷ್ಟೋ ವಿದ್ಯಾರ್ಥಿಗಳು ಪ್ರೌಢಶಾಲೆಯನ್ನು ಪ್ರವೇಶಿಸುವುದಿಲ್ಲ! ಪ್ರೌಢಶಾಲೆಯಲ್ಲಿ ಓದುತ್ತಾರೆಂದು ಪ್ರಾಥಮಿಕ ಹಂತದ ಪಾಠಗಳನ್ನು ಕಡಿತಗೊಳಿಸುವುದು ಸರಿಯಲ್ಲ ದೇಶದ ಇತಿಹಾಸದ ಮತ್ತು ಇತಿಹಾಸವನ್ನು ಸೃಷ್ಟಿಸಿರುವ ಮಹಾನ ಚೇತನಗಳು ನಡೆದುಬಂದ ದಾರಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವದನ್ನು ಬಿಟ್ಟು ಅವರ ಪಠ್ಯವನ್ನು ಕೈಬಿಡು ನಿರ್ಧಾರ ಅವೈಜ್ಞಾನಿಕವಾಗಿದ್ದು, ಸರಕಾರ ಕೂಡಲೇ ಎಚ್ಚರಗೊಂಡು ಈ ನಿರ್ಧಾರದಿಂದ ಹಿಂದೆ ಸರಿದು ಹಿಂದಿನ ಪಠ್ಯಗಳನ್ನೇ ಮುಂದುವರೆಸಬೇಕೆAದು ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಮನವಿಯಲ್ಲಿ ವಿನಂತಿಸಿದೆ.
ಈ ಸಂದರ್ಭದಲ್ಲಿ ಪರಿಷತ್ ಜಿಲ್ಲಾ ಅಧ್ಯಕ್ಷ ಅಬ್ಬಾಸ ದೇಸಾಯಿ, ಕಾರ್ಯದರ್ಶಿ ಸಾದಿಕ ಹಲ್ಯಾಳ, ಪದಾಧಿಕಾರಿಗಳಾದ ಮುಗುಟ ಪೈಲವಾನ, ಖಾಜಾಸಾಬ ಮತ್ತೆ, ಯಾಸೀನ ಮುಲ್ಲಾ, ಅಬ್ಬು ಮುಜಾವರ, ಕುತಬ್ಬುದಿನ ಪೀರಜಾದೆ, ಮೊಸಿನ ಮಕಾನದಾರ ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × 2 =