ಡಿಕೆಶಿ, ಹೆಬ್ಬಾಳ್ಕರ್ ವಿರುದ್ದ ಮತ್ತೆ ಕೆಂಡ ಕಾರಿದ ರಮೇಶ ಜಾರಕಿಹೊಳಿ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಬಿಜೆಪಿ ಎಸ್ಸಿ, ಎಸ್ಟಿ ಕಾರ್ಯಕರ್ತರ ಸಮಾವೇಶದಲ್ಲಿ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕೆಂಡಕಾರಿದ್ದಾರೆ. ಕಳೆದ ಮೂರು ತಿಂಗಳಲ್ಲಿ …
Read More »ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಬಸವಣ್ಣ ಪ್ರತಿಮೆ ಸ್ಥಾಪನೆ – ಸಿಎಂ ಬೊಮ್ಮಾಯಿ
ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಬಸವಣ್ಣ ಪ್ರತಿಮೆ ಸ್ಥಾಪನೆ – ಸಿಎಂ ಬೊಮ್ಮಾಯಿ ಯುವ ಭಾರತ ಸುದ್ದಿ ಬೆಳಗಾವಿ : ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಭವ್ಯವಾದ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಸೂಕ್ತ ಆದೇಶ ನೀಡಲಾಗುವುದು. ಈ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿಸುವ ಧ್ಯೇಯ ಸರ್ಕಾರದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬಸವೇಶ್ವರ ವೃತ್ತದ ಸಮೀಪದ ತಿನುಸುಕಟ್ಟೆ ಬಳಿ ಶ್ರೀ ಬಸವೇಶ್ವರ …
Read More »5, 8 ನೇ ತರಗತಿಗೆ ಬೋರ್ಡ್ ಪರೀಕ್ಷೆ : ಕೋರ್ಟ್ ಹೇಳಿದ್ದೇನು ?
5, 8 ನೇ ತರಗತಿಗೆ ಬೋರ್ಡ್ ಪರೀಕ್ಷೆ : ಕೋರ್ಟ್ ಹೇಳಿದ್ದೇನು ? ಯುವ ಭಾರತ ಸುದ್ದಿ ಬೆಂಗಳೂರು : ರಾಜ್ಯದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸುವುದಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸರ್ಕಾರದ ತೀರ್ಮಾನದಂತೆ ವಿದ್ಯಾರ್ಥಿಗಳಿಗೆ ಮಾ.27ರಿಂದ ಬೋರ್ಡ್ ಪರೀಕ್ಷೆ ನಡೆಸಲಾಗುತ್ತದೆ. ಸರ್ಕಾರದಿಂದ ಬೋರ್ಡ್ ಪರೀಕ್ಷೆಯನ್ನು ನಡೆಸಲು ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನ ಕೈಗೊಂಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮಕ್ಕಳಿಗೆ …
Read More »ಬಣ್ಣಗೇಡು
ಬಣ್ಣಗೇಡು —————- ಬಳಿದು ಕೊಳ್ಳುತ್ತಾರೆ ಬಣ್ಣ, ಮುಖ ಬೆಳ್ಳಗಾಗಲು, ಕೂದಲು ಕರ್ರಗಾಗಲು; ಏನು ಮಾಡಿದರೇನು, ಸಾಧ್ಯವೆ ಒಳವರ್ಣ ಬದಲಾಗಲು? ಡಾ. ಬಸವರಾಜ ಸಾದರ.
Read More »ರಾಜ್ಯದಲ್ಲಿ ಅತಿ ಹೆಚ್ಚು ಮಲಿನ ಸಿಟಿ ಯಾವುದು ?
ರಾಜ್ಯದಲ್ಲಿ ಅತಿ ಹೆಚ್ಚು ಮಲಿನ ಸಿಟಿ ಯಾವುದು ? ಯುವ ಭಾರತ ಸುದ್ದಿ ದೆಹಲಿ : ಸ್ವಿಜರ್ಲ್ಯಾಂಡ್ ಮೂಲದ ಐಕ್ಯು ಏರ್ ಸಂಸ್ಥೆ ವಿಶ್ವ ವಾಯುಗುಣಮಟ್ಟ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಬೆಳಗಾವಿ ಕರ್ನಾಟಕದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿದ ನಗರ ಎನಿಸಿಕೊಂಡಿದೆ. ಕಲಬುರಗಿ 3, ಧಾರವಾಡ 5, ಹುಬ್ಬಳ್ಳಿ 6 ಮತ್ತು ಬೆಂಗಳೂರು 8 ನೇ ಸ್ಥಾನ ಪಡೆದುಕೊಂಡಿವೆ. ಸ್ವಿಜರ್ಲ್ಯಾಂಡ್ ಮೂಲದ ಐಕ್ಯು ಏರ್ ಸಂಸ್ಥೆ ವಿಶ್ವ …
Read More »ಕುಂದಾನಗರಿಯಿಂದಲೇ ರಣಕಹಳೆ : ಕಾಂಗ್ರೆಸ್ ಯುವರಾಜ ರಾಹುಲ್ ಬೆಳಗಾವಿಗೆ !
ಕುಂದಾನಗರಿಯಿಂದಲೇ ರಣಕಹಳೆ : ಕಾಂಗ್ರೆಸ್ ಯುವರಾಜ ರಾಹುಲ್ ಬೆಳಗಾವಿಗೆ ! ಯುವ ಭಾರತ ಸುದ್ದಿ ಬೆಳಗಾವಿ : ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಮಾ. 20 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಮೂಲಗಳ ಪ್ರಕಾರ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಬೆಳಗಾವಿಯಿಂದ ರಣಕಹಳೆಯೂದಲಿರುವ ಅವರು, ಭಾರತ ಜೋಡೋ ಯಾತ್ರೆ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
Read More »ಚುನಾವಣೆ ಕಾರಣಕ್ಕೆ ಸಾಮೂಹಿಕ ಊಟ ಹಾಕುವಂತಿಲ್ಲ !
ಚುನಾವಣೆ ಕಾರಣಕ್ಕೆ ಸಾಮೂಹಿಕ ಊಟ ಹಾಕುವಂತಿಲ್ಲ ! ಯುವ ಭಾರತ ಸುದ್ದಿ ಬೆಳಗಾವಿ : ಆಯಾ ಸ್ಥಳೀಯ ಸಂಸ್ಥೆಗಳ ಪರವಾನಿಗೆ ಪಡೆಯದೇ ಯಾವುದೇ ರೀತಿಯ ಬ್ಯಾನರ್, ಪೋಸ್ಟರ್ ಗಳನ್ನು ಅಂಟಿಸುವಂತಿಲ್ಲ; ಆದ್ದರಿಂದ ಪರವಾನಿಗೆ ಪಡೆಯದೇ ಬ್ಯಾನರ್ ಮತ್ತು ಪೋಸ್ಟರ್ ಗಳು ಕಂಡುಬಂದರೆ ಅವುಗಳನ್ನು ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಮುಂಬರುವ …
Read More »ಸುದ್ದಿಗೋಷ್ಠಿಯಲ್ಲಿ ಸಚಿವ ಸೋಮಣ್ಣ ಹೇಳಿದ್ದೇನು ?
ಸುದ್ದಿಗೋಷ್ಠಿಯಲ್ಲಿ ಸಚಿವ ಸೋಮಣ್ಣ ಹೇಳಿದ್ದೇನು ? ಯುವ ಭಾರತ ಸುದ್ದಿ ಬೆಂಗಳೂರು : ಸಚಿವ ಸೋಮಣ್ಣ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರು ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೆಲಸ ಮಾಡುವೆ. ಕಾಂಗ್ರೆಸ್ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. …
Read More »ವಿವಿಧ ಜಯಂತಿ ಆಚರಣೆ: ಪೂರ್ವಭಾವಿ ಸಭೆ : ಎಡಿಸಿ ಕೆ. ಟಿ ಶಾಂತಲಾ ಸೂಚನೆ
ವಿವಿಧ ಜಯಂತಿ ಆಚರಣೆ: ಪೂರ್ವಭಾವಿ ಸಭೆ : ಎಡಿಸಿ ಕೆ. ಟಿ ಶಾಂತಲಾ ಸೂಚನೆ ಯುವ ಭಾರತ ಸುದ್ದಿ ಬೆಳಗಾವಿ : ಸರ್ಕಾರದ ನಿರ್ದೇಶನದಂತೆ ಶ್ರೀ ರೇಣುಕಾಚಾರ್ಯ ಜಯಂತಿ, ಶ್ರೀ ಯೋಗಿ ನಾರಾಯಣ ಯತಿಂದ್ರರ (ಕೈವಾರ ತಾತಯ್ಯ) ಜಯಂತಿ ಹಾಗೂ ಶ್ರೀ ದೇವರ ದಾಸಿಮಯ್ಯ ಜಯಂತಿ ನಿಗದಿತ ದಿನಾಂಕದಂದು ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದ ಮೂಲಕ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ …
Read More »ಚುನಾವಣೆ: ಮನೆಗಳಲ್ಲಿ ಅಕ್ರಮ ದಾಸ್ತಾನು ಕಂಡುಬಂದರೆ ಕೂಡಲೇ ತಿಳಿಸಿ..!
ಚುನಾವಣೆ: ಮನೆಗಳಲ್ಲಿ ಅಕ್ರಮ ದಾಸ್ತಾನು ಕಂಡುಬಂದರೆ ಕೂಡಲೇ ತಿಳಿಸಿ..! ಯುವ ಭಾರತ ಸುದ್ದಿ ಬೆಳಗಾವಿ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಚಿಸಲಾಗಿರುವ ತಂಡಗಳು ಕಾರ್ಯೋನ್ಮುಖರಾಗಿ ಚುರುಕಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮಾ.13) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ …
Read More »