Breaking News

ಇಟಗಿ : ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ

ಇಟಗಿ : ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ ಯುವ ಭಾರತ ಸುದ್ದಿ ಇಟಗಿ : ಮನುಷ್ಯ ಜನ್ಮ ಶ್ರೇಷ್ಠವಾಗಿದ್ದರಿಂದ ಸನ್ಮಾರ್ಗ, ಸತ್ಕಾರ್ಯ, ಉತ್ತಮ ಸಂಸ್ಕಾರಗಳನ್ನು ಮರೆಯಬಾರದೆಂದು ಕಾದರವಳ್ಳಿಯ ಶ್ರೀ ಅದೃಶ್ಯಾನಂದಾಶ್ರಮ ಸೀಮಿಮಠಾಧೀಶ ಶ್ರೀ ಡಾ. ಪಾಲಾಕ್ಷ ಶಿವಯೋಗೀಶ್ವರರು ಹೇಳಿದರು. ಇಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮದ ಧರ್ಮಚಿಂತನಾ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು. ಎಲ್ಲ ದೇಶಗಳಿಗಿಂತ ಭಾರತ ಧರ್ಮದಿಂದ ಶ್ರೇಷ್ಠವಾಗಿದೆ. ನಾವು ಧರ್ಮವನ್ನು …

Read More »

ಬೆಳಗಾವಿ-ಕಲಬುರ್ಗಿ ವಿಭಾಗ ಮಟ್ಟದ ಸನ್ನದು ಲೆಕ್ಕ ಪರಿಶೋಧಕರ ಕಾರ್ಯಗಾರ : ಹಣ ದುರ್ಬಳಕೆ ಆಗದಂತೆ ಆಡಿಟ್ ವರದಿ ಸಲ್ಲಿಸಿ

ಬೆಳಗಾವಿ-ಕಲಬುರ್ಗಿ ವಿಭಾಗ ಮಟ್ಟದ ಸನ್ನದು ಲೆಕ್ಕ ಪರಿಶೋಧಕರ ಕಾರ್ಯಗಾರ : ಹಣ ದುರ್ಬಳಕೆ ಆಗದಂತೆ ಆಡಿಟ್ ವರದಿ ಸಲ್ಲಿಸಿ ಯುವ ಭಾರತ ಸುದ್ದಿ ಬೆಳಗಾವಿ : ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಆಗದಂತೆ ಸರಿಯಾದ ಆಡಿಟ್ ನಡೆಸಿ ವರದಿ ಸಲ್ಲಿಸುವ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲ ಸನ್ನದು ಲೆಕ್ಕ ಪರಿಶೋಧಕರು ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ದೇಶಕ ಸರ್ದಾರ್ ಸರ್ಫರಾಜ್ ಖಾನ್ …

Read More »

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದಲ್ಲಿ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ. ಜೊತೆಗೆ ತಮ್ಮ ವೃತ್ತಿಯಲ್ಲಿ ತಾಳ್ಮೆ ಮತ್ತು ಸಹನೆ ಬಹುಮುಖ್ಯ. ಉದಯೋನ್ಮುಖ ವಕೀಲರು ಕಾನೂನಿನ ಜೊತೆಗೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳುವುದರಿಂದ ಶ್ರೇಷ್ಠ ವಕೀಲರಾಗಬಹುದು” ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ. ಎಸ್. ಪಾಶ್ಚಾಪುರೆ ಸಲಹೆ ನೀಡಿದರು. ನಗರದ ಕೆ. ಎಲ್. ಎಸ್ …

Read More »

ಗದಗ ವಿವಿ ಘಟಿಕೋತ್ಸವ : ಬೆಳಗಾವಿ ಪರಿಸರವಾದಿ ಶಿವಾಜಿ ಕಾಗಣಿಕರಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಗದಗ ವಿವಿ ಘಟಿಕೋತ್ಸವ : ಬೆಳಗಾವಿ ಪರಿಸರವಾದಿ ಶಿವಾಜಿ ಕಾಗಣಿಕರಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಗದಗ ತಾಲೂಕಿನ ನಾಗಾವಿಯಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರು ಬೆಳಗಾವಿಯ  ಕಟ್ಟಣಬಾವಿ ಗ್ರಾಮದ ಗಾಂಧಿವಾದಿ ಮತ್ತು ಹಿರಿಯ  ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣಿಕರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. …

Read More »

ಬಿಜೆಪಿಗೆ ಬೆಂಬಲ ಘೋಷಿಸಿದ ಸುಮಲತಾ

ಬಿಜೆಪಿಗೆ ಬೆಂಬಲ ಘೋಷಿಸಿದ ಸುಮಲತಾ ಯುವ ಭಾರತ ಸುದ್ದಿ ಮಂಡ್ಯ: ಸಂಸದೆ ಸುಮಲತಾ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ಸೇರ್ಪಡೆಗೆ ಕಾನೂನು ತೊಡಕಿದ್ದು, ಸದ್ಯಕ್ಕೆ ಬೆಂಬಲ ಘೋಷಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಕುಟುಂಬ ರಾಜಕಾರಣ ಮಾಡುವುದಿಲ್ಲ, ನಾನು ರಾಜಕಾರಣದಲ್ಲಿ ಇರುವವರೆಗೂ ಮಗ ರಾಜಕಾರಣಕ್ಕೆ ಬರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಕಳೆದ 4 ವರ್ಷಗಳಿಂದ ಮಂಡ್ಯ ಜಿಲ್ಲೆ ಅಭಿವೃದ್ಧಿ ಮಾಡಲು ಬಿಜೆಪಿ ಸಹಾಯ ಮಾಡಿದೆ. ಮಂಡ್ಯ ರಾಜಕಾರಣ ಶುದ್ಧೀಕರಣಗೊಳಿಸಲು ಬಿಜೆಪಿಗೆ ಬೆಂಬಲ …

Read More »

ಮಾರ್ಚ್ 11 ರಿಂದ ಬಸವನ ಕುಡಚಿ ಜಾತ್ರಾ ಮಹೋತ್ಸವ

ಮಾರ್ಚ್ 11 ರಿಂದ ಬಸವನ ಕುಡಚಿ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಶ್ರೀ ಬಸವೇಶ್ವರ, ಶ್ರೀ ಕಲಮೇಶ್ವರ ಹಾಗೂ ಶ್ರೀ ಬ್ರಹ್ಮದೇವರ ಜಾತ್ರಾ ಮಹೋತ್ಸವ ಮಾರ್ಚ್ 11 ರಿಂದ 22, 2023 ರ ವರೆಗೆ ಜರುಗಲಿದ್ದು ತನ್ನಮಿತ್ತ ಈ ಲೇಖನ. ಯುವ ಭಾರತ ಸುದ್ದಿ ಬಸವನಕುಡಚಿ : ಚಾರಿತ್ರಿಕ ಗ್ರಾಮ. ಕನ್ನಡ ನಾಡಿನ ಸಂಸ್ಕೃತಿಗೆ ರಾಜಮನೆತನಗಳು ನೀಡಿದ ಕೊಡುಗೆ ಅಪಾರ. ಅದರಲ್ಲಿಯೂ …

Read More »

ಎತ್ತಿನ ಬಂಡಿ ಓಟದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ಕಿರಣ ಜಾಧವ

ಎತ್ತಿನ ಬಂಡಿ ಓಟದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ಕಿರಣ ಜಾಧವ ಯುವ ಭಾರತ ಸುದ್ದಿ ಬೆಳಗಾವಿ : ಮಜಗಾವಿಯ ಶ್ರೀ ಶೇತಕರಿ ಸಂಘಟನೆ, ಬಿಜೆಪಿ ರಾಜ್ಯ ಒಬಿಸಿ ಯುವ ಮೋರ್ಚಾದ ಕಾರ್ಯದರ್ಶಿ ಹಾಗೂ ಸಕಲ ಮರಾಠ ಸಮಾಜದ ಸಂಚಾಲಕ ಕಿರಣ ಜಾಧವ ಅವರ ಬೆಂಬಲದೊಂದಿಗೆ ಮಾರ್ಚ್ 4 ರಂದು ನಡೆದ ಖಾಲಿ ಬಂಡಿ ಓಟದ ಸ್ಪರ್ಧೆಯಲ್ಲಿ ವಿಜೇತರಾದವರು ಮತ್ತು 5 ಮಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಮಜಗಾವಿಯ …

Read More »

ಅತೀತ

ಅತೀತ ———- ನಮ್ಮೆಲ್ಲ ಕ್ರಿಯೆ- ಪ್ರಕ್ರಿಯೆಗಳಿಗೆ ಸ್ವಕೀಯ, ಪರಕೀಯ ಸಂಬಂಧಗಳೇ ಆಧಾರ!! ಅವೆರಡೂ ದೂರ ಸರಿದಾಗಲೇ, ಈ ಜಗದ ಉದ್ಧಾರ. ಡಾ. ಬಸವರಾಜ ಸಾದರ

Read More »

ಕಾಳಿಂಗಪ್ಪ ಕಮ್ಮಾರ ನಿಧನ

ಕಾಳಿಂಗಪ್ಪ ಕಮ್ಮಾರ ಯುವ ಭಾರತ ಸುದ್ದಿ ಇಟಗಿ : ಖಾನಾಪುರ ತಾಲೂಕು ಇಟಗಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ಅರ್ಚಕರಲ್ಲಿ ಒಬ್ಬರಾದ ಕಾಳಿಂಗಪ್ಪ ಶಿವಲಿಂಗಪ್ಪ ಕಮ್ಮಾರ (82) ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು ಇದ್ದಾರೆ.

Read More »

ಗಿಜರೆ ಆಸ್ಪತ್ರೆ ವತಿಯಿಂದ ಉಚಿತ ರಕ್ತ ತಪಾಸಣೆ ಶಿಬಿರ

ಗಿಜರೆ ಆಸ್ಪತ್ರೆ ವತಿಯಿಂದ ಉಚಿತ ರಕ್ತ ತಪಾಸಣೆ ಶಿಬಿರ ಯುವ ಭಾರತ ಸುದ್ದಿ ಬೆಳಗಾವಿ : ಗಣೇಶಪುರ ಅಯೋಧ್ಯಾ ನಗರ ಗಿಜರೆ ಪ್ರೈಮ್ ಕೇರ್ ಹಾಸ್ಪಿಟಲ್ ವತಿಯಿಂದ ಮಾರ್ಚ್ 13 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಉಚಿತ ರಕ್ತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು ನಾಗರಿಕರು ಇದರ ಸದುಪಯೋಗ ಪಡೆಯುವಂತೆ ಕೋರಲಾಗಿದೆ.

Read More »