ಬೆಳಗಾವಿಯಲ್ಲಿ ಪ್ರಧಾನಿ ರೋಡ್ ಶೋ ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆಯ ಎರಡು ಬದಿಗಳಲ್ಲಿ ಬಿರು ಬಿಸಿಲನ್ನು ಲೆಕ್ಕಿಸದೆ ನಿಂತಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರ ಕಡೆ ಪ್ರಧಾನಿ ನರೇಂದ್ರ ಮೋದಿ ಕೈಬೀಸಿ ಹರ್ಷೋದ್ಗಾರ ಸೂಚಿಸಿದರು. ಒಟ್ಟಾರೆ ಬೆಳಗಾವಿಯಲ್ಲಿ ಸೋಮವಾರ ನಡೆದ ಮೋದಿ ರೋಡ್ ಶೋ ಭರ್ಜರಿಯಾಗಿ ನಡೆಯಿತು.
Read More »ವಿಮಾನ ನಿಲ್ದಾಣ ಉದ್ಘಾಟಿಸಿ ಬೆಳಗಾವಿಗೆ ಬಂದ ಮೋದಿ !
ವಿಮಾನ ನಿಲ್ದಾಣ ಉದ್ಘಾಟಿಸಿ ಬೆಳಗಾವಿಗೆ ಬಂದ ಮೋದಿ ! ಯುವ ಭಾರತ ಸುದ್ದಿ ಬೆಳಗಾವಿ/ಶಿವಮೊಗ್ಗ: ಶಿವಮೊಗ್ಗ ನೂತನ ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಬಂದಿಳಿದಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಕೆ ಎಸ್ ಆರ್ ಪಿ ಮೈದಾನಕ್ಕೆ ಬಂದಿಳಿದಿದ್ದಾರೆ. ನಂತರ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆ : ಶಿವಮೊಗ್ಗ– ಭದ್ರಾವತಿ ನಗರಗಳ ಮಧ್ಯೆ ಇರುವ ಸೋಗಾನೆ ಬಳಿ ನಿರ್ಮಾಣಗೊಂಡಿರುವ …
Read More »ಮೋದಿ ಆಗಮನಕ್ಕೆ ಕುಂದಾನಗರಿ ಜನತೆ ಕಾತರ
ಮೋದಿ ಆಗಮನಕ್ಕೆ ಕುಂದಾನಗರಿ ಜನತೆ ಕಾತರ ಯುವ ಭಾರತ ಸುದ್ದಿ ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಮೋದಿ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿ ಅದರ ಪೂರ್ಣ ಲಾಭ ಪಡೆಯಲು ಕೇಸರಿ ಪಡೆ ಸಂಕಲ್ಪಿಸಿದೆ. ಎಲ್ಲಿ ನೋಡಿದರೂ ಕೇಸರಿ ಧ್ವಜಗಳ ಹಾರಾಟ..ಮೋದಿ ಕುರಿತ ವಿಡಿಯೋಗಳ ಆರ್ಭಟ.. ಬೆಳಗಾವಿಯಲ್ಲಿಂದು ಕಂಡುಬಂದಿರುವ ನೋಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ ಮಹಾನಗರಕ್ಕೆ ಸೋಮವಾರ …
Read More »ನಾನೇಕೆ ಟೆನ್ಶನ್ ಮಾಡಿಕೊಳ್ಳಲಿ. ಕುಡಚಿಯಲ್ಲೇ ನಿಲ್ತೇನೆ ಎಂದ ಶಾಸಕ
ನಾನೇಕೆ ಟೆನ್ಶನ್ ಮಾಡಿಕೊಳ್ಳಲಿ. ಕುಡಚಿಯಲ್ಲೇ ನಿಲ್ತೇನೆ ಎಂದ ಶಾಸಕ ಯುವ ಭಾರತ ಸುದ್ದಿ ಕುಡಚಿ : ವಿಧಾನಸಭಾ ಚುನಾವಣೆಗೆ ಯಾವ ಮತ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲಗಳಿಗೆ ಸ್ವತಃ ಕುಡಚಿ ಪ್ರಭಾವಿ ಬಿಜೆಪಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಅವರೇ ಕೊನೆಗೂ ತೆರೆ ಎಳೆದಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ತಮ್ಮ ಮತದಾರರ ಮನದಾಳದ ಇಂಗಿತ ಅರಿತು ಭಾವನಾತ್ಮಕವಾಗಿ ಮಾತನಾಡಿದ ಅವರು, ಯಾವ ಕಾರಣಕ್ಕೂ ಬೇರೆ ಕ್ಷೇತ್ರಕ್ಕೆ ನಾನು …
Read More »ಪ್ರಧಾನಿ ಮೋದಿಯವರನ್ನು ಸ್ವಾಗತಿಸಿಕೊಳ್ಳುವವರು ಯಾರು ಗೊತ್ತಾ ?
ಪ್ರಧಾನಿ ಮೋದಿಯವರನ್ನು ಸ್ವಾಗತಿಸಿಕೊಳ್ಳುವವರು ಯಾರು ಗೊತ್ತಾ ? ಯುವ ಭಾರತ ಸುದ್ದಿ ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಬೆಳಗಾವಿ ಮಹಾನಗರದಲ್ಲಿ ಸ್ವಾಗತಿಸಿಕೊಳ್ಳುವವರು ಯಾರು ಗೊತ್ತೇ ? ಪ್ರಧಾನಿ ಮೋದಿಯವರನ್ನು ಜನಪ್ರತಿನಿಧಿಗಳ ಬದಲು , ಕಾಯಕಯೋಗಿಗಳು ಸ್ವಾಗತಿಸಲಿದ್ದಾರೆ . ಇಂಥದ್ದೊಂದು ನೂತನ ಪ್ರಯೋಗಕ್ಕೆ ರಾಜ್ಯ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಮೋದಿಯವರ ಸ್ವಾಗತಕ್ಕೆ ಈಗಾಗಲೇ ಐದು ಜನ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ . ನೇಕಾರ ಕಲ್ಲಪ್ಪ ಟೊಪಗಿ , …
Read More »ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ ವನಿತೆಯರಿಗೆ ವಿಶ್ವಕಪ್ ಕಿರೀಟ
ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ ವನಿತೆಯರಿಗೆ ವಿಶ್ವಕಪ್ ಕಿರೀಟ ಕೇಪ್ ಟೌನ್ : ವಿಶ್ವ ಕಪ್ ಗೆಲ್ಲುವ ಕನಸು ದಕ್ಷಿಣ ಆಫ್ರಿಕಾ ಪಾಲಿಗೆ ಮತ್ತೆ ನುಚ್ಚುನೂರು ಆಗಿದೆ. ಆಸ್ಟ್ರೇಲಿಯಾ ಮತ್ತೊಮ್ಮೆ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಇಂದು ನಡೆದ ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕವನ್ನು ಭರ್ಜರಿಯಾಗಿ ಸೋಲಿಸಿ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. 6 ನೇ ಬಾರಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ. ಮಹಿಳೆಯರ T20WC ವಿಶ್ವಕಪ್ ಚಾಂಪಿಯನ್ …
Read More »ಮೋದಿ ಬೆಳಗಾವಿ ಭೇಟಿ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಭಾರೀ ಬದಲಾವಣೆ
ಮೋದಿ ಬೆಳಗಾವಿ ಭೇಟಿ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಭಾರೀ ಬದಲಾವಣೆ ಯುವ ಭಾರತ ಸುದ್ದಿ, ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬಾರಿ ಬದಲಾವಣೆ ಮಾಡಲಾಗಿದೆ. ಮಾಲಿನಿ ಸಿಟಿವರೆಗೂ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು 27/02/2023 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ದಿನಾಂಕ:27/02/2023 ರಂದು …
Read More »ಹಡಗಿನಾಳದಲ್ಲಿ 15.22 ಕೋಟಿ ರೂಗಳ ವೆಚ್ಚದ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ
ಹಡಗಿನಾಳದಲ್ಲಿ 15.22 ಕೋಟಿ ರೂಗಳ ವೆಚ್ಚದ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ ಯುವ ಭಾರತ ಸುದ್ದಿ ಗೋಕಾಕ : ಹಡಗಿನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ಗೃಹ ಹಾಗೂ ನೀರಾವರಿ ಬಳಕೆಗಾಗಿ ವಿದ್ಯುತ್ತ್ ಬೇಡಿಕೆ ಈಡೇರಿಸಲು ಹಡಗಿನಾಳ ಗ್ರಾಮದಲ್ಲಿ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ನವೆಂಬರ್ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ …
Read More »ಗುಡಿಸಲಿಗೆ ಆಕಸ್ಮಿಕ ಬೆಂಕಿ: ವೃದ್ಧ ದಂಪತಿ ಸಜೀವ ದಹನ
ಗುಡಿಸಲಿಗೆ ಆಕಸ್ಮಿಕ ಬೆಂಕಿ: ವೃದ್ಧ ದಂಪತಿ ಸಜೀವ ದಹನ ಯುವ ಭಾರತ ಸುದ್ದಿ ವಿಜಯಪುರ: ಗುಡಿಸಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಇಬ್ಬರು ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಚಡಚಣ ಪಟ್ಟಣದ ಹೊರ ವಲಯದ ಜಮೀನಿನ ಗುಡಿಸಲಿನಲ್ಲಿ ವಾಸವಿದ್ದ ಕರೀಮಸಾಬ ಇಮಾಮಸಾಬ ಟಪಾಲ (82), ಸಾಜನಬಿ ಕರೀಮಸಾಬ ಟಪಾಲ ಮೃತಪಟ್ಟಿರುವ ದುರ್ದೈವಿಗಳು ಎಂದು ಗುರುತಿಸಲಾಗಿದೆ. ನೀವರಗಿ ರಸ್ತೆಯಲ್ಲಿನ ತಮ್ಮ ಜಮೀನಿನಲ್ಲಿ ಈ …
Read More »ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸಾವು
ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸಾವು ಯುವ ಭಾರತ ಸುದ್ದಿ ಹಾಸನ : ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಕಾರೇಹಳ್ಳಿ ಬಳಿ ಸಂಭವಿಸಿದೆ. ರಸ್ತೆ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಪತಿ- ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲೋಕೇಶ್ , ಲಕ್ಷ್ಮಿ …
Read More »
YuvaBharataha Latest Kannada News