Breaking News

ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ18 ರಂದು

ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ18 ರಂದು ಬೆಳಗಾವಿ : ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಹೃದಯ ಸಾಹಿತ್ಯ ಪ್ರತಿಷ್ಠಾನ ಸಹಯೋಗಗಳೊಂದಿಗೆ ಜೂ.18 ರಂದು ಬೆಳಗ್ಗೆ 10 ಗಂಟೆಗೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಲೇಖಕ ಎಲ್. ಎಸ್. ಶಾಸ್ತ್ರಿ ವಹಿಸಲಿದ್ದಾರೆ. …

Read More »

2ನೇ ದಿನ ಉಚಿತವಾಗಿ ಪ್ರಯಾಣಿಸಿದ 41.34 ಲಕ್ಷ ಮಹಿಳೆಯರು: 8.83 ಕೋಟಿ ವೆಚ್ಚ

2ನೇ ದಿನ ಉಚಿತವಾಗಿ ಪ್ರಯಾಣಿಸಿದ 41.34 ಲಕ್ಷ ಮಹಿಳೆಯರು: 8.83 ಕೋಟಿ ವೆಚ್ಚ ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ‘ಶಕ್ತಿ’ ಯೋಜನೆ ಜಾರಿಯಾಗಿ ಎರಡು ದಿನ ಕಳೆದಿದೆ. ಮೊದಲ ದಿನ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಸೋಮವಾರ ಮಧ್ಯಾಹ್ನ 12 ಗಂಟೆವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಒಟ್ಟು 5,71,023 ಮಂದಿ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಪ್ರಯಾಣದ …

Read More »

ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪನ

ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪನ ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಸೋಮವಾರ ಮಧ್ಯಾಹ್ನ 1.33ಕ್ಕೆ ಈ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ರಷ್ಚು ತೀವ್ರತೆ ದಾಖಲಾಗಿದೆ ಎಂದು ಎನ್ ಸಿಎಸ್ ಟ್ವೀಟ್ ಮಾಡಿದೆ. ದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ಆದರೆ ಯಾವುದೇ ಜೀವಹಾನಿ …

Read More »

ಬಿಲ್ಲವೋತ್ಸವದಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಸತ್ಕಾರ

ಬಿಲ್ಲವೋತ್ಸವದಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಸತ್ಕಾರ ದೆಹಲಿ : ಶುಕ್ರವಾರ ಸಂಜೆ ದೆಹಲಿ ಸಾರ್ವಜನಿಕ ಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ “ಬಿಲ್ಲವೋತ್ಸವ-೨೦೨೩” ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಲಾಯಿತು. ಕತಾರ್ ದೇಶದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುತ್ತ, ಕರ್ನಾಟಕ ಸಂಘ ಕತಾರ್ ಸದಸ್ಯತ್ವವನ್ನು ದಾಖಲೆಯ ಸಂಖೆಗೆ ಹೆಚ್ಚಿಸಿದ ಹೆಮ್ಮೆಗೆ, ಕನ್ನಡ ಚಲನಚಿತ್ರಗಳನ್ನು ಕತಾರ್ ನಲ್ಲಿ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿಕೊಡುವುದಕ್ಕೆ, ಪರಿಸರ ಪರ ಜಾಗೃತಿಗೆ ಏರ್ಪಡಿಸಿದ್ದ …

Read More »

ಹೊಸ ಸರಕಾರ..ಹೊಸ ಹೆಜ್ಜೆ…!ಬೆಳಗಾವಿ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಚರ್ಚೆಯಾದದ್ದೇನು ?

ಹೊಸ ಸರಕಾರ..ಹೊಸ ಹೆಜ್ಜೆ…!ಬೆಳಗಾವಿ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಚರ್ಚೆಯಾದದ್ದೇನು ? ಬೆಳಗಾವಿ : ರೈಲ್ವೆ, ನೀರಾವರಿ, ಹೆದ್ದಾರಿ, ರಿಂಗ್ ರಸ್ತೆ, ಫ್ಲೈ ಓವರ್ ನಿರ್ಮಾಣ, ಭೂಸ್ವಾಧೀನ, ಪುನರ್ವಸತಿ ಹೀಗೆ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿಯೊಂದು ಯೋಜನೆಯ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಬೇಕು; ಯೋಜನೆಗೆ ಅಡ್ಡಿಯಾಗುವ ತಾಂತ್ರಿಕ ತೊಂದರೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. . ಜಿಲ್ಲಾಧಿಕಾರಿ …

Read More »

ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ18 ರಂದು

ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ18 ರಂದು ಬೆಳಗಾವಿ : ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಹೃದಯ ಸಾಹಿತ್ಯ ಪ್ರತಿಷ್ಠಾನ ಸಹಯೋಗಗಳೊಂದಿಗೆ ಜೂ.18 ರಂದು ಬೆಳಗ್ಗೆ 10 ಗಂಟೆಗೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಲೇಖಕ ಎಲ್. ಎಸ್. ಶಾಸ್ತ್ರಿ ವಹಿಸಲಿದ್ದಾರೆ. …

Read More »

ಪತ್ರಕರ್ತರಿಗೆ ಸಿಎಂ ಅಭಯ ; ಕೆಯುಡಬ್ಲ್ಯೂಜೆ ನಿಯೋಗದಿಂದ ಸಿದ್ದರಾಮಯ್ಯ ಭೇಟಿ, ಚರ್ಚೆ

ಪತ್ರಕರ್ತರಿಗೆ ಸಿಎಂ ಅಭಯ ; ಕೆಯುಡಬ್ಲ್ಯೂಜೆ ನಿಯೋಗದಿಂದ ಸಿದ್ದರಾಮಯ್ಯ ಭೇಟಿ, ಚರ್ಚೆ ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ರಾಜ್ಯದ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ 500 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವುದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಯಶಸ್ವಿನಿ ಯೋಜನೆಗೆ ಪತ್ರಕರ್ತರ ಸೇರ್ಪಡೆ, …

Read More »

ರಾಜ್ಯದ ಹಲವಡೆ ಕುಡಿಯುವ ನೀರಿಗೆ ಅಭಾವ : ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

ರಾಜ್ಯದ ಹಲವಡೆ ಕುಡಿಯುವ ನೀರಿಗೆ ಅಭಾವ : ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಬೆಂಗಳೂರು : ಮುಂಗಾರು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯದ ಹಲವಡೆ ಕುಡಿಯುವ ನೀರಿನ ಅಭಾವ ತಲೆದೂರಿದ್ದು, ಇಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನದಿಗಳು, ಹಳ್ಳ, ಕೆರೆಗಳು ಖಾಲಿಯಾಗಿದ್ದು, ನೀರಿನ ಕೊರತೆ ಉಂಟಾಗಿದೆ. ಈ ಬಾರಿ ಅತಿ ಬಿಸಿಲು ಕಾಣಿಸಿಕೊಂಡಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ಸಹ ಆಗಮನವಾಗಿಲ್ಲ. …

Read More »

ವಿದ್ಯಾರ್ಥಿಗೆ ಸಹಾಯ ಮಾಡಿದ ಕೆ.ಎಲ್.ರಾಹುಲ್

ವಿದ್ಯಾರ್ಥಿಗೆ ಸಹಾಯ ಮಾಡಿದ ಕೆ.ಎಲ್.ರಾಹುಲ್ ಬಾಗಲಕೋಟೆ : ಮಹಾಲಿಂಗಪುರದ ಬಡ ವಿದ್ಯಾರ್ಥಿ ಅಮೃತ ಮಾವಿನಕಟ್ಟಿ ವಿದ್ಯಾಭ್ಯಾಸಕ್ಕೆ ಭಾರತೀಯ ತಂಡದ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಅವರು ಸಹಕಾರ ನೀಡುವ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಮಹಾಲಿಂಗಪುರದ ಅಯೋಧ್ಯ ನಗರದ ನಿವಾಸಿ ಅಮೃತ ದಾನಪ್ಪ ಮಾವಿನಕಟ್ಟಿ ಹಾಗೂ ಮತ್ತೊರ್ವ ಸಹೋದರ ಅಮಿತ್‌ ದಶಕದ ಹಿಂದೆ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದರು. ಆಗ ದೊಡ್ಡಪ್ಪ …

Read More »

ಟ್ರಾಕ್ ಹಾಗೂ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಟ್ರಾಕ್ ಹಾಗೂ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು ರಡ್ಡೇರಹಟ್ಟಿ : ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಸೋಮವಾರ ಟ್ರಕ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ . ರಡ್ಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಭೀಮಪ್ಪ ಬಾಂವಿ (31) ಸಾವಿಗೀಡಾಗಿದ್ದಾನೆ. ಟ್ರಕ್ ಚಾಲಕ ಕುಡಿದು ಚಲಾಯಿಸಿದ್ದರಿಂದ ಆತನ ನಿಯಂತ್ರಣ ತಪ್ಪಿ ಓರ್ವನ ಬಲಿಯಾಗಿದೆ.ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »