ಅಥಣಿಯಲ್ಲಿ ಸವದಿಗೆ ಬಿಗ್ ಶಾಕ್ : ಬಿಎಸ್ ವೈ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ! ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಆಕಾಂಕ್ಷಿಗಳನ್ನು ಒಂದು ಮಾತು ಸಹ ಕೇಳದೆ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಇದು ನಮ್ಮ ಪಾಲಿಗೆ ಬಹಳ ದೊಡ್ಡ ಅನ್ಯಾಯ. ಇಂತಹ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಬಿಜೆಪಿಯ ತತ್ವ ಸಿದ್ಧಾಂತದಿಂದ ನಾನು ಪ್ರೇರೇಪಿತನಾಗಿದ್ದು …
Read More »ಮದ್ಲೂರ ಗ್ರಾಮದೇವಿ ಜಾತ್ರೆ ಸಂಪನ್ನ
ಮದ್ಲೂರ ಗ್ರಾಮದೇವಿ ಜಾತ್ರೆ ಸಂಪನ್ನ ಯುವ ಭಾರತ ಸುದ್ದಿ ಬೆಳಗಾವಿ : ಯರಗಟ್ಟಿ ತಾಲೂಕಿನ ಮದ್ಲೂರಿನ ಗ್ರಾಮದೇವತೆ ಆದಿಶಕ್ತಿ ಶ್ರೀ ದ್ಯಾಮಮ್ಮದೇವಿ ಜಾತ್ರೆ ಸಂಪನ್ನಗೊಂಡಿತು. ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೆಗೆ ಇಂದು ದೇವಿ ಸೀಮೆಗೆ ಹೋಗುವುದರೊಂದಿಗೆ ಮಂಗಲವಾಯಿತು.
Read More »ಕರ್ನಾಟಕ ರಾಜ್ಯದ ವಿಕಾಸ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ-ಮಧ್ಯಪ್ರದೇಶದ ಸಿಎಮ್ ಶಿವರಾಜಸಿಂಗ ಚೌಹಾಣ.
ಕರ್ನಾಟಕ ರಾಜ್ಯದ ವಿಕಾಸ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ-ಮಧ್ಯಪ್ರದೇಶದ ಸಿಎಮ್ ಶಿವರಾಜಸಿಂಗ ಚೌಹಾಣ. ಯುವ ಭಾರತ ಸುದ್ದಿ ಗೋಕಾಕ: ಕರ್ನಾಟಕ ರಾಜ್ಯದ ವಿಕಾಸ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯವೆಂದು ಜನತೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ ಚೌಹಾಣ ಹೇಳಿದರು. ಅವರು, ಬುಧವಾರದಂದು ನಗರದ ಹೊರವಲಯದ ಬಸವೇಶ್ವರ ಸಭಾ ಭವನದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡ ಗೋಕಾಕ …
Read More »ನಿದ್ರಾವಸ್ಥೆಗೆ ಜಾರಿದ ಅಧಿಕಾರಿಗಳು : ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಕೆ ಮಾಡಿಕೊಂಡ ಹೆಬ್ಬಾಳ್ಕರ
ನಿದ್ರಾವಸ್ಥೆಗೆ ಜಾರಿದ ಅಧಿಕಾರಿಗಳು : ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಕೆ ಮಾಡಿಕೊಂಡ ಹೆಬ್ಬಾಳ್ಕರ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ತಮ್ಮ ಚುನಾವಣಾ ಪ್ರಚಾರಕ್ಕೆ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಿ ಮನೆ ಮನೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನಿದ್ರಾವಸ್ಥೆಗೆ ಜಾರಿದ್ದಾರೆ ! ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮರಿಕಟ್ಟಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ …
Read More »ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ವತಿಯಿಂದ 28 ದಿನದ ಮಗುವಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ
ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ವತಿಯಿಂದ 28 ದಿನದ ಮಗುವಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ಬೆಳಗಾವಿ : ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ವು 28 ದಿನದ ಮಗುವಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ ಮಹತ್ ಮಾನವೀಯ ಕಾರ್ಯ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ. ಬೆಳಗಾವಿ ದಕ್ಷಿಣ ರೋಟರಿ ಕ್ಲಬ್ ಚಂದಗಡದ ನಡವಾಡೆ ಗ್ರಾಮದ ತನುಜಾ ಕುಂಡೇಕರ್ ಅವರ 28 ದಿನದ ಮಗುವಿಗೆ ಜೀವದಾನದ ಜಾಗತಿಕ ಅನುದಾನ ಯೋಜನೆಯಡಿ ಉಚಿತ …
Read More »ಸಿಎಂ ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ!
ಸಿಎಂ ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಾಮುಖಿಯಾದ ಪ್ರಸಂಗ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಈ ಕ್ಷಣಕ್ಕೆ ಸಾಕ್ಷಿಯಾದರು. ಕೆಲವೇ ಕಾಲ ಉಭಯ ಪಕ್ಷಗಳ ನಾಯಕರು ಕುಶಲೋಪರಿ ವಿಚಾರಿಸಿ ತಮ್ಮ ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕೆ ತೆರಳಿದರು. ಬೆಂಗಳೂರಿನಿಂದ ಬಂದ ಮಲ್ಲಿಕಾರ್ಜುನ ಖರ್ಗೆ ಚಿಕ್ಕೋಡಿ, …
Read More »ಮಕ್ಕಳೊಂದಿಗೆ ಬಿಸಿಬಿಸಿ ದೋಸೆ ಸವಿದ ಪ್ರಿಯಾಂಕಾ ವಾದ್ರಾ
ಮಕ್ಕಳೊಂದಿಗೆ ಬಿಸಿಬಿಸಿ ದೋಸೆ ಸವಿದ ಪ್ರಿಯಾಂಕಾ ವಾದ್ರಾ ಮೈಸೂರು : ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ನಲ್ಲಿ ಬುಧವಾರ ದೋಸೆ ಸವಿದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ವಾದ್ರಾ ಅವರು ಮಕ್ಕಳ ಜತೆ ಒಡನಾಡಿದರು. ನಂತರ ಅಡುಗೆ ಮನೆಗೆ ಧಾವಿಸಿದ ಅವರು ತವಾ ಮೇಲೆ ದೋಸೆ ಹಾಕಿದ್ದಾರೆ. ನಂತರ ಮಾತನಾಡಿದ ಅವರು ನಾನಿಲ್ಲಿ ಇಡ್ಲಿ ದೋಸೆ …
Read More »ನಾನು ಶೆಟ್ಟರ್ ರಂತೆ ಕಾಂಗ್ರೆಸ್ ಸೇರಿರಲಿಲ್ಲ : ಬಿಎಸ್ವೈ ಆಕ್ರೋಶ
ನಾನು ಶೆಟ್ಟರ್ ರಂತೆ ಕಾಂಗ್ರೆಸ್ ಸೇರಿರಲಿಲ್ಲ : ಬಿಎಸ್ವೈ ಆಕ್ರೋಶ ಯುವ ಭಾರತ ಸುದ್ದಿ ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ. ತಾನು ಬಿಜೆಪಿ ಜೊತೆಗಿನ ಮುನಿಸಿನಿಂದ ಕೆಜೆಪಿ ಕಟ್ಟಿದ್ದು ನನ್ನ ಜೀವನದ ಮಹಾ ಅಪರಾಧ. ನನ್ನ ಅಪರಾಧದಿಂದ 2013 ರಿಂದ 2018ರವರೆಗೆ ಕಾಂಗ್ರೆಸ್ ಆಡಳಿತ …
Read More »ಇಂದು ಅಥಣಿಗೆ ಬಿ.ಎಸ್. ಯಡಿಯೂರಪ್ಪ
ಇಂದು ಅಥಣಿಗೆ ಬಿ.ಎಸ್. ಯಡಿಯೂರಪ್ಪ ಯುವ ಭಾರತ ಸುದ್ದಿ ಅಥಣಿ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏ.26 ರಂದು ಪಟ್ಟಣಕ್ಕೆ ಆಗಮಿಸಿ ಅಥಣಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರ ಪರ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಕ್ಷೇತ್ರದ ಪ್ರಭಾರಿ ವಿಜಯಕುಮಾರ ಕೊಡಗನೂರ ತಿಳಿಸಿದರು. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 10.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ, 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ …
Read More »ನಮ್ಮ ಗುರಿ ಲಕ್ಷ ಮತಗಳ ಮುನ್ನಡೆ : ಬಾಲಚಂದ್ರ ಜಾರಕಿಹೊಳಿ
ನಮ್ಮ ಗುರಿ ಲಕ್ಷ ಮತಗಳ ಮುನ್ನಡೆ : ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಗೋಕಾಕ : ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ ಶೇ 75-80 ರಷ್ಟು ಮತಗಳು ಬಿಜೆಪಿಗೆ ಮತ ಚಲಾಯಿಸುವಂತೆ ಮಾಡಿದರೆ ಮಾತ್ರ ನಮ್ಮ ಗೆಲುವಿನ ಗುರಿಯನ್ನು ತಲುಪಬಹುದು. ಈ ನಿಟ್ಟಿನಲ್ಲಿ ಮತಗಟ್ಟೆಗಳ ಪ್ರಮುಖರು ಪ್ರತಿ ಮನೆ …
Read More »