56 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.!

ಗೋಕಾಕ: ರಾಜ್ಯ ಹಾಗೂ ಕೇಂದ್ರ ಸರಕಾರ ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸನ್2021-22ನೇ ಸಾಲಿನ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 56 ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಾಪೂರ ಪಿಜಿ ಗ್ರಾಮದ ಮುಖಂಡರುಗಳಾದ ಡಿ ಎಮ್ ದಳವಾಯಿ, ಪ್ರವೀಣ ಮಟಗಾರ, ನಾಗರಾಜ ಚಚಡಿ, ಮಲ್ಲಪ್ಪಾ ಕೋಳಿ, ಮಲ್ಲಪ್ಪ ತುಕ್ಕಾನಟ್ಟಿ, ಶೇಖರ ಕುಲಗೋಡ, ಮಾರುತಿ ಹುಕ್ಕೇರಿ, ಕೆ ಬಿ ಚೌಕಶಿ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಲಕ್ಷö್ಮಣ ಮೇತ್ರಿ, ವಿಕ್ರಮ ದಳವಾಯಿ, ಸುನೀಲ ನಾಯಿಕ, ಮುಖ್ಯಾಧಿಕಾರಿ ಕೆ ಬಿ ಪಾಟೀಲ ಸೇರಿದಂತೆ ಅನೇಕರು ಇದ್ದರು.
YuvaBharataha Latest Kannada News