ಅಂಕಲಗಿಗೆ ಕೀರ್ತಿ ತಂದ ಪೂಜಾ ದುಡಗುಂಟಿ

ಯುವ ಭಾರತ ಸುದ್ದಿ ಬೆಳಗಾವಿ:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92ರಷ್ಟು ಅಂಕ ಗಳಿಸುವ ಮೂಲಕ ಅಂಕಲಗಿ ಪಟ್ಟಣಕ್ಕೆ ಪೂಜಾ ಕೀರ್ತಿ ತಂದಿದ್ದಾಳೆ.
ಅಂಕಲಗಿಯ ವಿದ್ಯಾರಣ್ಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಕನ್ನಡ ಶಾಲೆಯ ವಿದ್ಯಾರ್ಥಿನಿ ಪೂಜಾ ರಾಜು ದುಡಗುಂಟಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 92 ಅಂಕ ಗಳಿಸಿ ಸಾಧನೆ ಮೆರೆದಿದ್ದಾಳೆ.
ಹಿರಿಯ ಕೆಎಎಸ್ ಅಧಿಕಾರಿಗಳಾದ ಅಶೋಕ ದುಡಗುಂಟಿ, ಪರಶುರಾಮ ದುಡಗುಂಟಿ, ಪಾಲಕರಾದ ರಾಜು ಮತ್ತು ಮಹಾದೇವಿ ದುಡಗುಂಟಿ, ವಿದ್ಯಾರಣ್ಯ ಶಾಲೆಯ ಆಡಳಿತ ಮಂಡಳಿ, ಮುಖ್ಯೋಧ್ಯಾಪಕರು, ಸಹಶಿಕ್ಷಕರು, ಸಹಪಾಠಿಗಳು ಹಾಗೂ ಗ್ರಾಮಸ್ಥರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
*ಕೀರ್ತಿ ತಂದ ಮೊಹಮ್ಮದ್:*
ಇದೇ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ದೇಸಾಯಿ ಶೇ.98ಅಂಕ ಗಳಿಸಿ ಶಾಲೆ ಮತ್ತು ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ.
YuvaBharataha Latest Kannada News