ರಸಪ್ರಶ್ನೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ 12 ರಂದು
ಯುವ ಭಾರತ ಸುದ್ದಿ ಗೋಕಾಕ :
ಮೂಡಲಗಿ ಮತ್ತು ಗೋಕಾಕ ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಗರದ ಕೆಎಲ್ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯ ವತಿಯಿಂದ ರಸಪ್ರಶ್ನೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಸ್ವರ್ಧೆಯನ್ನು ದಿನಾಂಕ ೧೨ ರಂದು ಮುಂಜಾನೆ ೧೦ ಘಂಟೆಗೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಜ್ಞಾನ ವಸ್ತು ಪ್ರದರ್ಶನ ಸ್ವರ್ಧೆಯು ಪರಿಸರ ಸಮಸ್ಯೆಗಳು ಹಾಗೂ ಪರ್ಯಾಯ ಶಕ್ತಿ ವಿಷಯವನ್ನು ಒಳಗೊಂಡಿದೆ. ಪ್ರತಿ ಪ್ರೌಢಶಾಲೆಯಿಂದ ೩ ವಿದ್ಯಾರ್ಥಿಗಳು ರಸಪ್ರಶ್ನೆ ಸ್ವರ್ಧೆಗೆ ಹಾಗೂ ೩ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನ ಸ್ವರ್ಧೆಗೆ ಮತ್ತು ಒಬ್ಬರು ಶಿಕ್ಷಕರು ಹೆಸರು ನೋಂದಾಯಿಸ ಬಹುದು ಗುರುತಿನ ಚಿಟಿ ಧೃಢೀಕರಣ ಪತ್ರ ಮತ್ತು ಶಾಲಾ ಸಮವಸ್ತ್ರ ಕಡ್ಡಾಯ ಪ್ರಯಾಣ ಭತ್ತೆ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ. ವಿಜೇತರಿಗೆ ಆಕರ್ಷಕ ಪದಕ, ಟ್ರೋಫಿ , ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಲಾಗುವುದು. ನೋಂದಣಿ ಶುಲ್ಕ ವಿರುವದಿಲ್ಲ ವಿದ್ಯಾರ್ಥಿಗಳು ದಿನಾಂಕ ೯ ಒಳಗೆ ಹೆಸರುಗಳನ್ನು ನೋಂದಾಯಿಸಬೇಕು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೮೦೫೦೯೫೨೦೭೮, ೯೧೬೪೧೯೦೨೦೨, ೯೯೬೪೯೧೩೫೩೦ ಗಳಿಗೆ ಸಂರ್ಪಕಿಸಲು ಪ್ರಾಚಾರ್ಯ ಕೆ.ಬಿ ಮೆವುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.