ಗಾನಕೋಗಿಲೆ ನಿಧನಕ್ಕೆ ರಮೇಶ ಜಾರಕಿಹೊಳಿ ಸಂತಾಪ .!
ಗೋಕಾಕ: ಭಾರತ ನೈಟಿಂಗೇಲ್ ಎಂದೇ ಹೆಸರುವಾಸಿಯಾಗಿರುವ ಲತಾ ಮಂಗೇಶ್ಕರ್ ಅವರು ಶಾಸಕೋಶ ತೊಂದರೆಯಿAದ ನಮ್ಮನ್ನು ಅಗಲಿದ್ದು, ಅವರ ಅಗಲುವಿಕೆ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಪ್ರಕಟÀನೆಯಲ್ಲಿ ತಿಳಿಸಿರುವ ಅವರು, ತಮ್ಮ ೧೩ನೇ ವಯಸ್ಸಿಗೆ ಹಾಡಲು ಪ್ರಾರಂಭಿಸಿದ ಲತಾ ಮಂಗೇಶ್ಕರ್ ಇದುವರೆಗೂ ಹಿಂದಿ ಭಾಷೆಯೊಂದರಲ್ಲೇ ೧೦೦೦ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ, ಭಾರತದ ೩೬ ವಿವಿಧ ಭಾಷೆಗಳಲ್ಲಿ ಇವರು ಹಾಡಿದ್ದಾರೆ. ಕನ್ನಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ‘ಬೆಳ್ಳನೆ ಬೆಳಗಾಯಿತು’ ಎಂಬ ಹಾಡನ್ನು ಹಾಡಿ ಸ್ಯಾಂಡಲ್‌ವುಡ್‌ಗೂ ಲತಾ ಪ್ರವೇಶ ಮಾಡಿದ್ದರು. ಇವರ ಗಾಯನಕ್ಕೆ ತಲೆದೂಗದವರೇ ಇಲ್ಲ.
ಮುಂಬರುವ ಪೀಳಿಗೆ ಅವರನ್ನು ಭಾರತೀಯ ಸಂಸ್ಕೃತಿಯ ನಿಷ್ಠಾವಂತೆ ಎಂದು ನೆನಪಿಸಿಕೊಳ್ಳುತ್ತವೆ, ಅವರ ಮಧುರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿತ್ತು’ ಎಂದು ಲತಾ ಮಂಗೇಶ್ವರ ನಿಧನಕ್ಕೆ ರಮೇಶ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.