Breaking News

ಸರಕಾರಿ ಶಾಲೆಯ ಮಕ್ಕಳು ಸಹ ಆಂಗ್ಲ ಭಾಷೆ ಕಲಿಯಬೇಕು- ರಮೇಶ ಜಾರಕಿಹೊಳಿ!

Spread the love

ಸರಕಾರಿ ಶಾಲೆಯ ಮಕ್ಕಳು ಸಹ ಆಂಗ್ಲ ಭಾಷೆ ಕಲಿಯಬೇಕು- ರಮೇಶ ಜಾರಕಿಹೊಳಿ!

ಗೋಕಾಕ: ಗೋಕಾಕ ಶೈಕ್ಷಣಿಕ ವಲಯದ ಮಕ್ಕಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಹೆಚ್ಚೆಚ್ಚು ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಕ್ಷೇತ್ರದಲ್ಲಿ ತೆರೆಯುವ ಮೂಲಕ ಯಶಸ್ವಿಯಾಗಿರುವ ಶಾಸಕ ರಮೇಶ ಜಾರಕಿಹೊಳಿ ಮತ್ತೊಮ್ಮೆ ಸರಕಾರದಿಂದ ಗೋಕಾಕ ಮತಕ್ಷೇತ್ರಕ್ಕೆ ಐದು ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತಂದಿದ್ದಾರೆ.
ಸರಕಾರಿ ಶಾಲೆಯ ಮಕ್ಕಳು ಸಹ ಆಂಗ್ಲ ಭಾಷೆ ಕಲಿಯಬೇಕು ಎಂಬ ಸದುದ್ಧೇಶದಿಂದ ಸರಕಾರ ಬಡ ಮಕ್ಕಳಿಗೂ ಸಹ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮದ ಜೊತೆ ಜೊತೆಗೆ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುತ್ತ ಬಂದಿದ್ದು, ಈ ಹಿಂದೆ ಶಾಸಕ ರಮೇಶ ಜಾರಕಿಹೊಳಿ ೫ಕ್ಕೂ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದ್ದರು. ಈ ಬಾರಿ ಮತ್ತೆ ಗೋಕಾಕ ಶೈಕ್ಷಣಿಕ ವಲಯಕ್ಕೆ ಐದು ಆಂಗ್ಲ ಮಾಧ್ಯಮ ಶಾಲೆಗಳು ತೆರೆಯಲಿವೆ.

ಶಾಸಕ ರಮೇಶ ಜಾರಕಿಹೊಳಿ.
ಆಂಗ್ಲ ಮಾಧ್ಯಮ ಶಾಲೆಗಳಿಗೆ ದುಬಾರಿ ಶುಲ್ಕ, ಡೊನೇಷನ್ ತೆರಲಾಗದೇ ಅನೇಕ ಬಡ ಮಕ್ಕಳು ಸರಕಾರಿ ಕನ್ನಡ ಶಾಲೆಗಳ ಮೊರೆ ಹೋಗುತ್ತಿದ್ದರು. ಕ್ಷೇತ್ರದ ಬಡ ಮಕ್ಕಳು ಆಂಗ್ಲಭಾಷೆಯಲ್ಲಿ ವಿದ್ಯಾಭ್ಯಾಸವನ್ನು ಮಾಡುವ ಮಹದಾಸೆ ಹೊಂದಿರುವ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಸತತ ಪ್ರಯತ್ನದಿಂದ ಗೋಕಾಕ ಶೈಕ್ಷಣಿಕ ವಲಯದ ಉಪ್ಪಾರಹಟ್ಟಿ, ಮಾಲದಿನ್ನಿ, ಮೇಲ್ಮಟ್ಟಿ, ನಂದಗಾAವ, ಶಿವಾಪೂರ ಗ್ರಾಮಗಳಲ್ಲಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದು ಆರ್ಥಿಕ ಪರಿಸ್ಥಿತಿಯಿಂದ ತಮ್ಮ ಕನಸು ಕೈಬಿಡದಂತಾಗಬಾರದು ಎಂದು ಐದು ಆಂಗ್ಲ ಮಾಧ್ಯಮ ಶಾಲೆಗಳನ್ನು ಸರಕಾರದಿಂದ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಮಕ್ಕಳು ಪಡೆಯಬಹುದಾಗಿದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗದAತೆ ಶಾಸಕರು ಸರಕಾರಿ ಶಾಲೆಗಳ ದಾಖಲಾತಿ ಹೆಚ್ಚಳ ಮಾಡಲು ಹೆಚ್ಚೆಚ್ಚಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತರುವದರೊಂದಿಗೆ ಗೋಕಾಕ ಶೈಕ್ಷಣಿಕ ವಲಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದರೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಶಿಕ್ಷಣ ಇಲಾಖೆ ಅಭಿನಂಧಿಸಿದೆ.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

eight − 8 =