ರಮೇಶ್ ಜಾರಕಿಹೊಳಿ ಶಾಕ್; ಸಿಎಂಗೆ ಸ್ಪಷ್ಟನೆ- ದಿಲ್ಲಿಗೆ ಸಾಹುಕಾರ್ !!
ಯುವ ಭಾರತ ಸುದ್ದಿ, ಬೆಂಗಳೂರು: ತಮ್ಮ ವಿರುದ್ಧದ ಅಶ್ಲೀಲ ಸಿಡಿ ಆರೋಪಕ್ಕೆ ಪ್ರತಿಯಾಗಿ ಮಾಧ್ಯಮದ ಎದುರು ಹಾಜರಾದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ತಾವು ಯಾವುದೇ ತಪ್ಪು ಮಾಡಿಲ್ಲ, ನನ್ನ ತಪ್ಪಿದ್ದರೆ ಫಾಸಿ ಕೊಡಿ ಎಂದು ಸ್ಪಷ್ಟನೆ ನೀಡಿದರು.
ಸಿಡಿಯಲ್ಲಿ ತೋರಿಸಿರುವ ಯುವತಿ ಯಾರೆಂದು ತಮಗೆ ಗೊತ್ತಿಲ್ಲ ಎಂದು ಹೇಳಿದ ಸಚಿವರು, ‘ನಾನು ಧಾರ್ಮಿಕ ವ್ಯಕ್ತಿ ದೇವರಲ್ಲಿ ನಂಬಿಕೆ ಉಳ್ಳವನು, ನಾನು ಯಾವುದೇ ತಪ್ಪು ಮಾಡಿಲ್ಲ. ಈ ವಿಡೀಯೋ ಬಗ್ಗೆ ತಿಳಿದು ಶಾಕ್ ಆಗಿದ್ದೇನೆ, ಜಾರಕಿಹೊಳಿ ಕುಟುಂಬಕ್ಕೆ ಒಂದು ಗೌರವವಿದೆ, ನನಗೆ ಅದಕ್ಕಾಗಿ ಶಾಕ್ ಆಗಿದೆ’ ಎಂದು ಸಚಿವರು ನುಡಿದರು.
ಈ ವಿಡಿಯೋ ನಕಲಿ ವಿಡಿಯೋ ಇದನ್ನು ಎಡಿಟ್ ಮಾಡಲಾಗಿದೆ, ಈ ಬಗ್ಗೆ ಸಮಗ್ರ ತನಿಖೆ ಆಗಲಿ, ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ, ತಪ್ಪು ಮಾಡಿದ್ದರೆ ಫಾಸಿ ಕೊಡಿ, ಹೆದರುವುದಿಲ್ಲ’ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.
ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ, ಇಲ್ಲಿಯವರೆಗೆ ಇಂತಹ ಆರೋಪಗಳಿಲ್ಲ, ಇದೀಗ ದಿಢೀರಾಗಿ ಬಂದಿದೆ ಎಂದರೆ ಅದರರ್ಥವೇನು? ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಿಎA ಬಿಎಸ್‌ವೈ ಭೇಟಿ: ತಮ್ಮ ವಿರುದ್ಧದ ಸೆಕ್ಸ್ ಸಿಡಿ ಆರೋಪಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತೆರಳುತ್ತಿರುವುದಾಗಿ ವರದಿಯಾಗಿದೆ.
ಸಿಡಿ ಬಿಡುಗಡೆ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆ ಬಗ್ಗೆ ವಿರೋಧ ಪಕ್ಷಗಳಿಂದ ಹೆಚ್ಚುತ್ತಿರುವ ಒತ್ತಡಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.
ಮAಗಳವಾರ ತಡ ರಾತ್ರಿಯೇ ಸಿಎಂ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಲು ಜಲ ಸಂಪನ್ಮೂಲ ಸಚಿವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದಿಲ್ಲಿಯತ್ತ ಪ್ರಯಾಣ: ಇದೇ 4ರಿಂದ ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಇದೇ ಕಾಲಕ್ಕೆ ರಾಷ್ಟçದಲ್ಲಿ ನಾಲ್ಕು ರಾಜ್ಯಗಳಿಗೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಶ್ಲೀಲ ಸಿಡಿ ಬಹಿರಂಗಗೊAಡಿರುವ ಬಗ್ಗೆ ಬಿಜೆಪಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸದಿರಲು ಮತ್ತು ಈ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟನೆ ನೀಡುವ ಉದ್ದೇಶದಿಂದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ತಡ ರಾತ್ರಿ ದಿಲ್ಲಿಗೆ ತೆರಳಲು ಉದ್ದೇಶಿಸಿರುವುದಾಗಿ ಪ್ರಕಟಿಸಿದ್ದಾರೆ.