Breaking News

ಗೋಕಾಕ್  ಸಾಹುಕಾರ್ ವಿರುದ್ಧ.. ರಾಜಕೀಯ ಹುನ್ನಾರ.!  

Spread the love

 ಗೋಕಾಕ್  ಸಾಹುಕಾರ್ ವಿರುದ್ಧ.. ರಾಜಕೀಯ ಹುನ್ನಾರ.!

ಯುವ ಭಾರತ ಸುದ್ದಿ,  ಗೋಕಾಕ್: ರಾಜಕೀಯವಾಗಿ ರಮೇಶ ಜಾರಕಿಹೊಳಿ ಉತ್ತರ ಕರ್ನಾಟಕದ ಭಾಗದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆಯುತ್ತಿದ್ದಾರೆ. ಅವರ ವರ್ಚಸ್ಸಿಗೆ ನೇರವಾಗಿ ಧಕ್ಕೆ ಮಾಡಲು ಆಗದವರು ಇಂತಹ ಹೀನ ಕೃತ್ಯ ಮಾಡಿದಾರೆ ಎಂದು ಗೋಕಾಕ ಮತಕ್ಷೇತ್ರದ ಜನರು ಹೇಳುತಿದ್ದಾರೆ. ಯಾವುದೋ ಹಳೆಯ ವಿಡಿಯೋ ಈಗ ಬಹಿರಂಗ ಪಡಿಸುವ ಅವಶ್ಯಕತೆ ಏನಿತ್ತು..? ಇಬ್ಬರ ನಡುವೆ ಸ್ವ ಒಪ್ಪಿಗೆಯಿಂದ ದೈಹಿಕ ಸಂಪರ್ಕವಾಗಿದೆಯಾ ಅಥವಾ ಬ್ಲಾಕ್ಮೇಲ್ ಮಾಡಿನಾ.? ಒಂದು ವೇಳೆ ಬ್ಲಾಕ್ಮೇಲ್ ಆಗಿದ್ದರ ಇಷ್ಟು ವರ್ಷ ಬಿಟ್ಟು ಲೀಕ್ ಮಾಡುವ ಅವಶ್ಯಕತೆ ಏನಿತ್ತು? ಮೇಲ್ನೋಟಕ್ಕೆ ಗಮಿಸಿದರೆ ಇದೆಲ್ಲಾ ರಾಜಕೀಯ ಷಡ್ಯಂತ್ರ ಎಂಬುದು ಗೋಚರಿಸುತ್ತಿದೆ. ವಿಡಿಯೋದಲ್ಲಿರುವ ಹುಡುಗಿ ಕಂಪ್ಲೇAಟ್ ಕೊಟ್ಟಿಲ್ಲಾ. ಸರಕಾರಿ ನೌಕರಿ ಕೊಡಿಸುವದಾಗಿ ವಂಚಿಸಿರುವದಾಗಿ ಟಿವಿ ಚಾನೇಲಗಳು ಹೇಳುತ್ತಿವೆ. ಯಾವುದರ ಆಧಾರದ ಮೇಲೆ ತಿಳಿಯದು. ಗೋಕಾಕ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಮೇಶ ಜಾರಕಿಹೊಳಿ ಅವರ ಮೇಲೆ ರಾಜಕೀಯ ವ್ಯೂಹ ರಚನೆಯಾಗಿದೆ. ಹಿಂದೆ ಚುನಾವಣೆಗೂ ಮೊದಲು ಆಡಿಯೋ ಹರಿದಾಡಿತ್ತು. ಅದರ ಮೂಲಕ ಇಮೇಜ್ ಕರಾಬ್ ಮಾಡುವ ಹುನ್ನಾರ ಮಾಡಿ ವಿಫಲರಾಗಿ ಈಗ ಹೊಸನಾಟಕ ಶುರು ಮಾಡಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿ ಶಾಸಕರ ವಿರುದ್ಧ ಹುನ್ನಾರ ಮಾಡಿದವರ ವಿರುದ್ಧ ಕಠೀಣ ಕ್ರಮ ತೆಗೆದುಕೊಳ್ಳಬೇಕು ಎಂದು ಕ್ಷೇತ್ರದ ಜನತೆ ಗಿಗ

ಸ್ಪಷ್ಟೀಕರಣ

ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಸುದ್ದಿಯನ್ನು ನೋಡಿದ್ದೇನೆ. ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಇದು ಒಂದು ರಾಜಕೀಯ ಷಡ್ಯಂತ್ರದ ಭಾಗ. ನಾನೇ ನೇರವಾಗಿ ಮಾಧ್ಯಮಗಳ ಮುಂದೆ ಬಂದು ಎಲ್ಲಾ ಸಂದೇಹಗಳಿಗೂ ಉತ್ತರಿಸಲಿದ್ದೇನೆ. ಸಂತ್ರಸ್ತೆ ಅನ್ನುವವರು ದೂರು ಕೊಡದೇ ಯಾರೋ ಮೂರನೇ ವ್ಯಕ್ತಿ ದೂರು ನೀಡಿರುವುದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿಯೇ ಆಗಿದೆ. ದಯವಿಟ್ಟು ಮಾಧ್ಯಮಗಳ ಸನ್ಮಿತ್ರರು ಸಹಕರಿಸಿ.
ರಮೇಶ್ ಜಾರಕಿಹೊಳಿ‌, ಜಲಸಂಪನ್ಮೂಲ ಸಚಿವರು

 


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

2 × one =