Breaking News

ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ರೂಪಿಸಿ ರಾಜಕೀಯವಾಗಿ ಮುಗಿಸಲು ಯತ್ನ.!

Spread the love


ಗೋಕಾಕ: ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ರೂಪಿಸಿ, ಅವರಿಗೆ ಹಾಗೂ ಮನೆತನಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ಸಚಿವರು ನೀಡಿರುವ ರಾಜೀನಾಮೆಯನ್ನು ಸಿಎಂ ಬಿ.ಎಸ್.ಬಿಎಸ್‌ವೈ ಹಾಗೂ ರಾಜ್ಯಪಾಲರು ಅಂಗೀಕರಿಸಬಾರದು ಎಂದು ಆಗ್ರಹಿಸಿ ರಮೇಶ ಜಾರಕಿಹೊಳಿ ಬೆಂಬಲಿಗರು ಇಂದು ಪ್ರತಿಭಟನೆ ನಡೆಸಿ, ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿತು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನೂರಾರು ಜನ ಬೆಂಬಲಿಗರು ಟೈರ್ ಗೆ ಬೆಂಕಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ರಮೇಶ್ ಜಾರಕಿಹೊಳಿ ಪರ ಘೋಷಣೆ ಕೂಗಿ, ರಾಜೀನಾಮೆಯನ್ನು ಸಿಎಂ ಅಂಗೀಕರಿಸ ಬಾರದು ಎಂದು ಆಗ್ರಹಿಸಿದರು. ಗೋಕಾಕ ನಗರ ಹಾಗೂ ತಾಲೂಕಿನ ಕೆಲವು ಪಟ್ಟಣಗಳು ಸ್ವಯಂ ಘೋಷಿತವಾಗಿ ಬಂದ್ ಮಾಡಲಾಯಿತು.
ರಮೇಶ್ ಜಾರಕಿಹೋಳಿ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ನಕಲಿ ಸಿಡಿ ತಯಾರಿಸಿ ರಾಜಕೀಯವಾಗಿ ಮುಗಿಸುವ ಯತ್ನ ನಡೆದಿದೆ. ನಕಲಿ ಸಿಡಿ ಕುರಿತು ಸಿಬಿಐ, ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿದರು. ತನಿಖೆಯ ನಂತರ ರಾಜೀನಾಮೆ ನೀಡಿ, ಈಗಬೇಡ. ಸಚಿವ ರಮೇಶ್ ಜಾರಕಿಹೊಳಿ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಸಿಎಂ ಅವರು ಸಹ ರಾಜೀನಾಮೆ ಅಂಗೀಕರಿಸಬಾರದು. ಒಂದು ವೇಳೆ ರಾಜೀನಾಮೆಯನ್ನು ಸಿಎಂ ಅವರು ಅಂಗೀಕರಿಸಿದರೆ ಉಗ್ರಹೋರಾಟ ಎಚ್ಚರಿಕೆ ನೀಡಿದರು.
ರಮೇಶ್ ಬೆಂಬೆಲಿಗರ ಆತ್ಮಹತ್ಯೆ ಯತ್ನ: ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ಸೀಮೆ ಎಣ್ಣೆಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನಾಲ್ವರು ಬೆಂಬಲಿಗರು ರಮೇಶ ಜಾರಕಿಹೊಳಿ ಅವರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ನಾವು ಸಹಿಸುವದಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದರು. ಆತ್ಮ ಹತ್ಯೆಗೆ ಯತ್ನಿಸಿದ ನಾಗರಾಜ ಸಂಗೋಡಿ, ಅಜರ್ ಮುಜಾವರ, ಬೀರಪ್ಪ ಮೈಲನ್ನವರ, ರವೀಂದ್ರ ಎಕ್ಕೇರಿಮಠ ಅವರನ್ನು ಸ್ಥಳೀಯ ಪೋಲಿಸರು ತಡೆದು ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.
ಸಚಿವರ ನಿವಾಸದ ಮುಂದೆ ಬೆಂಬಲಿಗರ ದಂಡು: ರಮೇಶ ಜಾರಕಿಹೊಳಿ ಅವರು ರಾಜಿನಾಮೆ ನೀಡುತ್ತಿದ್ದಂತೆ ಬೆಂಬಲಕ್ಕೆ ನಿಂತ ಗೋಕಾಕ್ ಬಿಜೆಪಿ ನಾಯಕರು, ಅಭಿಮಾನಿಗಳು ನಗರದ ರಮೇಶ್ ಜಾರಕಿಹೋಳಿ ನಿವಾಸದ ಮುಂದೆ ಜಮಾಯಿಸಿ, ಅಲ್ಲಿಂದ ಪ್ರತಿಭಟನಾ ಮೇರವಣಿಗೆ ಮೂಲಕ ನಗರದ ಬಸವೇಶ್ವರ ವೃತ್ತ, ಲಕ್ಷಿö್ಮÃ ಚಿತ್ರ ಮಂದಿರ, ಭಾಫನಾ ಚೌಕ್, ಶೇಠಜಿ ಕೂಟ ಮಾರ್ಗವಾಗಿ ತರಕಾರಿ ಮಾರುಕಟ್ಟೆ, ಬಸ್ಸು ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದೂದ್ದಕ್ಕೂ ಪ್ರತಿಭಟನಾ ಮೇರವಣಿಗೆ ನಡೆಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ: ರಾಜಿನಾಮೆ ವಿಚಾರ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದ ಪೋಲಿಸ್ ಅಧಿಕಾರಿ ಸೂಕ್ತ ಬಂದು ಬಸ್ತ ಕಲ್ಪಿಸಿದ್ದು, ಪೋಲಿಸ್ ವಾಹನಕ್ಕೆ ಅಡ್ಡಗಟ್ಟಿದ ಪ್ರತಿಭಟನಾಕಾರರು. ಜನರನ್ನು ಮನವೊಲಿಸಲು ಪೋಲಿಸರ ಹರಸಾಹಸ ಪಟ್ಟರು. ಸ್ಥಳಕ್ಕೆ ದೌಢಾಯಿಸಿದ ಹೆಚ್ಚುವರಿ ಎಸ್‌ಪಿ ಅಮರನಾಥ ರೆಡ್ಡಿ ಪ್ರತಿಭಟನೆ ಉಗ್ರರೂಪ ಪಡೆಯದಂತೆ ತಡೆದರು. ಪ್ರತಿಭಟನಾ ನಿರತ ಕೆಲವು ಬೆಂಬಲಿಗರನ್ನು ಪೋಲಿಸರು ವಶಕ್ಕೆಪಡೆದ ಘಟನೆಯು ನಡೆಯಿತು.


ಸ್ವಯಂ ಘೋಷಿತ ಬಂದ್: ಸಚಿವರ ರಾಜಿನಾಮೆ ವಿಚಾರ ಹೊರ ಬಿಳುತ್ತಿದ್ದಂತೆ ವ್ಯಾಪಾರಸ್ಥರು ಪ್ರತಿಭಟನೆಯ ತೀವೃತೆ ಅರಿತು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ರಮೇಶ ಬೆಂಬಲಿಗರು ಬಂದ್‌ಗೆ ಸಹಕರಿಸಿ ಅಂತ ಮನವಿ ಮಾಡಿದರು. ನಗರದಲ್ಲಿ ಮುಂಜಾಗೃತ ಕ್ರಮವಾಗಿ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಮುಂಜಾಗೃತ ಕ್ರಮವಾಗಿ ಬಸ್ಸು ಸಂಚಾರ ಸ್ಥಗಿತದಿಂದ ಪ್ರಾಯಾಣಿಕರ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಕಟೌಟ್‌ಗೆ ಹಾಲಿನ ಅಭಿಷೇಕ: ರಮೇಶ ಜಾರಕಿಹೊಳಿ ಅಭಿಮಾನಿಗಳು ವಿರೋಧಿಗಳು ಎಷ್ಟೇ ಷಡ್ಯಂತ್ರ ರೂಪಿಸಿದರು ತಮ್ಮ ಪರವಾಗಿ ನಾವಿದ್ದೆವೆ ಎಂದು ಘೋಷಣೆಗಳನ್ನು ಕೂಗತ್ತ ನಗರದಲ್ಲಿ ಅಳವಡಿಸಿದ ರಮೇಶ ಜಾರಕಿಹೊಳಿ ಅವರ ಕಟೌಗೆ ಹಾಲಿನ ಅಭಿಷೇಕ ಮಾಡಿ, ರಮೇಶ ಜಾರಕಿಹೊಳಿಗೆ ಜೈಕಾರ ಕೂಗಿದರು.
ಗ್ರಾಮೀಣ ಭಾಗದಲ್ಲೂ ಹೋರಾಟ: ಗೋಕಾಕ್ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದ ರಮೇಶ್ ಜಾರಕಿಹೋಳಿ ಬೆಂಬಲಿಗರ ಹೋರಾಟ ಗೋಕಾಕ್ ಪಾಲ್ಸ್, ಕೊಣ್ಣೂರ, ಮಮದಾರ, ಪಾರನಟ್ಟಿ ಕ್ರಾಸ್ ನಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ರಮೇಶ್ ಜಾರಕಿಹೋಳಿ ರಾಜೀನಾಮೆ ವಿರೋಧಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ಹೋರಹಾಕಿದರು.
ಗೋಕಾಕ್ ಮಿಲ್ಸ್ ಸ್ವಯಂ ಘೋಷಿತ ಬಂದ್: ಮಿಲ್‌ನ ಕಾರ್ಮಿಕರು ಮದ್ಯಾಹ್ನದ ನಂತರ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದರು. ರಮೇಶ್ ಜಾರಕಿಹೋಳಿ ಮಿಲ್ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾದ ಹಿನ್ನಲೆ ಬೆಂಬಲ ಸೂಚಿಸಿ ಪ್ರತಿಭಟಿಸಿದರು.
ನಾಲ್ಕೈದು ಬಸ್‌ಗಳ ಮೇಲೆ ಕಲ್ಲು ತೂರಾಟ: ಪ್ರತಿಭಟನೆ ತಾರಕಕ್ಕೇರುತ್ತಿದ್ದಂತೆ ಗೋಕಾಕನ ನಾಕಾ ನಂ೧, ಮಾಲದಿನ್ನಿ ಕ್ರಾಸ್ ಹಾಗೂ ಗೋಕಾಕ್ ನಗರದ ಬಸ್‌ನಿಲ್ದಾಣದಲ್ಲಿ ಕಲ್ಲು ತೂರಾಟ ಸಹ ನಡೆದಿದೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ರಮೇಶ ಜಾರಕಿಹೊಳಿ ಅವರು ದೂರವಾಣಿಯ ಮುಖಾಂತರ ಬೆಂಬಲಿಗರೆ ಪ್ರತಿಭಟನೆ ನಿಲ್ಲಿಸುವಂತೆ ಕರೆ ನೀಡುತ್ತಿದ್ದಂತೆ ವಾತಾವರಣ ತಿಳಿಯಾಗಿದ್ದು, ನಾಳೆಗೆ ಮುಂದುವರೆಸಲಿದ್ದ ಗೋಕಾಕ ಬಂದ್‌ನ್ನು ಮೊಟಕುಗೊಳಿಸಲಾಗಿದೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

16 + nine =