ಸದ್ವಿನ್ ಇಟ್ನಾಳ ಹುಟ್ಟುಹಬ್ಬದ ನಿಮಿತ್ಯ ಕಾರ್ಮಿಕ ಸುರಕ್ಷಾ ಕೀಟ್ ವಿತರಣೆ.!

ಯುವ ಭಾರತ ಸುದ್ದಿ ಗೋಕಾಕ: ಸ್ಥಳೀಯ ಸದ್ವಿನ್ ಕನ್ಸಟ್ರಕ್ಷನ್ ಇಂಜಿನಿಯರ ಕಿರಣ ಇಟ್ನಾಳ ಅವರು ತಮ್ಮ ಪುತ್ರನ ೬ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ನಿಮಿತ್ಯ ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕೀಟಗಳನ್ನು ನೀಡುವ ಮೂಲಕ ವಿನೂತನವಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಸದ್ವಿನ್ ಕನ್ಸಟ್ರಕ್ಷನ್ ಇಂಜಿನಿಯರ ಕಿರಣ ಇಟ್ನಾಳ ಪುತ್ರ ಸದ್ವಿನ್ ಹುಟ್ಟುಹಬ್ಬದ ನಿಮಿತ್ಯ ಸುಮಾರು ೫೦ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಹೆಲ್ಮೇಟ್, ಶೂ, ಹ್ಯಾಂಡ್ಬ್ಲೌಸ್ ಸೇರಿದಂತೆ ಸುರಕ್ಷಾ ಕೀಟಗಳನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತ್ರತ್ವದಲ್ಲಿ ವಿತರಿಸಿದರು.

ಸದ್ವಿನ್ ಕನ್ಸಟ್ರಕ್ಷನ್ ಇಂಜಿನಿಯರ ಕಿರಣ ಇಟ್ನಾಳ ಅವರ ಕಾರ್ಯವನ್ನು ಶ್ರೀಗಳು ಮುಕ್ತ ಕಂಠದಿoದ ಶ್ಲಾಘಿಸಿದರು.

ಈ ಸಂಧರ್ಭದಲ್ಲಿ ಡಾ. ರಮೇಶ ಪಟಗುಂದಿ, ಡಾ. ಜಗದೀಶ ಉಮರಾಣಿ, ವಿನೋದ ಪಾಟೀಲ, ಇಂಜನಿಯರ ವಿಠ್ಠಲ ಮಾಲದಾರ, ಕೃಷ್ಣಾ ಕುರುಬಗಟ್ಟಿ, ಮಹಾಂತೇಶ ವಾಲಿ, ಶೇಖರ್ ಕಡಿ, ಎಸ್ ಡಿ ಉಜ್ಜನಕೊಪ್ಪ, ಪ್ರಶಾಂತ ಕುರಬೇಟ ಸೇರಿದಂತೆ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.
YuvaBharataha Latest Kannada News