ಮುಸ್ಲಿಂ ಸಮುದಾಯದ ಜನರು ಶೈಕ್ಷಣಿಕವಾಗಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು.- ಸತೀಶ್ ಜಾರಕಿಹೊಳಿ.!
ಗೋಕಾಕ: ಹಿಂದುಳಿದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಬಹುಮುಖ್ಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಅವರು, ಬುಧವಾರದಂದು ಸಾಯಂಕಾಲ ನಗರದ ಕೆಜಿಎನ್ ಸಭಾಂಗಣದಲ್ಲಿ ಇಲ್ಲಿನ ಜಮಿಯತ ಎ ಉಲಮಾ ಹಿಂದ್ ಸಂಘಟನೆ ವತಿಯಿಂದ ಹಮ್ಮಿಕೊಂಡ ಶೈಕ್ಷಣಿಕ ಜಾಗೃತಿ ಮತ್ತು ತರಬೇತಿ ಶಿಬಿರದಲ್ಲಿ ಮುಖ್ಯ ಅತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮುಸ್ಲಿಂ ಸಮುದಾಯದ ಜನರು ಶೈಕ್ಷಣಿಕವಾಗಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು. ಈ ಸಮುದಾಯದಲ್ಲಿಯೂ ಸಹ ಪ್ರತಿ ವರ್ಷ ಒಳ್ಳೆಯ ಶಿಕ್ಷಣ ಪಡೆದು ಹಲವಾರು ವೈದ್ಯರು, ಇಂಜಿನಿಯರಗಳು ಬಹುಮುಖ್ಯವಾಗಿ ವಕೀಲರಾಗಿ ಹೊರಹೊಮ್ಮಬೇಕು. ಆ ದಿಸೆಯಲ್ಲಿ ಎಲ್ಲರೂ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಬ್ಯಾಸವನ್ನು ಕೊಡಿಸಬೇಕು. ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ನಾವು ಕೂಡಾ ಹಲವು ಸ್ಥರಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಮುಂಬರುವ ದಿನಗಳಲ್ಲಿ ಮುಸ್ಲಿಂ ಸಮುದಾಯ ಜನರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಕಾರ್ಯಕ್ರಮವನ್ನು ಪುನಾದ ಮೌಲಾನ ಅಬ್ಬರ ರಶೀದ್ ಮುಫ್ತಾಹಿ ಉದ್ಘಾಟಿಸಿ, ಮಾತನಾಡಿ, ಮಾನವ ಮಾನವೀಯ ಮೌಲ್ಯಗಳಿಂದ ತಮ್ಮ ಜೀವನ ಸುಂದರ ಗೋಳಿಸಿಕೊಳ್ಳ ಬಹುದು, ಮನುಷ್ಯ ಮನುಷ್ಯನನ್ನು ಪ್ರೀತಿಸುವ ದಿನ ಬಂದಾಗ ಮಾತ್ರ ನಾವು ಭವ್ಯ ಭಾರತವನ್ನು ಕಟ್ಟಬಹುದು. ಆ ದಿಸೆಯಲ್ಲಿ ನಾವೆಲ್ಲರೂ ಒಬ್ಫರನ್ನು ಒಬ್ಬರು ಪ್ರೀತಿಸುವ ಮತ್ತು ಕ್ಷಮಿಸುವ ಮನೋಭಾವವನ್ನು ಹೊಂದಬೇಕು ಎಂದರು.
ಜಗತ್ತಿನಲ್ಲಿ ಹುಟ್ಟಿದ ಅನೇಕ ಮಹಾತ್ಮರು ಯಾರಿಗೂ ಹಿಂಸೆ ಮಾಡದೆ ಮಾನವ ಧರ್ಮವನ್ನು ಪ್ರೀತಿಸುವ ಸಂದೇಶವನ್ನು ನೀಡಿದ್ದಾರೆ. ಆದರೆ ಮುಸ್ಲಿಂ ಸಮುದಾಯದವನ್ನು ಇಂದು ಸಂಶಯಾಸ್ಪದವಾಗಿ ನೋಡುತ್ತಿರುವದು ತುಂಬಾ ನೋವನ್ನುಂಟು ಮಾಡಿದೆ. ಆ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಜನರು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬಂದು ಭವ್ಯ ಭಾರತವನ್ನು ಕಟ್ಟುಲು ಮುಂದಾಗಿ ಜಗತ್ತಿನಲ್ಲಿ ಎಲ್ಲಾ ಧರ್ಮಿಯ ಜನರನ್ನು ಪ್ರೀತಿಸುವ ಧರ್ಮ ಇಸ್ಲಾಂ ಧರ್ಮ ಎಂದು ಮನದಟ್ಟು ಮಾಡಬೇಕಾಗಿದೆ.
ಈ ಸಂದರ್ಭದಲ್ಲಿ ಜಮಿಯತ ಎ ಉಲಮಾ ಹಿಂದ್‌ನ ಮುಫ್ತಿ ಖ್ವಾಜಾ ಅಬ್ದುಲ್ ಮತೀನ ಇನಾಮಿ, ಮೌಲಾನ ಮಹ್ಮದ್ ಅಸೀಫ್ ಇನಾಮಿ, ಮೌಲಾನ ಖಾರಿ ಜಬೀವುಲ್ಲಾ, ಮೌಲಾನ ಅಜೀಜ್ ಇನಾಮಿ, ಮೌಲಾನ ಮಾವೀಯಾ, ಮೌಲಾನ ಮಹೆಬೂಬ ಸುಳೇಬಾವಿ, ಹಾಪೀಜ್ ಗೌಸ, ಮುಖಂಡರುಗಳಾದ ಎಚ್.ಡಿ.ಮುಲ್ಲಾ, ಅಬ್ದುಲ್ ಖೈರದಿ, ಅಬ್ದುಲ್ ಹಮೀದ್ ನೇರ್ಲಿ, ಇರ್ಶಾದ್ ಪಟೇಲ, ಜುಬೇರ ದೇವಡಿ, ಅಜೀಮ್ ಬಾಳೆಕುಂದ್ರಿ, ಸದಾಕತ ಅಲಿ ಮಕಾನದಾರ, ಶಪೀ ದೇವಡಿ, ತೌಪೀಕ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.