ಸಾವಳಗಿ: ಫೆ. 18 ರಂದು ಮಹಾಶಿವರಾತ್ರಿ ಆಚರಣೆ
ಯುವ ಭಾರತ ಸುದ್ದಿ ಗೋಕಾಕ:
ತಾಲ್ಲೂಕಿನ ಸಾವಳಗಿ ಸಿದ್ದ ಸಂಸ್ಥಾನ ಪೀಠದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯವರ ಸಾನ್ನಿಧ್ಯದಲ್ಲಿ ಫೆ. 18 ರಿಂದ ಫೆ.20 ರ ವರೆಗೆ ಮಹಾಶಿವರಾತ್ರಿ ಕಾರ್ಯಕ್ರಮಗಳು ಜರುಗಲಿವೆ.
ಫೆ. 18 ರಂದು ರಾತ್ರಿ 8 ಗಂಟೆಗೆ ಜಗದ್ಗುರುಗಳ ಸನ್ನಿಧಿಯಲ್ಲಿ ಶಿವರಾತ್ರಿಯ ಮಹಿಮೆ ಕುರಿತು ಪ್ರವಚನ ಹಾಗು ಸಂಗೀತ ಸುಧೆ ಅಹೋರಾತ್ರಿ ಜರುಗುವುದು.
ಹಾವೇರಿ ಜಿಲ್ಲೆಯ ಹಾಲಗಿಮರೋಳಾದ ವೇದಮೂರ್ತಿ ಸದಾಶಿವ ಶಾಸ್ತ್ರಿ ಪ್ರವಚನ ನೀಡುವರು.
ರಾಜ್ಯೋತ್ಸವ ಪುರಸ್ಕೃತ ಗಾನಭೂಷಣ ಗದಗದ ವೀರೇಶ ಕಿತ್ತೂರ ಅವರಿಂದ ಸಂಗೀತ ಕಾರ್ಯಕ್ರಮ ಇರುವುದು. ಬೆಂಗಳೂರಿನ ನಾಗಲಿಂಗಯ್ಯಸ್ವಾಮಿ ವಸ್ತ್ರದಮಠ ಅವರ ಹಾರ್ಮೋನಿಯಂ ವಾದನ ಹಾಗೂ ಗೋಕಾಕದ ವಿಜಯ ದೊಡ್ಡಣ್ಣವರ ಅವರ ತಬಲಾ ವಾದನ ಇರುವುದು.
ಶಿವರಾತ್ರಿ ದಿನ ಫೆ. 18 ರಂದು ಮಧ್ಯಾಹ್ನ 3 ರಿಂದ ಸಂಜೆ 7 ರ ವರೆಗೆ ಶ್ರೀಪೀಠದಿಂದ ಸದ್ಭಕ್ತರಿಗೆ ಶಿವರಾತ್ರಿಯ ಹಣ್ಣು ಹಂಪಲ, ಸಾತ್ವಿಕ ಫಲಹಾರ ಇರುವುದು.
ರುದ್ರಾಭಿಷೇಕ: ಫೆ. 18 ರಂದು ಸಂಜೆ 5 ರಿಂದ ರಾತ್ರಿ 8 ರವರೆಗೆ ಮತ್ತು ರಾತ್ರಿ 11 ರಿಂದ ಮಧ್ಯರಾತ್ರಿ 1 ರ ವರೆಗೆ ಹಾಗೂ ಫೆ. 20 ಅಮವಾಸೆ ದಿನ ನಸುಕಿನ 4 ರಿಂದ ಬೆಳಿಗ್ಗೆ 8 ರ ವರೆಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ಪರಿಣಿತ ವೈದಿಕರಿಂದ ಜರುಗುವುದು ಎಂದು ಪೀಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.