ಮದ್ಲೂರು ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ : ಜಾತ್ರಾ ಕಾರ್ಯಕ್ರಮಗಳು ಫೆ.17 ರಿಂದ
ಯುವ ಭಾರತ ಸುದ್ದಿ ಬೆಳಗಾವಿ:
ಯರಗಟ್ಟಿ ತಾಲೂಕಿನ ಮದ್ಲೂರು ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ.17 ರಿಂದ ಫೆ.19 ರ ವರೆಗೆ ವಿವಿಧ ಸಾಂಸ್ಕೃತಿಕ, ಹಾಗೂ ಕ್ರೀಡಾ ಕಾರ್ಯಕ್ರಮ ಜರುಗಲಿವೆ.
ಫೆ.18 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಕಲ್ಮೇಶ್ವರ ಗದ್ದುಗೆ ಪೂಜೆ, ವೀಣಾ ಪೂಜೆಯೊಂದಿಗೆ ಪ್ರವಚನ, ಭಜನಾ ಮಂಡಳಿಯಿಂದ ಭಜನಾ ಹಾಗೂ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿವೆ.
ಫೆ.18 ರಂದು ಬೆಳಿಗ್ಗೆ 6.30 ರಿಂದ ಶ್ರೀ ಕಲ್ಮೇಶ್ವರ ರುದ್ರಾಭಿಷೇಕ, ಶ್ರೀ ಶಿವರುದ್ರಯ್ಯ ಸ್ವಾಮಿಗಳ ಗದ್ದುಗೆ ಪೂಜೆ ನಡೆಯಲಿದೆ ಬಳಿಕ ಭಜನಾ ಮೇಳ ಜನಪ್ರಿಯ ಡೊಳ್ಳಿನ ಪದಗಳ ಕಾರ್ಯಕ್ರಮಗಳು ನಡೆಯಲಿವೆ.
ಫೆ.19 ರಂದು ಬೆಳಿಗ್ಗೆ 4 ರಿಂದ 10 ಗಂಟೆಯವರೆಗೆ ಶ್ರೀ ಕಲ್ಮೇಶ್ವರ ವಿಗ್ರಹದ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾ ಸ್ವಾಮಿಗಳ ಆಶೀರ್ವಚನದೊಂದಿಗೆ ಸಾಮೂಹಿಕ ವಿವಾಹಗಳು ನಡೆಯಲಿವೆ. ನಂತರ ಸಾರ್ವಜನಿಕರಿಗೆ ಮಹಾ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಇರಲಿದೆ.
ಅದೇ ದಿನ ಸಂಜೆ 4 ಗಂಟೆಗೆ ಶ್ರೀ ಕಲ್ಮೇಶ್ವರ ರಥೋತ್ಸವ ನಡೆಯಲಿದೆ. ರಾತ್ರಿ 10.30 ಗಂಟೆಗೆ ಸುಂದರ ಸಾಮಾಜಿಕ ನಾಟಕಗಳಾದ ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ ಹಾಗೂ ಮಾಂಗಲ್ಯ ಉಳಿಸಿದ ಮೈದುನ ನಾಟಕ ಪ್ರದರ್ಶನಗೊಳ್ಳಲಿವೆ.
ಮದ್ಲೂರು ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವಕ್ಕೆ ಶ್ರೀ ಕಲ್ಮೇಶ್ವರ ಸರ್ವಧರ್ಮ ಸದ್ಭಕ್ತ ಮಂಡಳಿಯಿಂದ ಸರ್ವರಿಗೂ ಸ್ವಾಗತ ಕೋರಲಾಗಿದೆ.