Breaking News

ಉತ್ತಮ ಸಂಸ್ಕಾರದಿಂದ ಜಗತ್ತಿನಾದ್ಯಂತ ಖ್ಯಾತಿ ಪಡೆದ ಭಾರತ-ಎಮ್.ಡಿ.ಚುನಮರಿ!!

Spread the love

ಉತ್ತಮ ಸಂಸ್ಕಾರದಿಂದ ಜಗತ್ತಿನಾದ್ಯಂತ ಖ್ಯಾತಿ ಪಡೆದ ಭಾರತ-ಎಮ್.ಡಿ.ಚುನಮರಿ!!

ಗೋಕಾಕ: ಪ್ರಾಚೀನ ಭಾರತ ಕರ್ಮಭೂಮಿಯಾಗಿದ್ದು, ಉತ್ತಮ ಸಂಸ್ಕಾರದಿಂದಾಗಿ ಇಡೀ ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗೀಯ ಸಂಚಾಲಕ ಎಂ ಡಿ ಚುನಮರಿ ಹೇಳಿದರು. 

ಶುಕ್ರವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನ್ ಗೋಕಾಕ ಇದರ 2ನೇ ವಾರ್ಷಿಕೋತ್ಸವ ನಿಮಿತ್ಯ ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ ಮತ್ತು ನೇತ್ರ ಚಿಕಿತ್ಸೆಗೆ ಒಳಗಾದ ಫಲಾನುಭವಿಗಳಿಗೆ ರಕ್ತದಾನ ಮಾಡಿದವರಿಗೆ ನಡೆದ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯರಲ್ಲಿ ಪರೋಪಕಾರ ಪ್ರವೃತ್ತಿ ಹುಟ್ಟಿನಿಂದಲೇ ಬರುತ್ತಿದ್ದು, ಅಂತಹ ಕಾರ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು ತೊಡಗಿ ದೀನ ದಲಿತರ, ಬಡವರ ಉದ್ದಾರಕ್ಕಾಗಿ ಶ್ರಮಿಸುತ್ತಿವೆ. ಇಲ್ಲಿನ ಶ್ರೀ ಸಾಯಿ ಸಮರ್ಥ ಫೌಂಡೇಶನ್ ಹಲವು ಸಮಾಜಮುಖಿ ಕಾರ್ಯಗಳನ್ನು ಮಾದರಿಯಾಗಿ ಮಾಡುತ್ತಿದೆ. ಈ ಸಂಸ್ಥೆಯು ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಹೆಮ್ಮರವಾಗಿ ಬೆಳೆಯಲೆಂದು ಹಾರೈಸಿದರು.
ಸಂಸ್ಥೆಯ ಸತೀಶ ಚಿಪ್ಪಲಕಟ್ಟಿ ಮಾತನಾಡಿ ಈಗಾಗಲೇ ಸುಮಾರು ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಕಲ್ಯಾಣ ಮಂಟಪವನ್ನು ನಿರ್ಮಿಸಿ ಉಚಿತವಾಗಿ ಜನರಿಗೆ ನೀಡಲಾಗುವುದು. ಸಾಯಿ ಮಂದಿರದಲ್ಲಿ ಪ್ರತಿದಿನ ಅನ್ನದಾಸೋಹ ಹಾಗೂ ಶಿರಡಿ ಸಾಯಿಬಾಬಾ ದರ್ಶನಕ್ಕೆ ಭಕ್ತರಿಗೆ ಒಂದು ಬಸ್ ಉಚಿತವಾಗಿ ವ್ಯವಸ್ಥೆ ಮಾಡುವ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆಯಿಂದ ಮಾಡಲು ಉದ್ದೇಶಿಸಿಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವದರ ಜೊತೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದರು. ವೇದಿಕೆಯ ಮೇಲೆ ವಿಶ್ವನಾಥ್ ಬನಹಟ್ಟಿ, ನಿವೃತ್ತ ಶಿಕ್ಷಕರಾದ ಬಿ.ಕೆ ಕುಲಕಣ ್ , ಎಂ.ಬಿ ಸಾಯನ್ನವರ, ಎಸ್.ಕೆ ಹುಲ್ಯಾಳ, ಡಾ.ಕಿರಣ ಪೂಜಾರ, ಡಾ.ಪ್ರೀತಿ ಚೌಧರಿ, ಡಾ.ಸಚಿನ ವಿಭೂತಿ, ಪ್ರಕಾಶ ಚೌಧರಿ, ಬಸವರಾಜ ಉಣ ್ಣ, ಫೌಂಡೇಶನ್ ಅಧ್ಯಕ್ಷ ಅರುಣ ಸಾಲಳ್ಳಿ ಇದ್ದರು. ಆನಂದ ಪಾಟೀಲ ಸ್ವಾಗತಿಸಿದರು, ಶೈಲಾ ಕೊಕ್ಕರಿ ನಿರೂಪಿಸಿದರು, ಶ್ರೀನಾಥ ಗಾಡವಿ ವಂದಿಸಿದರು.

 


Spread the love

About Yuva Bharatha

Check Also

ಗೋಕಾಕ ಮತಕ್ಷೇತ್ರದಲ್ಲಿ ಝಣಝಣ ಕಾಂಚಾಣ ಸದ್ದು, ಕಾಂಗ್ರೇಸ್ ಅಭ್ಯರ್ಥಿಯಿಂದ ಮತದಾರರಿಗೆ ಹಣದ ಆಮಿಷ.!

Spread the loveಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.! ಗೋಕಾಕ: ಲೋಕಸಭಾ ಚುನಾವಣೆ ಇನ್ನು …

Leave a Reply

Your email address will not be published. Required fields are marked *

10 − two =