Breaking News

ಜೂಜಾಟ ೧೨ಜನರ ಬಂಧನ, ಒರ್ವ ಆರೋಪಿ ಪರಾರಿ ಪೋಲಿಸರ ಭರ್ಜರಿ ಭೇಟೆ.!

Spread the love

ಜೂಜಾಟ ೧೨ಜನರ ಬಂಧನ, ಒರ್ವ ಆರೋಪಿ ಪರಾರಿ ಪೋಲಿಸರ ಭರ್ಜರಿ ಭೇಟೆ.!


ಗೋಕಾಕ: ಅಂದರ್ ಬಾಹರ್ ಜೂಜಾಟದಲ್ಲಿ ತೋಡಗಿದ್ದವರ ಮೇಲೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ೧೨ ಜನರನ್ನು ವಶಕ್ಕೆ ಪಡೆದುಕೊಂಡಿದ್ದು ಒರ್ವ ಆರೋಪಿ ಪರಾರಿಯಾಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಶುಕ್ರವಾರದಂದು ತಾಲೂಕಿನ ಕೊಣ್ಣೂರು ಪಟ್ಟಣದ ರಸ್ತೆಯ ಪಕ್ಕದಲ್ಲಿ ದಾಳಿ ನಡೆಸಿದ ಪೊಲೀಸರು, ಇಸ್ಪೀಟ್ ಆಟದಲ್ಲಿ ತೋಡಗಿದ್ದ ಆನಂದ ಸಿದ್ದಪ್ಪ ಕಾಂಬಳೆ, ರಮೇಶ ಹಣಮಂತ ಪೂಜೇರಿ, ಶ್ರೀಕಾಂತ ಚಂದ್ರಯ್ಯ ಹಿರೇಮಠ, ನಾಗರಾಜ ರಾಯಪ್ಪ ಖಾನಪ್ಪನವರ, ಶಿವಾನಂದ ಬಸವಣ್ಣಿ ಧಾರೋಜಿ, ದುರದುಂಡೆಪ್ಪ ರಂಗಪ್ಪ ಸಂಪಗಾAವಿ, ರವಿ ಮಲ್ಲಿಕಾರ್ಜುನ ಅಂಕಲಗಿ, ಮಹೇಶ ಶಿದ್ರಾಮ ಶೀರಹಟ್ಟಿ, ಬಾಪು ದೀಲಿಪ ಅಂಕಲಗಿ, ಕರೆಪ್ಪ ಯಲ್ಲಪ್ಪ ಮಾಳಗಿ, ಬಸವರಾಜ ಗೋಪಾಲ ಅಪ್ಪುಗೋಳ, ಆಸೀಫ ಅಬ್ದುಲರಜಾಕ ನಾಯಿಕ ಸೇರಿ ಒಟ್ಟು ೧೨ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮಾರುತಿ ಪ್ರಭು ಮಗೇನ್ನವರ ಪರಾರಿಯಾಗಿದ್ದಾನೆ. ಬಂಧಿತರಿAದ ೧,೮೫,೦೦೦/- ರೂಪಾಯಿ ನಗದು ಹಣ, ೧೧ ಮೊಬೈಲ್ ಫೋನ್, ೮ ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವೀರೇಶ ತಿ ದೊಡಮನಿ ಹಾಗೂ ಪಿಎಸ್‌ಐ ನಾಗನಗೌಡ ಕಟ್ಟಿಮನಿಗೌಡ್ರ ಹಾಗೂ ಡಿಸಿಆರ್‌ಐ ಪಿಎಸ್‌ಐ ಬಸಗೌಡ ಜೆ ಪಾಟೀಲ ಮತ್ತು ಸಿಇಎನ್ ಪೊಲೀಸ್ ಠಾಣೆಯ ಎಎಸ್‌ಐ ಎ ಹೆಚ್ ಭಜಂತ್ರಿ, ಸಿಬ್ಬಂಧಿಗಳಾದ ಎಸ್ ಆ ಮಾಳಗಿ, ಬಿ ಎಸ್ ಚಿನ್ನಿಕುಪ್ಪಿ, ಎನ್ ಆರ್ ಘಡೆಪ್ಪನವರ, ಜಿ ಎಸ್ ಲಮಾಣಿ, ಎಸ್ ಐ ಭಂಡಿ ಸೇರಿದಂತೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

3 + five =