ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ : ಹಿಂಡಲಗಾ ಜೈಲು ಮೇಲೆ ಮಹಾ ಪೊಲೀಸರ ದಾಳಿ
ಯುವ ಭಾರತ ಸುದ್ದಿ ಬೆಳಗಾವಿ :
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಮಹಾರಾಷ್ಟ್ರದ ಪೊಲೀಸರು ಇಲ್ಲಿನ ಹಿಂಡಲಗಾ ಜೈಲಿನ ಮೇಲೆ ದಾಳಿ ನಡೆಸಿ ಕೆಲ ಮಾಹಿತಿ ಕಲೆ ಹಾಕಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಹಿಂಡಲಗಾ ಜೈಲಿನಲ್ಲಿರುವ ಕೈದಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಹಾಗೂ ಸಂದೇಶ ಕಳಿಸಿದ್ದ. ಕರೆ ಮಾಡಿದ್ದ ಈ ಮೊಬೈಲ್ ಸಂಖ್ಯೆ ಮತ್ತೆ ಬೆಳಗಾವಿ ಹಿಂಡಲಗಾ ಜೈಲು ವ್ಯಾಪ್ತಿಯ ಟಾವರ್ ಲೋಕೇಶನ್ ತೋರಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮೀರಜ್‌ನ ಪೊಲೀಸರು ಗುರುವಾರ ತಡ ರಾತ್ರಿ 11 ಹಿಂಡಲಗಾ ಜೈಲಿಗೆ ತಲುಪಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂದೇಶ ಹಾಗೂ ಕರೆ ಮಾಡಿದ್ದ ಮೊಬೈಲ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ತಮ್ಮ ‘ಗೂಗಲ್ ಪೇ’ಗೆ 10 ಕೋಟಿ ಕಳಿಸಿ, ಪೊಲೀಸರಿಗೆ ಹೇಳಬೇಡಿ’ ಎಂದು ಬೆಳಗಾವಿ ಜೈಲಿನಲ್ಲಿರುವ ಕುಖ್ಯಾತ ಆರೋಪಿಯೊಬ್ಬ ಮಂಗಳವಾರ ಬೆಳಗ್ಗೆ ಮತ್ತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಎರಡನೇ ಬಾರಿಗೆ ದೂರವಾಣಿ ಕರೆ ಮಾಡಿದ್ದಾನೆ. ಕರೆ ಮಾಡಿದ್ದ ಆರೋಪಿಯ ಹೆಸರು ಜಯೇಶ್ ಅಲಿಯಾಸ್ ಜಯೇಶ್ ಕಾಂತ. ಈ ಹಿಂದೆ ಜನವರಿ 14, 2023ರಂದು ಗಡ್ಕರಿ ಅವರ ಕಚೇರಿಗೆ ಮೂರು ಕರೆಗಳನ್ನು ಈತ ಮಾಡಿದ್ದ ಎನ್ನಲಾಗಿದೆ.
ಆ ವೇಳೆ ತಾನು ಡಿ ಗ್ಯಾಂಗ್‌ನ ಸದಸ್ಯ ಎಂದು 100 ಕೋಟಿಗೆ ಬೇಡಿಕೆ ಇಟ್ಟಿದ್ದ. ಆದರೆ ಈಗ ಬೆಳಗಾವಿ ಜೈಲಿನಿಂದ ಈ ಕರೆ ಬಂದಿರುವುದು ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ 10.53 ಮತ್ತು 11.08ಕ್ಕೆ ಕೇಂದ್ರ ಸಚಿವ ಗಡ್ಕರಿ ಅವರಿಗೆ ಮತ್ತೆ ಬೆದರಿಕೆ ಕರೆಗಳು ಬಂದಿವೆ. ಆ ಬಳಿಕ ಜಯೇಶ್ ರಜಿಯಾ ಎಂಬ ಬಾಲಕಿಯ ಮೊಬೈಲ್ ನಂಬರ್ ನೀಡಿ ಗೂಗಲ್ ಪೇ ಮೂಲಕ 10 ಕೋಟಿ ರೂ. ನೀಡಿ. ತಾನು ದಾವೂದ್ ಗ್ಯಾಂಗ್ ಸದಸ್ಯ ಎಂದು ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ.
ಸ್ಥಳ ಪರಿಶೀಲನೆ ನಡೆಸಿದಾಗ ಅದು ಬೆಳಗಾವಿ ಹಿಂಡಲಗಾ ಜೈಲು ಎಂದು ತಿಳಿದುಬಂದಿದೆ. ಕೇಂದ್ರೀಯ ಸಂಸ್ಥೆಗಳು ಮತ್ತು ನಗರ ಪೊಲೀಸರು ಸಚಿವ ಗಡ್ಕರಿ ಅವರ ಭದ್ರತೆಯ ಮೇಲೆ ನಿಗಾ ಇರಿಸಿದ್ದು, ಅಗತ್ಯವಿರುವ ಭದ್ರತೆಯನ್ನು ಹೆಚ್ಚಿಸಿದ್ದಾರೆ.