Breaking News

ಶ್ರವಣಬೆಳಗೊಳಕ್ಕೆ ಉತ್ತರಾಧಿಕಾರಿ ನೇಮಕ

Spread the love

ಶ್ರವಣಬೆಳಗೊಳಕ್ಕೆ ಉತ್ತರಾಧಿಕಾರಿ ನೇಮಕ

ಯುವ ಭಾರತ ಸುದ್ದಿ ಶ್ರವಣಬೆಳಗೊಳ :           ಶ್ರವಣಬೆಳಗೊಳ ಜೈನ ಮಠಕ್ಕೆ ಉತ್ತರಾಧಿಕಾರಿಯಾಗಿ ಆಗಮ ಶಾಸ್ತ್ರಿ ಇಂದ್ರ ಜೈನ್( 22) ನೇಮಕಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದ ಆಗಮ ಶಾಸ್ತ್ರಿ ಇಂದ್ರ ಜೈನ್ ಬಿಕಾಂ ಪದವೀಧರರು. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಶ್ರವಣಬೆಳಗೊಳ ಜೈನಮಠದ ಉತ್ತರಾಧಿಕಾರಿ ನೇಮಕದ ಚರ್ಚೆ ನಡೆದಿತ್ತು.

ಜೈನಮಠಕ್ಕೆ ಇಂದ್ರ ವಂಶಸ್ಥರೇ ಸ್ವಾಮೀಜಿಯಾಗುವ ಪರಂಪರೆ ಇರುವುದರಿಂದ ವಿವಿಧ ಜೈನ ಮಠದ ಸ್ವಾಮೀಜಿಯವರು ಶ್ರವಣಬೆಳಗೊಳ ದಿಗಂಬರ ಜೈನ ಮಠದ ಟ್ರಸ್ಟಿಗಳು, ಜೈನ ಸಮುದಾಯದ ಮುಖಂಡರು ಚರ್ಚಿಸಿ ನೇಮಕ ನಿರ್ಧಾರ ಕೈಗೊಂಡಿದ್ದರು. ನಂತರ ಆಗಮಶ್ರೀ ಇಂದ್ರ ಜೈನ್ ಅವರಿಗೆ ಕ್ಷುಲಕ ದೀಕ್ಷೆ ನೀಡಲಾಗಿತ್ತು. 20 ದಿನಗಳಿಂದ ಮಠದ ಪರಂಪರೆ, ಆಚಾರ- ವಿಚಾರ, ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಪೀಠಾರೋಹಣದ ನಂತರ ನೂತನ ನಾಮಾಂಕಿತವಾಗಲಿದ್ದು ಪೀಠಾರೋಹಣದ ಧಾರ್ಮಿಕ ವಿಧಿ ವಿಧಾನಗಳು ಇನ್ನು ಮುಂದೆ ನಡೆಯಲಿವೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three + 7 =