Breaking News

ಅಕ್ಷಯ ತೃತೀಯ ದಿನವಾದ ಇಂದು ಸಿದ್ದಗಂಗಾ ಉತ್ತರಾಧಿಕಾರಿ ಪಟ್ಟಾಭಿಷೇಕ

Spread the love

ಅಕ್ಷಯ ತೃತೀಯ ದಿನವಾದ ಇಂದು ಸಿದ್ದಗಂಗಾ ಉತ್ತರಾಧಿಕಾರಿ ಪಟ್ಟಾಭಿಷೇಕ

ಯುವ ಭಾರತ ಸುದ್ದಿ ತುಮಕೂರು :
ರಾಜ್ಯದ ಪ್ರಸಿದ್ಧ ಲಿಂಗಾಯತ ಮಠಗಳಲ್ಲಿ ಒಂದಾಗಿರುವ ಸಿದ್ಧಗಂಗಾ ಮಠಕ್ಕೆ ಇಂದು ಸ್ನಾತಕೋತರ ಪದವೀಧರ ಮನೋಜ್ ಕುಮಾರ್ ಅವರಿಗೆ ದೀಕ್ಷಾ ಪ್ರದಾನ ಹಾಗೂ ಪಟ್ಟಾಭಿಷೇಕ ಸಮಾರಂಭ ನೆರವೇರುತ್ತಿದೆ.

ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿವೆ.
ಸಿದ್ದಗಂಗಾ ಮಠ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸುವರು. ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳು, ಬಸವಕಲ್ಯಾಣ ಮಠಾಧ್ಯಕ್ಷ ಮಹದೇವ ಸ್ವಾಮೀಜಿ ಸಾನಿಧ್ಯ ವಹಿಸುವರು. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್ ಪಟ್ಟಾಧಿಕಾರ ಸ್ವೀಕರಿಸುವರು. ಮಾಗಡಿ ತಾಲೂಕು ಸೋಲೂರು ಹೋಬಳಿ ಕಂಚಗಲ್ ಬಂಡೆಮಠದ ಉತ್ತರಾಧಿಕಾರಿಯಾಗಿ ಹರ್ಷ ಕೆ. ಎಂ. ನೇಮಕವಾಗುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದ ಬಸವಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಗೌರೀಶ್ ಕುಮಾರ್ ಪಟ್ಟಾಧಿಕಾರ ಸ್ವೀಕರಿಸಲಿದ್ದಾರೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

8 + 15 =